ಉದ್ದೇಶಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಖಂಡನೆ
ಮೈಸೂರು

ಉದ್ದೇಶಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಖಂಡನೆ

June 30, 2020

ರೈತ ಸಂಘದಿಂದ ಆನಂದೂರು, ಗುಂಗ್ರಾಲ್ ಛತ್ರ ಗ್ರಾಪಂ ಎದುರು ಪ್ರತಿಭಟನೆ

ಮೈಸೂರು, ಜೂ.29(ಪಿಎಂ)- ಉದ್ದೇ ಶಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು. ಎಪಿಎಂಸಿ ತಿದ್ದು ಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗಿಕರಣ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮೈಸೂರು ತಾಲೂಕಿನ ಆನಂದೂರು ಹಾಗೂ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಕಚೇರಿಗಳ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಮೊದಲಿಗೆ ಆನಂ ದೂರು ಗ್ರಾಪಂ ಕಚೇರಿ, ನಂತರ ಗುಂಗ್ರಾಲ್ ಛತ್ರ ಗ್ರಾಪಂ ಕಚೇರಿ ಎದುರು ರೈತರು ಪ್ರತಿ ಭಟನೆ ನಡೆಸಿದರು. ಕೊರೊನಾ ಲಾಕ್ ಡೌನ್ ಸಂದರ್ಭ ದುರ್ಬಳಕೆ ಮಾಡಿಕೊಂಡು ಇಡೀ ದೇಶದ ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿ ಗಳಿಗೆ ಒಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಕಾನೂನು ಗಳಿಗೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತಂದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆಯಲ್ಲಿರುವ ದೋಷ ಗಳನ್ನು ಸರಿಪಡಿಸುವುದನ್ನು ಬಿಟ್ಟು ಕಾರ್ಪೋ ರೇಟ್ ಕುಳಗಳಿಗೆ ಅನುಕೂಲವಾಗುವಂತೆ ತಿದ್ದುಪಡಿ ತರಲಾಗಿದೆ. ಆ ಮೂಲಕ ಎಪಿಎಂಸಿ ವ್ಯವಸ್ಥೆಯನ್ನು ಇಲ್ಲದಂತೆ ಮಾಡಲು ಸರ್ಕಾರ ಹೊರಟಿದೆ. ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗಿಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆ ಮೂಲಕ ರೈತ ಸಮುದಾಯ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಡಿಯಲ್ಲಿ ವಿದ್ಯುತ್ ಸೌಲಭ್ಯ ಪಡೆದವರು ಹಾಗೂ ಸಣ್ಣಪುಟ್ಟ ಉದ್ಯಮಿಗಳನ್ನು ಸಂಕಷ್ಟಕ್ಕೆ ದೂಡಲು ಸರ್ಕಾರ ಹೊರಟಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಭೂ ಗುತ್ತಿಗೆ ಕಾಯ್ದೆಗೆ ತಿದ್ದುಪಡಿ ತಂದು ಇಡೀ ಕೃಷಿ ವ್ಯವಸ್ಥೆ ಯನ್ನು ಕಾರ್ಪೋರೇಟ್ ಕುಳಗಳಿಗೆ ಒಪ್ಪಿಸಲು ಮುಂದಾಗಿದೆ. ಹಾಗೆಯೇ ಬೀಜ ಕಾಯ್ದೆಗೆ ತಿದ್ದುಪಡಿ ತಂದು ಕಂಪನಿಗಳಿಗೆ ರತ್ನಗಂಬಳಿ ಹಾಸಲು ಉತ್ಸುಕವಾಗಿದೆ. ಅಗತ್ಯ ವಸ್ತುಗಳ ಕಾಯ್ದೆಗೆ ಈಗಾಗಲೇ ಕೇಂದ್ರ ಸರ್ಕಾರ ತಿದ್ದು ಪಡಿ ತಂದಿದ್ದು, ಇದರಿಂದ ಗ್ರಾಹಕರಿಗೆ ಹೊರೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆನಂದೂರು ಗ್ರಾಪಂ ಎದುರು ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಬಡಗಲ ಪುರ ನಾಗೇಂದ್ರ, ಎಪಿಎಂಸಿ ಕಾಯ್ದೆ ತಿದ್ದು ಪಡಿ ಮಾಡಿ ಬಂಡವಾಳಶಾಹಿಗಳು, ಕಾರ್ಪೋ ರೇಟ್ ಕಂಪನಿಗಳ ಕೈಗೆ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಸಲಾಗಿದೆ. ಮುಂದೊಂದು ದಿನ ಎಪಿಎಂಸಿ ವ್ಯವಸ್ಥೆಯನ್ನೇ ಖಾಯಂ ಆಗಿ ಸರ್ಕಾರ ಮುಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೋರಾಟದ ಹಿನ್ನೆಲೆ ಯಲ್ಲಿ ರೂಪುಗೊಂಡಿರುವ ಭೂ ಸುಧಾ ರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರ ಟಿದ್ದು, ಈ ತಿದ್ದುಪಡಿ ಬಂದರೆ ರೈತಾಪಿ ಕುಲ ಸಂಪೂರ್ಣ ನಾಶವಾಗಿ ಕೋಟು-ಬೂಟಿನ ಕಾರ್ಪೋರೇಟ್ ಕೃಷಿ ಸಂಸ್ಕøತಿ ತಲೆ ಎತ್ತಲಿದೆ. ಆಗ ಆಹಾರಕ್ಕಾಗಿ ಬಡವರು, ಮಧ್ಯಮ ವರ್ಗದ ಜನತೆ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿ ದರು. ರೈತ ಮುಖಂಡರಾದ ಸರಗೂರು ನಟ ರಾಜ್, ಹೊಸಕೋಟೆ ಬಸವರಾಜು, ಶೆಟ್ಟ ಹಳ್ಳಿ ಚಂದ್ರೇಗೌಡ, ಪಿ.ಮರಂಕಯ್ಯ, ಪ್ರಭಾ ಕರ್, ನಾಗನಹಳ್ಳಿ ವಿಜೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಾ ದ್ಯಂತ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆಗೆ ಜೂ.27ರಂದು ಚಾಲನೆ ನೀಡಲಾಗಿದೆ. ಇದರ ಅಂಗ ವಾಗಿ ಇಂದು ಮೈಸೂರು ಜಿಲ್ಲೆಯ ಆಯ್ದ ಗ್ರಾಪಂ ಕಚೇರಿ ಎದುರು ಪ್ರತಿ ಭಟನೆ ನಡೆಸಿ, ಪಿಡಿಓಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾ ಯಿತು. ನಾಳೆ (ಜೂ.30) ಮೈಸೂರು ತಾಲೂಕಿನ ಜಯಪುರ ಹಾಗೂ ಹಾರೋಹಳ್ಳಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Translate »