ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್  ಬಿಲ್ಡಿಂಗ್ ಸಂರಕ್ಷಣೆಗೆ ಯೋಗ್ಯ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಸಂರಕ್ಷಣೆಗೆ ಯೋಗ್ಯ

July 21, 2021

ಮೈಸೂರು,ಜು.20(ಪಿಎಂ)-ದೇವರಾಜ ಮಾರು ಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಸಂರಕ್ಷಣೆಗೆ ಯೋಗ್ಯ ವಾಗಿವೆ. ದೇವರಾಜ ಮಾರುಕಟ್ಟೆ ನೆಲಸಮಗೊಳಿಸು ವುದರ ವಿರುದ್ಧ ಹೈಕೋರ್ಟ್‍ನಲ್ಲಿ ಎರಡು ಪ್ರಕರಣ ಗಳಿದ್ದು, ಆದಾಗ್ಯೂ ಈ ಕಟ್ಟಡಗಳನ್ನು ನೆಲಸಮಗೊಳಿಸಿ, ಪುನರ್ ನಿರ್ಮಿಸುವ ನಗರಾಭಿವೃದ್ಧಿ ಸಚಿವರ ಹೇಳಿಕೆ ನ್ಯಾಯಾಂಗ ನಿಂದನೆ ಅಲ್ಲವೇ? ಎಂದು ಇತಿಹಾಸ, ಪರಂಪರೆ ತಜ್ಞರೂ ಆದ ಪರಂಪರೆ ಇಲಾಖೆಯ ಮೈಸೂರು ಪಾರಂಪರಿಕ ತಜ್ಞರ ಸಮಿತಿ ಸದಸ್ಯ ಪ್ರೊ. ಎನ್.ಎಸ್.ರಂಗರಾಜು ಬೇಸರ ವ್ಯಕ್ತಪಡಿಸಿದರು.

ಸೇವ್ ಹೆರಿಟೇಜ್ ಅಭಿಯಾನದ ವತಿಯಿಂದ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರು ಕಟ್ಟೆ ಕಟ್ಟಡಗಳನ್ನು ನೆಲಸಮಗೊಳಿಸದೇ ಪಾರಂಪರಿ ಕತೆಯಡಿಯೇ ನವೀಕರಿಸಲು ಒತ್ತಾಯಿಸಿ ಹಮ್ಮಿಕೊಂಡಿ ರುವ 10 ದಿನಗಳ ಸಹಿ ಸಂಗ್ರಹ ಅಭಿಯಾನಕ್ಕೆ ಮೈಸೂ ರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಎದುರು ಮಂಗಳವಾರ ಸಹಿ ಹಾಕುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ದೇವರಾಜ ಮಾರುಕಟ್ಟೆ ಸಂರಕ್ಷಣೆ ಸಂಬಂಧ ಹೈಕೋರ್ಟ್‍ನಲ್ಲಿ ಎರಡು ಪ್ರಕರಣಗಳು ದಾಖಲಾ ಗಿವೆ. ಅಲ್ಲಿಯ ವರ್ತಕರು ನ್ಯಾಯಾಲಯದ ಮೊರೆ ಹೋಗಿದ್ದರೆ, ಮೈಸೂರಿನ ಹಿರಿಯ ನಾಗರಿಕರ ತಂಡ ವೊಂದು ಕಟ್ಟಡ ಉಳಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಿದೆ. ಈ ಪಿಐಎಲ್ ಸಂಬಂಧ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಇದೆ. ನಗರಾಭಿವೃದ್ಧಿ ಸಚಿವರು ಈ ಅಂಶಗಳನ್ನು ತಿಳಿದುಕೊಳ್ಳಬೇಕಿತ್ತು. ಈ ಮಾಹಿತಿ ಅವರಿಗೆ ಇಲ್ಲವೋ ಅಥವಾ ಬೇಕೆಂದೇ ಹೇಳಿದ್ದರೋ ಗೊತ್ತಿಲ್ಲ ಎಂದು ವಿಷಾದಿಸಿದರು.
`ಎ’ ಶ್ರೇಣಿ ಕಟ್ಟಡಗಳು: 2004ರಲ್ಲಿ ಅಂದಿನ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರು ಮೈಸೂರನ್ನು `ಪಾರಂ ಪರಿಕ ನಗರ’ವೆಂದು ಸರ್ಕಾರದಿಂದ ಘೋಷಣೆ ಮಾಡಿದರು. ಅಲ್ಲದೆ, ಪರಂಪರೆ ಇಲಾಖೆ ಆರಂಭಿಸಿ, ಇದನ್ನು ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆ ಜೊತೆಗೆ ಸೇರ್ಪಡೆ ಮಾಡಿದರು. ಬಳಿಕ ಮೈಸೂರು ಪಾರಂಪರಿಕ ತಜ್ಞರ ಸಮಿತಿ ರಚನೆಯಾಗಿ ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಯಿತು. ಅದ ರಂತೆ ಮೈಸೂರಲ್ಲಿ 234 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ, ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 198 ಕಟ್ಟಡಗಳಿಗೆ ಪಾರಂಪರಿಕ ಮಾನ್ಯತೆಯನ್ನು ಸರ್ಕಾರ ನೀಡಿದೆ. ಆನಂತರ 2020ರಲ್ಲಿ ಸರ್ಕಾರ ಪಾರಂಪರಿಕ ಕಟ್ಟಡಗಳಿಗೆ ಎ, ಬಿ, ಸಿ ಮತ್ತು ಡಿ ಎಂದು ಶ್ರೇಣಿಕರಣ ನೀಡಿದ್ದು, ಅದರಂತೆ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಎರಡೂ ಕಟ್ಟಡ ಗಳು `ಎ’ ಶ್ರೇಣಿಯಲ್ಲಿವೆ ಎಂದು ತಿಳಿಸಿದರು.

ಸಮಿತಿ ಪುನರ್ ರಚನೆ ಇನ್ನೂ ಆಗಿಲ್ಲ: ಪರಂಪರೆ ಇಲಾಖೆಯ ಪಾರಂಪರಿಕ ತಜ್ಞರ ಸಮಿತಿ ಮತ್ತು ಮುಡಾ, ಟೌನ್‍ಪ್ಲಾನಿಂಗ್ ಜಂಟಿ ಆಶ್ರಯದಲ್ಲಿ ಹೈಪವರ್ ಕಮಿಟಿ ಇದ್ದು, ಈ ಎರಡನ್ನೂ ವಿಲೀನ ಗೊಳಿಸಿ, ಪುನರ್ ರಚಿಸಲು ಸರ್ಕಾರ ಆದೇಶಿಸಿ, ವರ್ಷ ಕಳೆದರೂ ಮಾಡಿಲ್ಲ. ಈ ನೂತನ ಸಮಿತಿ ವರದಿ ಪ್ರಕಾರವೇ ಪಾರಂಪರಿಕ ಕಟ್ಟಡಗಳ ಸಂಬಂಧ ನಿರ್ಧಾರ ಕೈಗೊಳ್ಳಬೇಕು. ಈಗಾಗಲೇ ಚಾಮರಾಜ ನಗರದಲ್ಲಿ ಈ ನೂತನ ಸಮಿತಿ ರಚನೆಯಾಗಿದೆ. ಆದರೆ ಮೈಸೂರಿನಲ್ಲಿ ಇನ್ನೂ ಆಗಿಲ್ಲ. ಇತ್ತೀಚಿನ ಮತ್ತೊಂದು ಸರ್ವೇ ಪ್ರಕಾರ ಮೈಸೂರಲ್ಲಿ 700 ಪಾರಂಪರಿಕ ಕಟ್ಟಡಗಳು ಇವೆ ಎಂದರು.

ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ದುರಸ್ತಿಗೊಳಿಸಿ, ಸಂರಕ್ಷಿಸಲು ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ 4 ಕೋಟಿ ರೂ. ಮತ್ತು ದೇವರಾಜ ಮಾರುಕಟ್ಟೆಗೆ 8 ಕೋಟಿ ರೂ. ಅನುದಾನ ನೀಡ ಲಾಗಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಅನುದಾನ ಉಳಿದುಕೊಂಡಿದೆ. ಆಗ ದೇವರಾಜ ಮಾರುಕಟ್ಟೆ ದುರಸ್ತಿ ವೇಳೆ ಅದರ ಒಂದು ಭಾಗ ನೆಲಕ್ಕುರುಳಿದ ತಕ್ಷಣ ಲ್ಯಾನ್ಸ್‍ಡೌನ್ ಕಟ್ಟಡ ದುರಸ್ತಿ ನಿಲ್ಲಿಸಿಬಿಟ್ಟರು. ಎರಡೂ ಕಟ್ಟಡಗಳು ಸಂರಕ್ಷಣೆ ಮಾಡಿಕೊಳ್ಳಬಹುದು. ಇವುಗಳನ್ನು ನೆಲಸಮಗೊಳಿ ಸುವುದೇ ಆದಲ್ಲಿ ಮೈಸೂರಿಗೆ ಇರುವ ಪಾರಂ ಪರಿಕ ನಗರ ಎಂಬ ಮಾನ್ಯತೆ ತೆಗೆದುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೇವ್ ಹೆರಿಟೇಜ್ ಅಭಿ ಯಾನದ ಸಂಚಾಲಕ ಕೆ.ಎಂ.ನಿಶಾಂತ್, ಮುಖಂಡ ರಾದ ಎಂ.ಎನ್.ಧನುಷ್, ಸುದರ್ಶನ್, ಪುನಿತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »