ವ್ಯವಸ್ಥಿತ ಯೋಜನೆ ರೂಪಿಸಿ ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿ
ಮೈಸೂರು

ವ್ಯವಸ್ಥಿತ ಯೋಜನೆ ರೂಪಿಸಿ ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿ

December 15, 2020

ಮೈಸೂರು, ಡಿ.14(ಆರ್‍ಕೆಬಿ)- ನಮಗೇ ಗೊತ್ತಾ ಗದ ಹಾಗೆ ಕಂಪನಿಗಳು ನಮ್ಮನ್ನು ಪ್ರಲೋಭನೆಗೆ ಒಳಪಡಿಸಿ, ಕಂಪನಿ ಬೀಜ, ಪ್ಯಾಕೇಜ್ ಬೀಜ ನೀಡು ತ್ತಿದ್ದಾರೆ. ದೇಶಿ ಬೀಜದಿಂದ ಹೊರಗಿಟ್ಟಿದ್ದಾರೆ. ಇದರ ಬಗ್ಗೆ ರೈತರು ಚಿಂತನೆ ನಡೆಸಬೇಕು. ತಂಬಾಕು ಬೆಳೆಯಿಂ ದಾಗಿ ಇಂದು ಸತ್ವಯುತ ಆಹಾರ, ನೆಮ್ಮದಿ ಉಳಿದಿಲ್ಲ. ಹೀಗಾಗಿ ತಂಬಾಕು ಬೆಳೆಗೆ ಪರ್ಯಾಯ ಬೆಳೆ ಬೆಳೆಯು ವುದರತ್ತ ಮುಖ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಹಿರಿಯ ನ್ಯಾಯಾಧೀಶ ಬಿ.ಪಿ.ದೇವಮಾನೆ ತಂಬಾಕು ಬೆಳೆಗಾರರಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕ ಜಂಟಿ ಆಶ್ರಯದಲ್ಲಿ ಮೈಸೂರಿನ ಗುರು ರೆಸಿಡೆನ್ಸಿ ಹೋಟೆಲ್ ಸಭಾಂಗಣದಲ್ಲಿ ತಂಬಾಕು ಬೆಳೆಯುವ ರೈತರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳು, ಕೋಟ್ಪಾ-2003 ಕಾಯ್ದೆ ಹಾಗೂ ಪರ್ಯಾಯ ಬೆಳೆಯ ಬಗ್ಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾ ಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೃಷಿಕನ ಬದುಕು ಹಾಗೆ ಹೀಗೆ ಎಂದು ರೈತರ ಬಗ್ಗೆ ಕನಿಕರದ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಬೀಜ, ಗೊಬ್ಬರ, ಕ್ರಿಮಿನಾಶಕಗಳ ಬಗ್ಗೆಯೇ ಹೆಚ್ಚು ಪ್ರಚಾರ ಮಾಡಿ, ರೈತರು ಕಂಪನಿಗಳನ್ನೆ ಅವಲಂಬಿ ಸುವಂತೆ ಮಾಡಲಾಗಿದೆ. ಆದರೆ ಸಾವಯವ ಕೃಷಿ ಬಗ್ಗೆಯಾಗಲಿ, ಸಾವಯವ ಗೊಬ್ಬರ ತಯಾರಿಕೆ ಮತ್ತು ಬಳಕೆ ಬಗ್ಗೆ ಪ್ರಚಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಿಸರ್ಗದ ಜೊತೆಗೇ ಬದುಕುವ ರೈತರು ವಾತಾವರಣ ಮತ್ತು ಮಣ್ಣಿನ ಗುಣಕ್ಕೆ ಹೊಂದಿ ಕೊಂಡು ಹೋದರೆ ನಿಸರ್ಗವೂ ನಮಗೆ ಸಹಕರಿಸು ತ್ತದೆ. ರೈತರು ತಂಬಾಕು ಬೆಳೆಯುವುದನ್ನು ಕಡಿಮೆ ಮಾಡಿ, ವ್ಯವಸ್ಥಿತ ಯೋಜನೆ ರೂಪಿಸಿಕೊಂಡು ಪರ್ಯಾಯ ಬೆಳೆ ಬೆಳೆಯಲು ನಿರ್ಧಾರ ಮಾಡ ಬೇಕು. ಸಮಗ್ರ ಕೃಷಿ ಅಳವಡಿಸಿಕೊಂಡು ಸ್ವಾವಲಂಬಿ ಯಾಗಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ಮಾತನಾಡಿ, ತಂಬಾಕು ಬೆಳೆಗೆ ನೀಡಲಾಗುತ್ತಿರುವ ಸೌಲಭ್ಯಗಳು ಹೆಚ್ಚಾಗಿರುವುದರಿಂದ ರೈತರು ತಂಬಾಕು ಬೆಳೆಯ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದಾರೆ . ಸರ್ಕಾ ರಕ್ಕೆ ತಂಬಾಕು ಬೆಳೆ ನಿಷೇಧಿಸುವ ಚಿಂತನೆ ಇಲ್ಲದಿ ದ್ದರೂ, ಅದನ್ನು ಬೆಳೆಯುವ ಪ್ರದೇಶದಲ್ಲಿ ಶೇ.50 ರಷ್ಟು ಮಾತ್ರ ಬೆಳೆ, ಉಳಿದ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಸೂಕ್ತ ಎಂದು ಹೇಳುತ್ತದೆ. ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ಮೂಡಿಸಲಾಗುತ್ತಿದೆ. ರೈತರು ಹೆಚ್ಚು ದÀನ-ಕರುಗಳನ್ನು ಸಾಕಿ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಾಗಾರದಲ್ಲಿ  ತಂಬಾಕು ಸೇವನೆಯಿಂದಾ ಗುವ ದುಷ್ಪರಿಣಾಮಗಳ ಕುರಿತು ಎಂಎಂಸಿಆರ್‍ಐ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮುದಸ್ಸಿರ್ ಅಜೀಜ್‍ಖಾನ್, ತಂಬಾಕು ಬೆಳೆ ಬಿಟ್ಟು ಪರ್ಯಾಯ ಬೆಳೆಯಿಂದ ಸಿಗುವ ಲಾಭಗಳ ಬಗ್ಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರುದ್ರೇಶ್, ರೈತರಿಗೆ ಸರ್ಕಾರದಿಂದ ಸಿಗುವ ಸೇವಾ ಸೌಲಭ್ಯಗಳ ಕುರಿತು ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಮಾಹಿತಿ ನೀಡಿದರು. ಜಿಲ್ಲಾ ತಂಬಾಕು ನಿಯಂತ್ರಣಕೋಶದ ಸಲಹೆಗಾರ ಶಿವ ಕುಮಾರ್ ಇತರರು ಉಪಸ್ಥಿತರಿದ್ದರು.

Translate »