ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆಗೆ ಮೈಸೂರಲ್ಲಿ 38,556 ಮಂದಿ ಹಾಜರಿ, 356 ಮಂದಿ ಗೈರು
ಮೈಸೂರು

ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆಗೆ ಮೈಸೂರಲ್ಲಿ 38,556 ಮಂದಿ ಹಾಜರಿ, 356 ಮಂದಿ ಗೈರು

June 30, 2020

ಮೈಸೂರು, ಜೂ. 29(ಎಂಟಿವೈ)- ಸೋಮವಾರ ಮೈಸೂರು ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‍ಎಸ್ ಎಲ್‍ಸಿ ವಿಜ್ಞಾನ ವಿಷಯ ಪರೀಕ್ಷೆಯಲ್ಲಿ 38,556 ಮಂದಿ ಹಾಜರಾಗಿದ್ದರು. ಈ ಮಧ್ಯೆ 356 ವಿದ್ಯಾರ್ಥಿಗಳು ಗೈರಾಗಿದ್ದರು.

ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಮೈಸೂರು ಜಿಲ್ಲೆಯಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಇದಕ್ಕೆ ಜಿಲ್ಲಾಡಳಿತ ಹಾಗೂ ಪೋಷಕರು ಸಹಕರಿಸುತ್ತಿದ್ದಾರೆ. ಈಗಾ ಗಲೇ ಮೂರು ವಿಷಯ ಪರೀಕ್ಷೆ ಸುಸೂತ್ರ ವಾಗಿ ನೆರವೇರಿದೆ. ಇಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಮೈಸೂರು ನಗರದ 48 ಸೇರಿದಂತೆ ಜಿಲ್ಲೆಯಲ್ಲಿರುವ 139 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆಯಲ್ಲಿ 38,912 ಮಂದಿ ಹಾಜರಾಗಬೇಕಿತ್ತು. ಆದರೆ ಇಂದು 38,556 ಮಂದಿ ಪರೀಕ್ಷೆಗೆ ಹಾಜರಾದರೆ, 356 ಮಂದಿ ಗೈರಾದರು.

ಬೇರೆ ಜಿಲ್ಲೆಗಳ 339 ಮಂದಿ ಮೈಸೂ ರಲ್ಲಿ ಪರೀಕ್ಷೆ ಬರೆದರೆ, ಖಾಸಗಿಯಾಗಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 774 ಅಭ್ಯರ್ಥಿಗಳಲ್ಲಿ 615 ಮಂದಿ ಪರೀಕ್ಷೆ ಬರೆದರು. ಇವರಲ್ಲೂ 159 ಮಂದಿ ಗೈರಾಗಿದ್ದರು. ವಿವಿಧ ವಸತಿ ನಿಲಯ ಗಳಲ್ಲಿರುವ 446 ಮಂದಿ ವಿಜ್ಞಾನ ಪರೀಕ್ಷೆಗೆ ಹಾಜರಾದರು.

87 ಮಂದಿಗೆ ಪ್ರತ್ಯೇಕ ಕೊಠಡಿ: ಮೈಸೂರು ಜಿಲ್ಲೆಯಲ್ಲಿ ಕಳೆದ ಒಂದು ವಾರ ದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾ ಗುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಜೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿ ರುವುದರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಕಂಟೇನ್ಮೆಂಟ್‍ನಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಶನಿವಾರ 45 ಮಂದಿ ಕಂಟೇನ್ಮೆಂಟ್ ಜೋನ್‍ನಿಂದ ಬಂದಿದ್ದರೆ, ಇಂದು ನಡೆದ ವಿಜ್ಞಾನ ಪರೀಕ್ಷೆ ಬರೆಯಲು ಕಂಟೇನ್ಮೆಂಟ್ ಜೋನ್‍ನಿಂದ 62 ವಿದ್ಯಾರ್ಥಿ ಗಳು ಆಗ ಮಿಸಿದ್ದರು. ನಿಯಮಾನುಸಾರ ಕಾಯ್ದಿರಿ ಸಲಾಗಿದ್ದ ಪ್ರತ್ಯೇಕ ಹೆಚ್ಚುವರಿ ಕೊಠಡಿ ಯಲ್ಲಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.

ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರಿನಿಂಗ್ ಮಾಡಲಾಯಿತು. ಅದರಲ್ಲಿ 25 ಮಂದಿಗೆ ಕೆಮ್ಮು, ಜ್ವರ ಇದ್ದದ್ದು ಕಂಡು ಬಂದಿತು. ಅನಾರೋಗ್ಯದ ಲಕ್ಷಣ ಕಂಡು ಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು. ಅನಾರೋಗ್ಯ ಹಾಗೂ ಕಂಟೇನ್ಮೆಂಟ್ ಜೋನ್‍ನಿಂದ ಬಂದ ಒಟ್ಟು 87 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಿ, ಇತರೆ ವಿದ್ಯಾರ್ಥಿಗಳ ಹಿತ ಕಾಯಲು ಕ್ರಮ ಕೈಗೊಳ್ಳಲಾಯಿತು.

ಪೋಷಕರನ್ನು ಕಾಡುತ್ತಿದೆ ಆತಂಕ: ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ತಮ್ಮ ಮಕ್ಕಳನ್ನು ಪರೀಕ್ಷೆ ಬರೆ ಯಲು ಕಳುಹಿಸಬೇಕೇ ಅಥವಾ ಬೇಡವೇ ಎನ್ನುವ ಜಿಜ್ಞಾಸೆಯಲ್ಲಿ ಕೆಲವು ಪೋಷಕ ರಿದ್ದರೆ, ಕೆಲವರು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಧೈರ್ಯ ತುಂಬುತ್ತಿ ದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕೊರೊನಾ ಸೋಂಕು ಹರಡದಂತೆ ಕಟ್ಟೆ ಚ್ಚರ ವಹಿಸಲಾಗಿದ್ದು, ಸ್ಯಾನಿಟೈಸ್ ಮಾಡ ಲಾಗಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಮಾರ್ಕ್ ಮಾಡಲಾಗಿದ್ದು, ಪರೀಕ್ಷಾ ಕೇಂದ್ರ ಪ್ರವೇಶ ಹಾಗೂ ಪರೀಕ್ಷಾ ಕೊಠಡಿ ಪ್ರವೇಶದ ವೇಳೆ ಎರಡು ಬಾರಿ ವಿದ್ಯಾರ್ಥಿ ಗಳಿಗೆ ಸ್ಯಾನಿಟೈಸರ್ ಹಾಕಿ ಕೈ ಸ್ವಚ್ಛಗೊಳಿಸಿ ಕೊಳ್ಳಲು ಸೂಚಿಸಲಾಗುತ್ತಿತ್ತು. ಅಲ್ಲದೆ ಎಲ್ಲಾ ಕೇಂದ್ರಗಳಲ್ಲೂ ಮಾಸ್ಕ್ ಇಡಲಾ ಗಿತ್ತು. ಕೆಲವು ವಿದ್ಯಾರ್ಥಿಗಳು ಮಾಸ್ಕ್ ಮರೆತು ಬಂದಿದ್ದರು. ಅಂತಹವರಿಗೆ ಪರೀಕ್ಷಾ ಕೇಂದ್ರದಲ್ಲೇ ಹೊಸ ಮಾಸ್ಕ್ ವಿತರಿಸಲಾಯಿತು.

Translate »