ಕೊಡಗಿನ ವಿವಿಧೆಡೆ ಶ್ರದ್ಧಾಭಕ್ತಿಯ ನಾಗರ ಪಂಚಮಿ
ಕೊಡಗು

ಕೊಡಗಿನ ವಿವಿಧೆಡೆ ಶ್ರದ್ಧಾಭಕ್ತಿಯ ನಾಗರ ಪಂಚಮಿ

August 14, 2021

ಸೋಮವಾರಪೇಟೆ, ಆ.13- ಪಟ್ಟಣದ ವಿವಿಧ ದೇವಾಲಯ ಹಾಗೂ ನಾಗಬನ ದಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿ ಯಿಂದ ಶುಕ್ರವಾರ ಆಚರಿಸಲಾಯಿತು.

ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾ ಲಯ, ಕಟ್ಟೆ ಬಸವೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಆನೆಕೆರೆ, ಚಂದನಮಕ್ಕಿಯ ನಾಗಬನ, ಅರಸಿನಕುಪ್ಪೆ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಹಾಗೂ ನವನಾಗನಾಥ ದೇವಾಲಯ ಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಅರಸಿನಕುಪ್ಪೆ ಶ್ರೀಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಪತಿ ಹೋಮ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಶ್ರೀ ನವನಾಗನಾಥ ಸನ್ನಿಧಿಯಲ್ಲಿ ಪಂಚಮಿ ಪ್ರಯುಕ್ತ ತಂಬಿಲ ಸೇವೆ, ಅಭಿಷೇಕ, ಅಲಂ ಕಾರ, ಮಹಾಮಂಗಳಾರತಿ, ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು.

ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್ ಗುರೂಜಿ ಮಾರ್ಗದರ್ಶನ ದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ, ಪರಮೇಶ್ವರ ಭಟ್, ಮಯೂರ ಭಟ್ ಅವರುಗಳ ಪೌರೋಹಿತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರಮೇಶ್ ಸೇರಿದಂತೆ ಪದಾಧಿಕಾರಿಗಳು, ಗ್ರಾಮ ಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ನಾಪೋಕ್ಲು ವರದಿ: ನಾಪೋಕ್ಲು ಸುತ್ತಮುತ್ತಲ ವಿವಿಧ ದೇವಾಲಯಗಳಲ್ಲಿ ನಾಗರಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಮೀಪದ ಪಾಲೂ ರಿನ ಶ್ರೀ ಮಹಾಲಿಂಗೇಶ್ವರ ದೇವಾಲಯ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅರ್ಚಕ ದೇವಿಪ್ರಸಾದ್ ನಾಗಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಕೂರುಳಿ ಪರಂಬುವಿನ ಸುಭಾಷ್ ನಗರದ ನಾಗ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಿದವು. ಅರ್ಚಕ ಹರೀಶ್‍ಭಟ್ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು. ಪ್ರಮುಖರಾದ ಮೋಹನ್, ಪ್ರವೀಣ್ ರೈ, ಜೀವನ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕೋವಿಡ್ 19 ರ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆ ಕಡಿಮೆ ಇತ್ತು.

Translate »