ಗಣಿಗಾರಿಕೆ ಸ್ಥಗಿತದಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತ
ಮಂಡ್ಯ

ಗಣಿಗಾರಿಕೆ ಸ್ಥಗಿತದಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತ

August 15, 2021

ಜಿಲ್ಲಾಡಳಿತದ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ
ಶ್ರೀರಂಗಪಟ್ಟಣ, ಆ.14(ವಿನಯ್ ಕಾರೇಕುರ)- ಜಿಲ್ಲಾಡಳಿತವೇ ದುರುದ್ದೇಶದಿಂದ ಗಣಿಗಾ ರಿಕೆ ಸಂಪೂರ್ಣ ಸ್ಥಗಿತಗೊಳಿಸಿ, ಜಿಲ್ಲೆಯ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.

ತಾಲೂಕಿನ ಹುಣಸನಹಳ್ಳಿಯಲ್ಲಿ 20 ಲಕ್ಷ ರೂ. ಚೊಟ್ಟನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಗೆಗುದ್ದಲಿ ಪೂಜೆ, ಹುಣಸನಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಹುಂಜನಕೆರೆ ಗ್ರಾಮದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಡಳಿತ ಗಣಿಗಾರಿಕೆಯನ್ನು ಉದ್ದೇಶ ಪೂರ್ವಕವಾಗಿಯೇ ನಿಲ್ಲಿಸಿ ಕ್ರಷರ್ ಮತ್ತು ಕ್ವಾರೆ ಮಾಲೀಕರು, ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರನ್ನು ಶೋಷಣೆಗೆ ಒಳಪಡಿಸಿದೆ. ಅವಶ್ಯಕ ಗಣಿ ಸಾಮಗ್ರಿಗಳಿ ಲ್ಲದೆ, ಗುತ್ತಿಗೆದಾರರು ಜಿಲ್ಲೆಯ ರಸ್ತೆ, ಚರಂಡಿ ಸರ್ಕಾರಿ ಕಟ್ಟಡ ಕಾಮಾಗಾರಿಗಳನ್ನು ನಿಲ್ಲಿಸಿ ದ್ದಾರೆ. ಜೆಲ್ಲಿಕಲ್ಲು, ಎಂ-ಸ್ಟಾಂಡ್, ಡಸ್ಟ್ ಸೇರಿದಂತೆ ಅಗತ್ಯ ವಸ್ತುಗಳು ಸಿಗದೆ ಮನೆ ಕಟ್ಟುತ್ತಿರುವ ಬಡವರು ಗಣಿ ಸಾಮಗ್ರಿ ಗಳಿಗೆ ದುಪ್ಪಟ್ಟು ಬೆಲೆ ತೆತ್ತು ಹೊರಜಿಲ್ಲೆ ಯಿಂದ ತರಿಸಿಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿ ದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ನಿಯಮಬದ್ಧ ಇರುವಂಥ ಕ್ವಾರಿ ಮತ್ತು ಕ್ರಷರ್‍ಗಳನ್ನು ಕೂಡಲೇ ನಡೆ ಸಲು ಜಿಲ್ಲಾಡಳಿತ ಅನುಮತಿ ನೀಡಬೇಕು. ಅಕ್ರಮ ಗಣಿ ಮಾಲೀಕರಿಂದ ರಾಜಧನ ವಸೂಲು ಮಾಡಿ, ಪರವಾನಿಗೆ ನೀಡುವ ಮೂಲಕ ಸಕ್ರಮಗೊಳಿಸಿ ಗಣಿಗಾರಿಕೆ ನಡೆಸಲು ಅವಕಾಶ ನೀಡಕೊಡಬೇಕು. ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಅವರು ಯಾರದೋ ಓಲೈಕೆಗೋಸ್ಕರ ನಿರ್ಬಂಧ ಹೇರುತ್ತಿರುವುದು ಸರಿ ಯಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಹಾಗೂ ಕ್ರೀಡಾ ಸಚಿವರಾಗಿರುವ ಕೆ.ಸಿ.ನಾರಾಯಣಗೌಡರು ಕೆ.ಆರ್.ಪೇಟೆಗೆ ಮಾತ್ರ ಸಚಿವರಾಗಿದ್ದಾರೆ. ಈ ಹಿಂದೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿದರೂ, ಸ್ಪಂದಿಸದ ಅವರು ಕೆ.ಆರ್.ಪೇಟೆಗೆ ಮಾತ್ರ 8 ಕೋಟಿ ರೂ. ಅನುದಾನದ ಪಡೆದಿದ್ದಾರೆ. ಈ ವಿಚಾರವಾಗಿ ಪುನಃ ಕೆಡಿಪಿ ಸಭೆಯಲ್ಲಿ ಅವರನ್ನ ಪ್ರಶ್ನಿಸಲಿದ್ದೇನೆ ಎಂದರು.

Translate »