ಇಬ್ಬರು ಮನೆಗಳ್ಳರ ಬಂಧನ: 31 ಲಕ್ಷ ಮೌಲ್ಯದ ಚಿನ್ನಾಭರಣ ವಶ ಚಿನ್ನ ಅಡವಿಟ್ಟುಕೊಂಡವನೂ ಸೆರೆ
ಮೈಸೂರು

ಇಬ್ಬರು ಮನೆಗಳ್ಳರ ಬಂಧನ: 31 ಲಕ್ಷ ಮೌಲ್ಯದ ಚಿನ್ನಾಭರಣ ವಶ ಚಿನ್ನ ಅಡವಿಟ್ಟುಕೊಂಡವನೂ ಸೆರೆ

March 1, 2021

ಮೈಸೂರು,ಫೆ.28(ವೈಡಿಎಸ್)- ಇಬ್ಬರು ಮನೆಗಳ್ಳರು ಹಾಗೂ ಕದ್ದ ಮಾಲನ್ನು ಅಡವಿಟ್ಟುಕೊಂಡಿದ್ದ ಚಿನ್ನದ ವ್ಯಾಪಾರಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ, 31 ಲಕ್ಷ ರೂ.ಮೌಲ್ಯದ 611 ಗ್ರಾಂ ಚಿನ್ನಾ ಭರಣ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿ ಕೊಂಡಿದ್ದಾರೆ. ಮೈಸೂರು ರಾಜೀವ್‍ನಗರ 2ನೇ ಹಂತದ ನಿವಾಸಿ ಫಯಾಜ್ ಅಹಮ್ಮದ್(54), 1ನೇ ಹಂತದ ನಿವಾಸಿ ಇಮ್ತಿಯಾಜ್ ಅಹಮದ್(43) ಬಂಧಿತ ಮನೆಗಳ್ಳರಾಗಿದ್ದು, ಇವರೊಂದಿಗೆ ಕದ್ದ ಚಿನ್ನಾಭರಣಗಳನ್ನು ಅಡವಿಟ್ಟುಕೊಂಡಿದ್ದ ಮಂಡಿ ಮೊಹಲ್ಲಾ ನಿವಾಸಿ, ಮರಿಯಮ್ ಜ್ಯುವೆಲ್ಲರ್ಸ್‍ನ ಮಹಮ್ಮದ್ ಪರ್ವೀಜ್(41) ಬಂಧಿತರು.

ಮೈಸೂರು ನಗರದಲ್ಲಿ ವರದಿಯಾಗಿರುವ ಮನೆ ಕಳ್ಳತನ ಪ್ರಕರಣಗಳ ಪತ್ತೆ ಸಂಬಂಧ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ಫೆ.23ರಂದು ಸಂಜೆ 6 ಗಂಟೆ ಸಮಯದಲ್ಲಿ ರಿಂಗ್ ರಸ್ತೆಯ ನಾಯ್ಡುನಗರ ಜಂಕ್ಷನ್‍ನಲ್ಲಿ ಫಯಾಜ್ ಅಹಮ್ಮದ್ ಮತ್ತು ಇಮ್ತಿಯಾಜ್ ಅಹಮದ್ ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಕಾರಿನಲ್ಲಿ ಮನೆ ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು ಹಾಗೂ ತಪ್ಪಿಸಿಕೊಳ್ಳಲು ಬಳಸುತ್ತಿದ್ದ ಪಿಸ್ತೂಲ್ ಮಾದರಿಯ ಏರ್‍ಗನ್ ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ 2020ರ ಡಿ.12ರಂದು ಎನ್.ಆರ್.ಠಾಣಾ ವ್ಯಾಪ್ತಿಯ ಸುಭಾಷ್‍ನಗರದ ಮನೆಯೊಂದರ ಕಿಟಕಿ ಮುರಿದು 800 ಗ್ರಾಂ ಚಿನ್ನಾಭರಣ ಹಾಗೂ 60 ಸಾವಿರ ರೂ. ನಗದು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಹೆಚ್ಚಿನ ವಿಚಾರಣೆಗೆ ಪೆÇಲೀಸ್ ವಶಕ್ಕೆ ಪಡೆದು ಆರೋಪಿಗಳು ಕದ್ದು ತಂದ ಚಿನ್ನಾಭರಣ ಗಳನ್ನು ವಿಲೇವಾರಿ ಮಾಡಿದ್ದ ಚಿನ್ನಾಭರಣ ವ್ಯಾಪಾರಿ ಮಹಮ್ಮದ್ ಪರ್ವೀಜ್ ನನ್ನು ಬಂಧಿಸಿದ್ದಾರೆ. ಆರೋಪಿಗಳ ಮಾಹಿತಿ ಮೇರೆಗೆ ಉದಯಗಿರಿ ಶಾಖೆಯ ಮುತ್ತೂಟ್ ಫೈನಾನ್ಸ್ ಹಾಗೂ ಇತರೆಡೆಗಳಲ್ಲಿ ವಿಲೇವಾರಿ ಮಾಡಿದ್ದ ಚಿನ್ನಾಭರಣ ಸೇರಿದಂತೆ 31 ಲಕ್ಷ ರೂ.ಮೌಲ್ಯದ 611 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಫಯಾಜ್ ಅಹಮ್ಮದ್ ಈ ಹಿಂದೆ ಸುಮಾರು 24 ಸ್ವತ್ತಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷ ಅನುಭವಿಸಿದ್ದ. ಹಾಗೆಯೇ ಇದೇ ರೀತಿ ಪ್ರಕರಣದಲ್ಲಿ ಮರಿಯಮ್ ಜ್ಯುವೆಲ್ಲರ್ಸ್‍ನ ಮಹಮ್ಮದ್ ಪರ್ವೀಜ್ ಕಳವು ಮಾಲು ಸ್ವೀಕರಿಸಿ ನ್ಯಾಯಾಂಗ ಬಂಧಕ್ಕೆ ಒಳಪಟ್ಟಿದ್ದ. ಪತ್ತೆ ಕಾರ್ಯದಲ್ಲಿ ಡಿಸಿಪಿ ಗೀತಪ್ರಸನ್ನ, ಸಿಸಿಬಿ ಘಟಕದ ಎಸಿಪಿ ಸಿ.ಕೆ.ಅಶ್ವತನಾರಾಯಣ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಜಗದೀಶ್, ಎಎಸ್‍ಐಗಳಾದ ಡಿ.ಜಿ.ಚಂದ್ರೇಗೌಡ, ಅಸ್ಗರ್‍ಖಾನ್, ಸಿಬ್ಬಂದಿ ರಾಮಸ್ವಾಮಿ, ಗಣೇಶ್, ಎಂ.ಆರ್.ಚಿಕ್ಕಣ್ಣ, ಶಿವರಾಜು, ಲಕ್ಷ್ಮಿಕಾಂತ, ಯಾಕೂಬ್ ಷರೀಫ್, ಸಲೀಂ ಪಾಷ, ಆನಂದ್, ಅನಿಲ್, ಸಿ.ಎಂ.ಮಂಜು, ಗುರುದೇವಾ ರಾದ್ಯ, ಕುಮಾರ್, ಶ್ಯಾಮ್‍ಸುಂಧರ್, ಮಮತ, ರಮ್ಯ, ಗೌತಮ್, ಶಿವಕುಮಾರ್ ಪಾಲ್ಗೊಂಡಿದ್ದರು.

Translate »