ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಡೆಸಲು ಹೋರಾಟ
ಮಂಡ್ಯ

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಡೆಸಲು ಹೋರಾಟ

August 15, 2021

ಮಂಡ್ಯ, ಆ.14(ಮೋಹನ್‍ರಾಜ್)-ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಒಂದೂ ವರೆ ವರ್ಷದಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲೂ ಸದನದ ಒಳಗೂ ಹೊರಗೂ ಹೋರಾಟ ನಡೆ ದಿದ್ದು, ಈಗಲೂ ಅದು ಮುಂದುವರೆ ದಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ದರು. ಹಿತರಕ್ಷಣಾ ಸಮಿತಿ ಪದಾಧಿಕಾರಿ ಗಳು ಸೇರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಯಡಿಯೂ ರಪ್ಪ ಅವರನ್ನು ಭೇಟಿ ಮಾಡಿದಾಗ, ಖಾಸಗೀ ಕರಣ ಪ್ರಸ್ತಾಪ ಬಿಟ್ಟು, ಸರ್ಕಾರವೇ ನಡೆಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗು ವುದು ಎಂದು ಸ್ಪಷ್ಟಪಡಿಸಿದ್ದರು. ನಂತರ ಬದಲಾದ ರಾಜಕೀಯದ ಸಮಯ ದಲ್ಲೂ ನಾವು ಸುಮ್ಮನೆ ಕುಳಿತಿಲ್ಲ ಎಂದರು.

ಇತ್ತೀಚೆಗೆ ನಾನು ಸೇರಿದಂತೆ ಶಾಸಕ ರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಕೆ.ಸುರೇಶ್‍ಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಲಿಖಿತವಾಗಿ ಮನವಿ ಮಾಡಿದ್ದೇವೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಸರ್ಕಾರ ದಲ್ಲಿ ನಡೆದಿದ್ದ ಎಲ್ಲಾ ವಿಚಾರವನ್ನು ಅವರ ಗಮನಕ್ಕೆ ತಂದಿದ್ದು, ತುರ್ತಾಗಿ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆ ಸಲು ತುರ್ತಾಗಿ ಸಭೆ ಕರೆಯಬೇಕು. ಅಲ್ಲದೆ, ಕೆಆರ್‍ಎಸ್ ಜಲಾಶಯಕ್ಕೆ ಬಾಗಿನ ಅರ್ಪಿ ಸುವ ಮೊದಲೇ ಸಭೆ ಕರೆಯುವಂತೆ ಮನವಿ ಮಾಡಲಾಗಿದೆ. ಅದಕ್ಕೆ ಒಪ್ಪಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಭೆಯಲ್ಲಿ ಚರ್ಚೆ ನಡೆಸಿ ನಿಮ್ಮೆಲ್ಲರ ತೀರ್ಮಾನ ದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಮೈಷುಗರ್ ಕಾರ್ಖಾನೆಯನ್ನು ಖಾಸಗೀ ಕರಣ ಮಾಡಲು ಜಿಲ್ಲೆಯ ಜನ, ಹೋರಾಟ ಗಾರರು ಬಿಡುವುದಿಲ್ಲ ಎಂಬುದು ಮುಖ್ಯ ಮಂತ್ರಿಗೂ ಮನವರಿಕೆಯಾಗಿದೆ. ಕಬ್ಬು ಸಾಗಾಣೆ ಹಾಗೂ ಕಬ್ಬು ಕಟಾವು ವಿಚಾ ರದ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಬೇಕಿದೆ. ಇದರ ಬಗ್ಗೆ ಮಾತುಕತೆ ನಡೆಸಲಾಗುವುದು. ಕಾರ್ಖಾನೆಗಳ ಅಧಿಕಾರಿ ಗಳನ್ನು ಕರೆದು ಸಾಗಾಣೆ ಹಾಗೂ ಕಟಾವು ಬಗ್ಗೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಲಾಗು ವುದು ಎಂದರು. ಸಭೆಯಲ್ಲಿ ರೈತನಾಯಕಿ ಸುನಂದಾ ಜಯರಾಂ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಕೆ.ಎಸ್. ಸುಧೀರ್‍ಕುಮಾರ್, ಶಂಭೂನಹಳ್ಳಿ ಕೃಷ್ಣ, ಎಂ.ಬಿ.ಶ್ರೀನಿವಾಸ್, ವಿನಯ್, ಮುದ್ದೇ ಗೌಡ, ಬೋರಾಪುರ ಶಂಕರೇಗೌಡ ಸೇರಿದಂತೆ ಮತ್ತಿತರರಿದ್ದರು.

 

Translate »