ರೈತರಿಂದ ಬೈಕ್ ರ್ಯಾಲಿ, ಬಾರುಕೋಲು ಚಳುವಳಿ
ಮೈಸೂರು

ರೈತರಿಂದ ಬೈಕ್ ರ್ಯಾಲಿ, ಬಾರುಕೋಲು ಚಳುವಳಿ

June 30, 2020

ಮೈಸೂರು, ಜೂ.29(ಪಿಎಂ)- ಕರ್ನಾ ಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಪ್ರಸ್ತಾಪ ಕೈಬಿಡಬೇಕು. ಅಲ್ಲದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬೈಕ್ ರ್ಯಾಲಿ ನಡೆಸಿ, ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬಾರುಕೋಲು ಚಳುವಳಿ ನಡೆಸಿದರು.

ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ರೈತರು ನೂರಕ್ಕೂ ಹೆಚ್ಚು ಬೈಕ್‍ಗಳಲ್ಲಿ ಮೈಸೂರಿನ ಗನ್‍ಹೌಸ್ ಬಳಿ ಯಿಂದ ರ್ಯಾಲಿ ಆರಂಭಿಸಿ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಹುಣಸೂರು ರಸ್ತೆ ಮೂಲಕ ಪ್ರಾದೇ ಶಿಕ ಆಯುಕ್ತರ ಕಚೇರಿ ತಲುಪಿದರು.

ಈ ವೇಳೆ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣ ಪ್ರವೇಶಿಸಲು ಮುಂದಾದ ರೈತ ರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ದಾಗ, ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಎಸಿಪಿ ಶಶಿಧರ್ ರೈತರನ್ನು ಸಮಾಧಾನ ಪಡಿಸಿ ಪ್ರಾದೇಶಿಕ ಕಚೇರಿ ಮುಂಭಾಗ ದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿ ದರು. ಬಳಿಕ ಅಲ್ಲಿ ಬಾರ್‍ಕೋಲುಗಳನ್ನು ಹಿಡಿದು ಧರಣಿ ನಡೆಸಿದ ರೈತರು, ಸರ್ಕಾ ರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಗುಲಾಮರಂತೆ ವರ್ತಿಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲು ಎಲ್ಲಾ ರೈತ ಸಂಘ ಟನೆಗಳು ಒಂದಾಗಿ ಪ್ರತಿಧ್ವನಿಸಬೇಕು. ಆಗ ಮಾತ್ರ ಸರ್ಕಾರ ಮಣಿಯಲು ಸಾಧ್ಯ ಎಂದರು.

ಸರ್ಕಾರ ರೈತ ವಿರೋಧಿಯಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರೆ ರಾಜ್ಯಾದ್ಯಂತ ರೈತರು ಉಗಿಯುವ ಚಳು ವಳಿ ನಡೆಸಬೇಕಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯನ್ನು ಹಂತ ಹಂತವಾಗಿ ಶ್ರೀಮಂ ತರ ಕೈಗೆ ಒಪ್ಪಿಸಲು ಇಂತಹ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೀಗಾಗಿ ರೈತರು ಸದಾ ಎಚ್ಚರದಿಂದ ಇದ್ದು, ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ರಾಜ್ಯ ರೈತ ಸಂಘದ ಗುರುಪ್ರಸಾದ್ ಮಾತನಾಡಿ, ಇಂದಿನ ಸರ್ಕಾರ ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಬಹು ರಾಷ್ಟ್ರೀಯ ಕಂಪನಿಗಳ ಕೈಗಳಿಗೆ ಇಡೀ ವ್ಯವಸ್ಥೆ ಒಪ್ಪಿಸಲು ಮುಂದಾಗಿದೆ. ಕಂದಾಯ ಸಚಿ ವರು ರೈತನ ಮಗನಾಗಿದ್ದರೂ ಅಧಿಕಾರದ ಒತ್ತಡಕ್ಕೆ ಮಣಿದು ರೈತರನ್ನು ನಾಶ ಮಾಡುವ ಕಾಯ್ದೆ ಜಾರಿಗೆ ಮುಂದಾಗಿ ದ್ದಾರೆ ಎಂದು ಕಿಡಿಕಾರಿದರು.

ಬಳಿಕ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಗಾಯಿತ್ರಿಯವರಿಗೆ ಮನವಿ ಸಲ್ಲಿಸ ಲಾಯಿತು. ಇವರ ಮೂಲಕ ಭೂ ಸುಧಾ ರಣಾ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕ ದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾ ಯಿತು. ಸಾಮೂಹಿಕ ನಾಯಕತ್ವದ ರೈತ ಸಂಘದ ವಿದ್ಯಾಸಾಗರ್, ಅಖಂಡ ಕರ್ನಾಟಕ ರೈತ ಸಂಘದ ಸುಧೀರ್ ಕುಮಾರ್, ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರೈತ ಮುಖಂಡರಾದ ಕಿರಗಸೂರು ಶಂಕರ್, ರಾಮೇಗೌಡ ಮತ್ತಿತರರು ಚಳು ವಳಿಯಲ್ಲಿ ಪಾಲ್ಗೊಂಡಿದ್ದರು.