ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಮರುಪಾವತಿ ಜಾಗೃತಿ ಅಭಿಯಾನ
ಮೈಸೂರು

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಮರುಪಾವತಿ ಜಾಗೃತಿ ಅಭಿಯಾನ

March 1, 2021

ಮೈಸೂರು, ಫೆ.28(ಎಂಟಿವೈ)-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದಿಂದ ಸಾಲ ಪಡೆದು ಮರು ಪಾವತಿ ಸದೇ ಇರುವ 24 ಸಾವಿರ ಮಂದಿ ಫಲಾನು ಭವಿಗಳಿಗೆ ಶೀಘ್ರದಲ್ಲೇ ಪತ್ರ ಬರೆದು ಸಾಲ ಮರುಪಾವತಿಗೆ ಮನ ಪರಿವರ್ತಿ ಸುವ ಅಭಿಯಾನವನ್ನು ಆರಂಭಿಸುತ್ತಿರುವು ದಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಆರ್ಥಿಕ ವಾಗಿ ಹಿಂದುಳಿದ ವರ್ಗದ ಫಲಾನು ಭವಿಗಳಿಗೆ ಸಾಲದ ಸೌಲಭ್ಯ ನೀಡಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವು ವರ್ಷಗಳಿಂದ ಕಾರ್ಯ ಯೋಜನೆ ಅನುಷ್ಠಾನಗೊಳಿಸುತ್ತಾ ಬಂದಿದೆ. ಚೈತನ್ಯ ಸ್ವಯಂ ಉದ್ಯೋಗ, ಸಾಂಪ್ರದಾಯಿಕ ಕುಶಲಕರ್ಮಿಗಳ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕಿರು ಸಾಲ, ವಿವಿಧ ಚೈತನ್ಯ ಸಬ್ಸಿಡಿ ಯೋಜನೆ ಸೇರಿದಂತೆ ಸ್ವ-ಸಹಾಯ ಸಂಘಗಳಿಗೆ ಮಹಿಳಾ ಸಮೃದ್ಧಿ ಯೋಜನೆ, ನ್ಯೂ ಸ್ವರ್ಣಿಮಾ, ಕೃಷಿ ಅಭಿವೃದ್ಧಿ ಯೋಜನೆ, ಸೇವಾ ವಲಯ ಮತ್ತು ಸಣ್ಣ ವ್ಯಾಪಾರಿಗಳಿಗೆ ಸಾಲ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸು ತ್ತಿದೆ ಎಂದು ತಿಳಿಸಿದರು.

ಅಭಿವೃದ್ಧಿ ನಿಗಮವು ಕಳೆದ ಸಾಲಿನಲ್ಲಿ ರಾಜ್ಯದಲ್ಲಿ 29,610 ಮಂದಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೊರೊನಾ ಸಮಸ್ಯೆಯಿಂದಾಗಿ 400 ಕೋಟಿ ರೂ. ಸಾಲ ಮರು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 50 ಕೋಟಿ ರೂ. ಸಾಲ ಮರು ಪಾವತಿ ಆಗಬೇಕಾಗಿದೆ. ಸಾಲ ಪಡೆದ ಫಲಾನುಭವಿಗಳು ಮರು ಪಾವತಿಗೆ ಮುಂದಾಗುತ್ತಿಲ್ಲ. ಇದಕ್ಕೆ ಕೊರೊನಾ ಸಂಕಷ್ಟ ಒಂದು ಕಾರಣವಾದರೆ, ಮತ್ತೊಂದು ಕಾರಣ ಸಾಲ ಮನ್ನಾ ಆಗಬಹುದೆಂಬ ನಿರೀಕ್ಷೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ನಿಗಮವು ಸಾಲ ಪಡೆದ ಎಲ್ಲಾ ಫಲಾನುಭವಿಗಳಿಗೆ ಪತ್ರ ಬರೆದು ಸಾಲ ಹಿಂತಿರುಗಿಸುವಂತೆ ಮನ ಪರಿವರ್ತನೆ ಮಾಡುವ ಅಭಿಯಾನವನ್ನು ಆರಂಭಿಸಲು ಉದ್ದೇಶಿ ಸಲಾಗಿದೆ. `ನಿಮ್ಮಂತೆಯೇ ಇನ್ನಷ್ಟು ಮಂದಿ ಸಾಲ ಪಡೆಯಲು ಕಾಯುತ್ತಿದ್ದಾರೆ. ದಯಮಾಡಿ ನೀವು ಪಡೆದ ಸಾಲವನ್ನು ಮರು ಪಾವತಿ ಮಾಡಿ’ ಎಂದು ಮನ ಪರಿ ವರ್ತಿಸುವ ಅಭಿಯಾನ ನಡೆಸಲಿದೆ ಎಂದು ತಿಳಿಸಿದರು.

ಅಭಿಯಾನದ ನಂತರವೂ ಸಾಲ ಮರುಪಾವತಿಗೆ ಮುಂದಾಗದಿದ್ದರೆ ಫಲಾನುಭವಿಗಳ ಮನೆ ಮನೆಗೆ ತೆರಳಿ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಘು ಕೌಟಿಲ್ಯ ತಿಳಿಸಿದರು.

 

 

Translate »