ಯಾರಿಗೆ ಒಲಿಯಲಿದೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷಗಾದಿ..?
ಮಂಡ್ಯ

ಯಾರಿಗೆ ಒಲಿಯಲಿದೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷಗಾದಿ..?

August 14, 2021
  • ಜಿ.ಮಾದೇಗೌಡರ ನಿಧನದಿಂದ ತೆರವಾಗಿರುವ ಸ್ಥಾನ
  • ಕಳೆದ 3 ವರ್ಷಗಳಿಂದ ಪುನರ್‍ರಚನೆಯಾಗದ ಸಮಿತಿ
  • ರೈತರು, ಕಾವೇರಿ ವಿಚಾರದಲ್ಲಿ ಮುಂಚೂಣಿಯ ಹೋರಾಟ ಸಮಿತಿ
  • ಜಿಎಂ, ಕೆಎಸ್ಪಿ ಅನುಪಸ್ಥಿತಿಯಲ್ಲಿ ಹೊಸ ನಾಯಕನ ಹುಡುಕಾಟ
  • ಆತ್ಮಾನಂದ, ಕೆಟಿಎಸ್, ಕೆಎಸ್‍ಎನ್, ಸುನಂದಾ, ಜಿಬಿಎಸ್ ರೇಸ್‍ನಲ್ಲಿ

ಮಂಡ್ಯ, ಆ.13(ಮೋಹನ್‍ರಾಜ್)- ರೈತ ಹೋರಾಟ ಹಾಗೂ ಪ್ರಗತಿಪರ ಹೋರಾ ಟಕ್ಕೆ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ಅಂದ ತಕ್ಷಣ ನೆನಪಾ ಗುವುದು ರೈತ ಹಿತರಕ್ಷಣಾ ಸಮಿತಿ. ಜಿಲ್ಲೆಯ ಜನರ ಯಾವುದೇ ಸಮಸ್ಯೆಗೆ ರಾಜ್ಯಮಟ್ಟದಲ್ಲಿ ಧನಿಯಾಗಿ ನಿಲ್ಲುತ್ತಿದ್ದ ರೈತ ಹಿತರಕ್ಷಣಾ ಸಮಿತಿಯ ನೊಗ ಹೊತ್ತವರು ಹಿರಿಯ ರಾಜಕೀಯ ಮುತ್ಸದ್ಧಿ ಡಾ.ಜಿ.ಮಾದೇ ಗೌಡ. ಇದೀಗ ಅವರ ನಿಧನದಿಂದ ಆ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕವಾಗ ಬೇಕಿದ್ದು, ನೂತನ ಅಧ್ಯಕ್ಷರು ಯಾರಾಗಲಿ ದ್ದಾರೆ ಎಂಬ ಕುತೂಹಲ ಮೂಡಿದೆ.

ರೈತ ಹಿತರಕ್ಷಣಾ ಸಮಿತಿಯು ಕಾವೇರಿ ವಿಚಾರದಲ್ಲಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅನ್ಯಾಯ ವಾಗುತ್ತಿದ್ದ ಸಂದರ್ಭದಲ್ಲಿ ಪಕ್ಷಾತೀತ ವಾಗಿ ರಾಜಕೀಯ ನಾಯಕರು, ಪ್ರಗತಿಪರ ಮುಖಂಡರು, ಕಾರ್ಮಿಕರು, ಮಹಿಳಾ ಸಂಘಟನೆಗಳು ಸೇರಿದಂತೆ ಇನ್ನಿತರರು ಒಗ್ಗೂಡಿ ಹೋರಾಡಲು 1991ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಸಂಘಟನೆ ಅಸ್ತಿತ್ವಕ್ಕೆ ಬರಲು ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸಲಹೆಯೂ ಕಾರಣವಾಗಿತ್ತು.
ಆರಂಭದಲ್ಲಿ ರಚನೆಯಾದ ಈ ಸಮಿತಿಗೆ ಅಂದಿನ ಸಂಸದ ಡಾ.ಜಿ.ಮಾದೇಗೌಡರೇ ಅಧ್ಯಕ್ಷರಾದರು. ಅವರ ಅಧ್ಯಕ್ಷತೆಯಲ್ಲಿ ಸುದೀರ್ಘ ವಾಗಿ 30ಕ್ಕೂ ವರ್ಷಗಳ ಕಾಲ ಸಂಘಟನೆ ಜಿಲ್ಲೆಯಲ್ಲಿ ಹೋರಾಟ ಮಾಡುತ್ತಲೇ ಬಂದಿದೆ.

ಕಾವೇರಿ ವಿಚಾರದಲ್ಲಿ ಜಿಲ್ಲೆಗೆ ಅನ್ಯಾಯ ವಾದಾಗ ಅನೇಕ ಬಾರಿ ಮಾದೇಗೌಡರ ನೇತೃತ್ವದಲ್ಲಿ ಸಮಿತಿ ಹೋರಾಟ ಮಾಡಿದ್ದು, ಅಷ್ಟೇ ಅಲ್ಲದೇ ಮಹದಾಯಿ, ಮೈಷುಗರ್ ಸೇರಿದಂತೆ ಇನ್ನಿತರ ಜಿಲ್ಲೆಯ ವಿಚಾರ ಗಳಿಗೆ ಹೋರಾಟ ಮಾಡಿರುವುದು ಇದೀಗ ಇತಿಹಾಸ.
ಈ ಸಂಘಟನೆಯಲ್ಲಿ ಜಿ.ಮಾದೇಗೌಡ ಜೊತೆಗೆ ರೈತ ನಾಯಕ, ಮಾಜಿ ಶಾಸಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಸಹ ಇದ್ದರು. ಸಮಿತಿಯ ಉಪಾಧ್ಯಕ್ಷರಾಗಿದ್ದ ಪುಟ್ಟಣ್ಣಯ್ಯ ಕಳೆದ ಮೂರು ವರ್ಷಗಳ ಹಿಂದೆಯೇ ವಿಧಿವಶರಾದರು. ಜೊತೆಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಬಿ.ಟಿ. ಶ್ರೀನಿವಾಸ್‍ಗೌಡ ಸಹ ಈಗ ನಮ್ಮೊಂದಿಗಿಲ್ಲ.

ಜಿ.ಮಾದೇಗೌಡರು, ಕೆ.ಎಸ್.ಪುಟ್ಟಣ್ಣಯ್ಯ ರಂತಹ ಅಪ್ರತಿಮ ಹೋರಾಟಗಾರರನ್ನು ಕಳೆದುಕೊಂಡಿರುವ ಮಂಡ್ಯ ಜಿಲ್ಲೆಯ ಹೋರಾಟದ ದನಿ ಇದೀಗ ಕ್ಷೀಣಿಸಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಹೋರಾಟದ ದನಿಯಾಗಿರುವ ಕಾವೇರಿ ಹಿತರಕ್ಷಣಾ ಸಮಿತಿಗೆ ಮರು ಜೀವ ಕೊಟ್ಟು ನೂತನ ಅಧ್ಯಕ್ಷರನ್ನು ನೇಮಿಸಿ ಆ ಮೂಲಕ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇರುವುದ ರಿಂದ ಸಮಿತಿಯ ಪದಾಧಿಕಾರಿಗಳು ಹೊಸ ಅಧ್ಯಕ್ಷರ ನೇಮಕಕ್ಕೆ ತಯಾರಿ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಸಮಿತಿಯ ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ರಾಜು ಸಭೆ ಕರೆಯಲು ತೀರ್ಮಾನಿಸಿದ್ದು, ಶೀಘ್ರವೇ ದಿನಾಂಕ ನಿಗದಿಯಾಗಲಿದೆ. ಸಮಿತಿಯ ಉಪಾ ಧ್ಯಕ್ಷ, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಸಮಿತಿಯ ಖಜಾಂಚಿ, ಮಾಜಿ ಶಾಸಕ ಹೆಚ್.ಡಿ.ಚೌಡಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಹೊಸ ಅಧ್ಯಕ್ಷರ ನೇಮಕವಾಗಲಿದೆ ಎಂದು ಹೇಳಲಾಗುತ್ತಿದೆ.

ಯಾರಾಗಲಿದ್ದಾರೆ ಸಮಿತಿಯ ಹೊಸ ಅಧ್ಯಕ್ಷರು..?: ಸದ್ಯ ಮೂರು ವರ್ಷ ಗಳಿಂದ ಸಮಿತಿ ಪುನರ್ ರಚನೆಯಾಗದ ಕಾರಣ ಇದೀಗ ಮಾದೇಗೌಡರ ಅನುಪಸ್ಥಿತಿ ಯಲ್ಲಿ ಸಭೆಯನ್ನು ಕರೆಯಲಾಗಿದೆ. ಮಾದೇಗೌಡರ ನಂತರ ಕೆ.ಎಸ್.ಪುಟ್ಟಣ್ಣಯ್ಯ ಹೋರಾಟ ಕ್ಷೇತ್ರದ ಮುಂಚೂಣಿ ವಹಿಸಿದ್ದರಾ ದರೂ ಅವರು ಸಹ ಈಗ ಬದುಕಿಲ್ಲ. ಇಬ್ಬರು ಮಹಾನ್ ಹೋರಾಟಗಾರರ ಅನುಪಸ್ಥಿತಿ ಯಲ್ಲಿ ಹೊಸ ಸಮಿತಿ ರಚನೆಯಾಗಲಿದೆ.
ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಖಜಾಂಚಿ, ಮಾಜಿ ಶಾಸಕ ಹೆಚ್.ಡಿ.ಚೌಡಯ್ಯ ಹೆಸರು ಮುಂಚೂಣಿಗೆ ಬರಬಹುದಿತ್ತಾದರೂ ಅವರಿಗೆ ವಯಸ್ಸು 90ರ ಆಸುಪಾಸಾಗಿರು ವುದರ ಜೊತೆಗೆ ಅನಾರೋಗ್ಯದ ಕಾರಣ ದಿಂದ ಹಿಂದೆ ಸರಿಯಬಹುದು. ಮತ್ತೋರ್ವ ಸಮಿತಿಯ ಕಾರ್ಯದರ್ಶಿಯಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಹೊನ್ನಪ್ಪ ಸಹ ವಯಸ್ಸಿನ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಸರಿಯಬಹುದು.

ಇನ್ನುಳಿದವರ ಪೈಕಿ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಎಂ.ಎಸ್. ಆತ್ಮಾನಂದ. ಆತ್ಮಾನಂದ ಹಾಲಿ ಸಮಿತಿಯ ಉಪಾಧ್ಯಕ್ಷರು, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡರು. ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ ಎನ್ನಲಾಗಿದೆ.

ಅಲ್ಲದೆ, ಸಮಿತಿಯ ಪದಾಧಿಕಾರಿಯಾಗಿ ರುವ ಹಾಲಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ. ಜೆಡಿಎಸ್‍ನ ಮುಖಂಡ ರಾಗಿರುವ ಕೆಟಿಎಸ್ ಸಹ ಇತ್ತೀಚೆಗೆ ಮೈ ಷುಗರ್ ಹಾಗೂ ಮನ್‍ಮುಲ್ ಹೋರಾಟ ದಲ್ಲಿ ಮುಂಚೂಣಿಯಲ್ಲಿದ್ದರು. ಇವರೊಂ ದಿಗೆ ಮಾಜಿ ಶಾಸಕ, ಜೆಡಿಎಸ್‍ನ ಜಿ.ಬಿ. ಶಿವಕುಮಾರ್ ಸಹ ಸಮಿತಿಯ ಪದಾಧಿಕಾರಿ ಯಾಗಿದ್ದು, ಇವರೂ ಸಹ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇವರೊಂದಿಗೆ ರೈತ ಹೋರಾಟ ಗಾರ, ಹಾಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಸಹ ಸಮಿತಿಯ ಪದಾಧಿಕಾರಿಯಾಗಿದ್ದು, ಅವರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿರುವ ಮತ್ತೊಂದು ಹೆಸರಾದರೆ, ರೈತ ನಾಯಕಿ ಸುನಂದಾ ಜಯರಾಂ ಅವರನ್ನು ಅಲ್ಲೆಗೆಳೆಯುವಂತಿಲ್ಲ.

ಸದ್ಯ ಅಧ್ಯಕ್ಷ ಸ್ಥಾನಕ್ಕೆ ಸುಮಾರು ಆರೇಳು ಮಂದಿಯ ಹೆಸರು ಮುಂಚೂಣಿ ಯಲ್ಲಿದ್ದು, ಅಂತಿಮವಾಗಿ ಪದಾಧಿಕಾರಿ ಗಳು ಯಾರನ್ನು ಒಪ್ಪುತ್ತಾರೋ ಅವರು ಮಂಡ್ಯ ಜಿಲ್ಲೆಯ ಹೋರಾಟ ಸಮಿತಿಯ ನೊಗ ಹೊರಲಿದ್ದಾರೆ.

Translate »