ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯಕ್ಕೆ ಆನ್‍ಲೈನ್ ಮೂಲಕ ಸಿಎಂ ಚಾಲನೆ
ಮೈಸೂರು

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯಕ್ಕೆ ಆನ್‍ಲೈನ್ ಮೂಲಕ ಸಿಎಂ ಚಾಲನೆ

June 30, 2020

ಮೈಸೂರು, ಜೂ.29(ಆರ್‍ಕೆಬಿ)- ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೋವಿಡ್-19 ಪ್ರಯೋಗಾಲಯ ಸ್ಥಾಪಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಆನ್ ಲೈನ್ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಅನ್ನ, ಅರಿವು, ಆರೋಗ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಜೆಎಸ್‍ಎಸ್ ಸಂಸ್ಥೆ ಕೋವಿಡ್ ಪರೀಕ್ಷಾ ಕೇಂದ್ರ ತೆರೆದು ಕೊರೊನಾ ನಿಯಂತ್ರಣಕ್ಕೆ ಸಹಕರಿಸುತ್ತಿರುವುದಕ್ಕೆ ಬಿ.ಎಸ್.ಯಡಿಯೂರಪ್ಪ, ಜೆಎಸ್‍ಎಸ್ ಸಂಸ್ಥೆಯನ್ನು ಅಭಿನಂದಿಸಿದರು.

ಇಂದು ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಜೆಎಸ್‍ಎಸ್ ಸಂಸ್ಥೆ ಕೋವಿಡ್ ಪ್ರಯೋಗಾಲಯ ತೆರೆದು ಸರ್ಕಾರ ದೊಂದಿಗೆ ಸಹಕರಿಸಿದೆ ಎಂದರು. ಈ ನಿಟ್ಟಿ ನಲ್ಲಿ ಜೆಎಸ್‍ಎಸ್ ಆಸ್ಪತ್ರೆ ರಾಜ್ಯಕ್ಕೆ ಮಾದರಿ ಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಆನ್‍ಲೈನ್ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ವೈದ್ಯಕೀಯ ಸಚಿವ ಡಾ.ಸುಧಾಕರ್ ಮಾತನಾಡಿ, ಮೈಸೂರಿ ನಲ್ಲಿ ಸರ್ಕಾರ ಹಾಗೂ ಜೆಎಸ್‍ಎಸ್ ಸಂಸ್ಥೆ ಯದ್ದು ಸೇರಿ ಎರಡು ಕೋವಿಡ್ ಪ್ರಯೋ ಗಾಲಯಗಳಿವೆ. ಫೆಬ್ರವರಿ ತಿಂಗಳಲ್ಲಿ ಕೇವಲ 2 ಪ್ರಯೋಗಾಲಯ ಮಾತ್ರ ಇದ್ದವು. ಇಂದು ಅದು 79ಕ್ಕೆ ಏರಿದೆ. 4 ತಿಂಗಳಲ್ಲಿ ಇಷ್ಟು ಮಾಡಿದ್ಧೇವೆ. ಈವರೆಗೆ 6 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಿದ್ದೇವೆ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಾರ್ವಜನಿಕರು ಭಯ, ಆತಂಕ ಬಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏನೂ ಇಲ್ಲದಿ ದ್ದರೂ ಪರೀಕ್ಷೆ ಮಾಡಿಸಿಕೊಂಡರೆ ತಪ್ಪೇನೂ ಇಲ್ಲ. ಇಲ್ಲದಿದ್ದರೆ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತದೆ. ಇದರಿಂದ ಇಡೀ ಸಮಾ ಜಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ಎಲ್ಲರೂ ಪರೀಕ್ಷೆ ಮಾಡಿಸಿ ಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಮಾತನಾಡಿ, ಇಂದು ಮೊದಲಿನಂತಿಲ್ಲ. ಸ್ಥಳೀಯವಾಗಿ ಜನರಲ್ಲಿ ಕೊರೊನಾ ಸೋಂಕು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ತೆಗೆದುಕೊಂಡು ಪರೀಕ್ಷೆ ಮಾಡಿಸಿಕೊಳ್ಳು ವುದು ಸೂಕ್ತ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಪ್ರಯೋಗಾಲಯದ ನಿರ್ದೇ ಶಕ ಕಮಲ್ ದಯಾನಂದ್, ಜೆಎಸ್‍ಎಸ್ ವಿಶ್ವ ವಿದ್ಯಾನಿಲಯದ ಕುಲಪತಿ ಡಿ.ಸುರೇಶ್, ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಬಸವನಗೌಡಪ್ಪ ಇನ್ನಿತರರು ಉಪಸ್ಥಿತರಿದ್ದರು.

ತಿಂಗಳಿಗೆ 3 ಸಾವಿರ ಸ್ಯಾಂಪಲ್ ಪರೀಕ್ಷೆ: ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಇಂದು ಉದ್ಘಾ ಟನೆಗೊಂಡಿರುವ ಕೋವಿಡ್-19 ಪ್ರಯೋ ಗಾಲಯದಲ್ಲಿ 10 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನಕ್ಕೆ 90ರಂತೆ ತಿಂಗಳಿಗೆ 3 ಸಾವಿರ ಸ್ಯಾಂಪಲ್ ಪರೀಕ್ಷೆ ನಡೆಸ ಲಿದ್ದಾರೆ. ಸರ್ಕಾರ ಸೂಚಿಸಿದವರಿಗೆ ಸರ್ಕಾರ ದಿಂದಲೇ 2500 ರೂ. ಪಾವತಿಯಾಗ ಲಿದೆ. ನೇರವಾಗಿ ತಪಾಸಣೆಗೆ ಒಳಪಟ್ಟವ ರಿಗೆ ರೂ. 4500 ಶುಲ್ಕ ನಿಗದಿಪಡಿಸಲಾಗಿದೆ.

Translate »