ಭಾರತದ ಯುವ ಇಂಜಿನಿಯರ್‍ಗಳಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ
ಮಂಡ್ಯ

ಭಾರತದ ಯುವ ಇಂಜಿನಿಯರ್‍ಗಳಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ

August 14, 2021

ಕೆ.ಆರ್.ಪೇಟೆ, ಆ.13(ಶ್ರೀನಿವಾಸ್)- ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚ ದಲ್ಲಿ ಭಾರತದ ಯುವ ಇಂಜಿನಿಯರು ಗಳಿಗೆ ವಿಶ್ವದಾದ್ಯಂತ ಬೇಡಿಕೆಯಿದೆ. ಭವಿಷ್ಯದ ನಾಡು ಕಟ್ಟಲು ತಾಂತ್ರಿಕ ಕೌಶಲ್ಯವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ವಿಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಂಡು ಶ್ರೇಷ್ಠ ಸಾಧಕರಾಗಬೇಕು. ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣ ಹೊಂದಿದರೆ ಉದ್ಯೋಗಾವಕಾಶ ಗಳು ಹುಡುಕಿಕೊಂಡು ಬರುತ್ತದೆ ಎಂದು ರಾಜ್ಯದ ರೇಷ್ಮೆ, ಯುವಜನ ಸಬಲೀ ಕರಣ, ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಸಲಹೆ ನೀಡಿದರು.

ಅವರು ಪಟ್ಟಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಆನ್‍ಲೈನ್ ಉದ್ಯೋಗ ಮೇಳವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

40 ವರ್ಷಗಳ ಹಿಂದೆ ನಾನು ಮುಂಬೈ ಮಹಾನಗರಕ್ಕೆ ಉದ್ಯೋಗವನ್ನು ಅರಸಿ ಹೋದಾಗ ತಿಂಗಳಿಗೆ ಕೇವಲ 160 ರೂ. ಸಂಬಳದೊಂದಿಗೆ ಕೆಲಸವನ್ನು ಆರಂಭಿಸಿದೆ. ನಂತರ ಯಶಸ್ವಿ ಉದ್ಯಮಿಯಾಗುವ ಜೊತೆಗೆ ಮುಂಬೈನ ಹೋಟೆಲ್ ಉದ್ಯಮದಲ್ಲಿ ನನ್ನ ಛಾಪನ್ನು ಮೂಡಿಸಿ ಈಗ ನಿಮ್ಮ ಮುಂದೆ ಸಚಿವನಾಗಿ ನಿಂತಿದ್ದೇನೆ. ಇದರ ಹಿಂದೆ ನನ್ನ ಪ್ರಾಮಾಣಿಕ ಪರಿಶ್ರಮ ಇದೆ ಎಂದರು.

ಇದೇ ರೀತಿ ನೀವು ಸಹ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಸಮಸ್ಯೆ ಗಳನ್ನು ಮೆಟ್ಟಿನಿಂತು ಆತ್ಮವಿಶ್ವಾಸದಿಂದ ಮುನ್ನಡೆದಾಗ ಹೆಸರು ಮತ್ತು ಕೀರ್ತಿ ಗಳೆರಡೂ ಹಿಂಬಾಲಿಸಿಕೊಂಡು ಬರುತ್ತದೆ ಎಂದು ತಿಳಿಹೇಳಿದರು.

ಇಂದು ನಾಡಿನ 16 ಕಂಪನಿಗಳು ಯುವಜನರಿಗೆ ಕೆಲಸ ನೀಡಲು ಕೋವಿಡ್ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕವೇ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂದ ರ್ಶನ ನಡೆಸಿ ಉದ್ಯೋಗ ನೇಮಕಾತಿ ಆದೇಶ ಪತ್ರ ವನ್ನು ನೀಡುತ್ತಿವೆ. ಯುವ ಜನರು ತಮ್ಮ ವಿದ್ಯಾಭ್ಯಾಸದ ಸಾಮಥ್ರ್ಯಕ್ಕೆ ಅನುಗುಣವಾಗಿ ದೊರೆಯುವ ಯಾವುದೇ ಕೆಲಸವನ್ನಾಗಲೀ ಆಯ್ಕೆ ಮಾಡಿಕೊಂಡು ನಂತರ ಅನುಭವದ ಆಧಾರದ ಮೇಲೆ ಇತರ ಯಾವುದೇ ಕೆಲಸ ಸಿಕ್ಕರೂ ಆ ಕೆಲಸಕ್ಕೆ ಸೇರಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇ ಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೌಶಲ್ಯಾ ಭಿವೃದ್ಧಿ ಅಧಿಕಾರಿ ನಾಗಾನಂದ, ತಹಶೀ ಲ್ದಾರ್ ಎಂ.ಶಿವಮೂರ್ತಿ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಾರ್ಥಸಾರಥಿ, ಸಹ ಪ್ರಾಧ್ಯಾಪಕರಾದ ಡಾ.ಎನ್.ಎಸ್.ಸತೀಶ್, ಟಿ.ಲೋಕೇಶ್, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಆಶಾಕಾಮತ್, ನಿವೃತ್ತ ಅಬಕಾರಿ ಜಿಲ್ಲಾ ಅಧಿಕಾರಿ ಕಬ್ಬಾಳು ಈರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »