ಕಾರ್ಪೊರೇಟರ್ ಅಳಿಯನ ಹತ್ಯೆ ಯತ್ನ ಪ್ರಕರಣ ತಲೆಮರೆಸಿಕೊಂಡಿದ್ದ ನಾಲ್ವರ ಸೆರೆ
ಮೈಸೂರು

ಕಾರ್ಪೊರೇಟರ್ ಅಳಿಯನ ಹತ್ಯೆ ಯತ್ನ ಪ್ರಕರಣ ತಲೆಮರೆಸಿಕೊಂಡಿದ್ದ ನಾಲ್ವರ ಸೆರೆ

June 30, 2020

ಮೈಸೂರು, ಜೂ. 29(ಆರ್‍ಕೆ)- ಮೈಸೂರಿನ ರಾಜೀವ್‍ನಗರದ ಅಲ್ ಬದರ್ ಸರ್ಕಲ್ ಬಳಿ ಕಾರ್ಪೊರೇಟರ್ ಅಯಾಜ್ ಪಾಷಾ (ಪಂಡು) ಅಳಿಯ ಶಹಬಾಜ್ ಕೊಲೆ ಯತ್ನ ನಡೆಸಿ, ತಲೆ ಮರೆಸಿಕೊಂಡಿದ್ದ ನಾಲ್ವರನ್ನು ಉದಯ ಗಿರಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ರಾಜೀವ್‍ನಗರ ನಿವಾಸಿ ಗಳಾದ ಸಾಹಿಲ್, ಸುಹೇಲ್, ಲಡ್ಡಾ ಕಲೀಂ ಮತ್ತು ಸುಖ್ಖಾ ಹಬೀಬ್ ಬಂಧಿತ ಆರೋಪಿಗಳು. ಕಳೆದ ಮೇ 10ರಂದು ಮೈಸೂರಿನ ರಾಜೀವ್‍ನಗರದ ಅಲ್ ಬದರ್ ಸರ್ಕಲ್ ಸಮೀಪ ಹಳೇ ವೈಷಮ್ಯ ದಿಂದ ಕಾರ್ಪೊರೇಟರ್ ಅಯಾಜ್ ಪಾಷಾ (ಪಂಡು) ಅವರ ಅಳಿಯ ಶಹಬಾಜ್ ಮೇಲೆ ಏಳು ಮಂದಿ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿದ್ದ ಉದಯಗಿರಿ ಠಾಣೆ ಪೊಲೀ ಸರು ಮೇ 29ರಂದು ಮೂವರನ್ನು ಬಂಧಿಸಿ ದ್ದರು. ಪ್ರಮುಖ ಆರೋಪಿ ಸಾಹಿಲ್ ಸೇರಿದಂತೆ ಇತರ ನಾಲ್ವರು ತಲೆಮರೆಸಿ ಕೊಂಡಿದ್ದರು. ಅವರ ಪತ್ತೆಗೆ ಶೋಧ ನಡೆ ಸುತ್ತಿದ್ದ ಪೊಲೀಸರು, ಜೂನ್ 25ರಂದು ಬೆಂಗಳೂರಿನ ಆವಲಹಳ್ಳಿಯಲ್ಲಿ ಸಾಹಿಲ್ ನನ್ನು ಬಂಧಿಸಿ ಆತನ ಮಾಹಿತಿಯ ಜಾಡು ಹಿಡಿದು ಇತರ ಮೂವರನ್ನೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಬಂಧಿತ ಆರೋಪಿಗಳನ್ನು ಕೋವಿಡ್-19 ಟೆಸ್ಟ್‍ಗೊಳಪಡಿಸಿದ ನಂತರ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡರ ನಿರ್ದೇ ಶನದಂತೆ ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ್ ಅವರ ಮೇಲ್ವಿಚಾರಣೆ ಯಲ್ಲಿ ನಡೆದ ಪತ್ತೆ ಕಾರ್ಯಾಚರಣೆ ಯಲ್ಲಿ ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಎನ್.ಎಂ. ಪೂಣಚ್ಚ, ಸಬ್‍ಇನ್ಸ್‍ಪೆಕ್ಟರ್ ಜಯಕೀರ್ತಿ, ಮದನ್‍ಕುಮಾರ್, ಸಿಬ್ಬಂದಿಗಳಾದ ಪುಟ್ಟರಾಜು, ಮೋಹನ್ ಕುಮಾರ್, ವಿನೋದ್ ರಾಥೋಡ್, ರಾಜೇಶ್, ವಿನಯ್, ಸಮೀರ್, ರವಿ, ಪ್ರಶಾಂತನಾಯ್ಕ, ಗೋಪಾಲ್, ಶಿವ ರಾಜಪ್ಪ ಅವರು ಪಾಲ್ಗೊಂಡಿದ್ದರು.

Translate »