ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆಗೆ ಸಲಹೆ
ಮೈಸೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆಗೆ ಸಲಹೆ

July 15, 2021

ಗುಂಡ್ಲುಪೇಟೆ, ಜು.14(ಸೋಮ್.ಜಿ)- ತಾಲೂಕಿನ ತೆರಕಣಾಂಬಿ ಗ್ರಾಮದ ನಾಯಕರ ಸಮುದಾಯ ಭವನದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ), ಗುಂಡ್ಲುಪೇಟೆ ಸ್ವ-ಸಹಾಯ ಮತ್ತು ಪ್ರಗತಿ ಬಂಧು ಸಂಘಗಳ ಉಳಿತಾ ಯಕ್ಕೆ ಬಡ್ಡಿ ರೂಪದಲ್ಲಿ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಗ್ರಾಮದ ಮುಖಂಡ ರಾದ ರವಿಬುದ್ದಿ, ಶಾಂತಮಲ್ಲಪ್ಪ ಉದ್ಘಾಟಿಸಿದರು.

ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತ ನಾಡಿ, ಯೋಜನೆಯಿಂದ ದೊರೆಯುವ ಸೌಲಭ್ಯಗಳನ್ನು ತಳಮಟ್ಟದ ವರ್ಗವು ಪಡೆಯ ಬೇಕು. ಸಮಾಜದ ಪ್ರತಿಯೊಂದು ರಂಗ ದಲ್ಲೂ ನಮ್ಮ ಸಂಘದ ಸದಸ್ಯರು ಗುರುತಿಸಿ ಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ರೈತ ಮುಖಂಡ ಶಾಂತಮಲ್ಲಪ್ಪ ಮಾತನಾಡಿ, ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು ಪಾರದರ್ಶಕವಾಗಿ ನಡೆಯು ತ್ತಿದ್ದು, ಜನರ ಮನೆ ಬಾಗಿಲಿಗೆ ಸೌಲಭ್ಯ ಗಳನ್ನು ತಲುಪಿಸುವ ಕೆಲಸವನ್ನು ಯೋಜ ನೆಯ ಪ್ರತಿನಿಧಿಗಳು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಪ್ರಾಧ್ಯಾಪಕ ಲಕ್ಕೂರು ಚಂದ್ರು ಮಾತನಾಡಿದರು.

ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್, ಗ್ರಾಪಂ ಅಧ್ಯಕ್ಷೆ ಶಾಂತಿ, ಸದಸ್ಯ ರಾದ ಶಶಿ, ಮಂಜುಳ, ವಲಯ ಮೇಲ್ವಿಚಾ ರಕ ಆನಂದ್, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಜರಿದ್ದರು.

Translate »