ಎರಡನೇ ಬಾರಿ ಭಾರ ಹೊರುವ ಟಾಸ್ಕ್ ಪೂರೈಸಿದ `ಧನಂಜಯ’
ಮೈಸೂರು

ಎರಡನೇ ಬಾರಿ ಭಾರ ಹೊರುವ ಟಾಸ್ಕ್ ಪೂರೈಸಿದ `ಧನಂಜಯ’

September 25, 2021

ಮೈಸೂರು, ಸೆ.೨೪(ಎಂಟಿವೈ)- ಜಂಬೂಸವಾರಿಗೆ ಗಜಪಡೆ ಸಜ್ಜುಗೊಳ್ಳು ತ್ತಿದ್ದು, ಅಂಬಾರಿ ಹೊರಲು ಪರ್ಯಾಯ ತಯಾರಿ ಆನೆ ಧನಂಜಯ, ಶುಕ್ರವಾರ ೫೦೦ ಕೆಜಿ ತೂಕದ ಭಾರವನ್ನು ಎರಡನೇ ಬಾರಿ ಯಶಸ್ವಿಯಾಗಿ ಹೊತ್ತು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆಯಿತು.

ಸೆ.೨೦ರಿಂದ ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ನಡೆಸಲಾಗು ತ್ತಿದ್ದು, ಅಂಬಾರಿ ಆನೆ ಅಭಿಮನ್ಯುವಿನಂತೆ ಧನಂಜಯನಿಗೂ ಎರಡನೇ ಬಾರಿ ಭಾರ ಹೊರಿಸುವ ತಾಲೀಮು ನಡೆಸಲಾಯಿತು. ಗೋಪಾಲಸ್ವಾಮಿಗೆ ಒಂದು ಬಾರಿ ಭಾರ ಹೊರಿಸಲಾಗಿದ್ದು, ಎರಡನೇ ಪಂಕ್ತಿಯ ಆನೆಗಳಿಗೂ ಭಾರ ಹೊರುವ ತಾಲೀಮು ಮುಂದುವರೆಸಲಾಗಿದೆ. ಇಂದು ಬೆಳಗ್ಗೆ ೫೦೦ ಕೆಜಿ ಭಾರ ಹೊತ್ತು ಕೋಡಿ ಸೋಮೇ ಶ್ವರ ದೇವಾಲಯದ ಮುಂಭಾಗದಿAದ ಹೊರಟ ಗಜಪಡೆ ಜಂಬೂಸವಾರಿ ಮಾರ್ಗ ಒಳಗೊಂಡAತೆ ಅರಮನೆ ಸುತ್ತ ಎರಡು ಸುತ್ತು ಸಂಚರಿಸಿತು. ಭಾರ ಹೊತ್ತಿದ್ದರೂ ಸ್ವಲ್ಪವೂ ವಿಚಲಿತಗೊಳ್ಳದೇ ನಿರಾಯಾಸವಾಗಿ ಹೆಜ್ಜೆ ಹಾಕಿ ಅರಣ್ಯ ಇಲಾಖೆ ಭರವಸೆ ಹೆಚ್ಚಿಸಿತು. ತಾಲೀಮಿನ ವೇಳೆ ಡಿಸಿಎಫ್ ಡಾ.ವಿ.ಕರಿಕಾಳನ್, ಪಶುವೈದ್ಯ ಡಾ.ಹೆಚ್.ರಮೇಶ, ಸಹಾ ಯಕ ರಂಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು, ಆನೆಗಳ ವರ್ತನೆಯನ್ನು ಸೂಕ್ಷö್ಮವಾಗಿ ಪರಿಶೀಲಿಸಿದರು. ಈ ಸಂದರ್ಭ ದಲ್ಲಿ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆನೆಗಳು ಸಹಜವಾಗಿ ತಾಲೀಮಿ ನಲ್ಲಿ ಪಾಲ್ಗೊಂಡಿದ್ದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Translate »