ಬೆAಗಳೂರು: ಕಳೆದ ಕೆಲವು ತಿಂಗಳು ಗಳಿಂದ ಸತತ ವಾಗಿ ಡೀಸೆಲ್ ದರ ಏರಿಕೆಯಾಗಿ ರುವ ಹಿನ್ನೆಲೆ ಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಚಿಂತನೆ ನಡೆ ಸುತ್ತಿದೆ ಎಂದು ತಿಳಿದು ಬಂದಿದೆ.
ನಿಗಮದ ಆದಾಯದ ಶೇ.೬೦ರಷ್ಟು ಹಣವನ್ನು ಇಂಧನ ಖರೀದಿಗೆ ವಿನಿ ಯೋಗಿಸಲಾಗುತ್ತಿದ್ದು, ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡಲು ಸರ್ಕಾರದೊಂದಿಗೆ ಮಾತುಕತೆ ನಡೆಸ ಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬಾರಾವ್ ಮಾತನಾಡಿ, ಶೇ.೨೫ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಕೆಎಸ್‌ಆರ್ ಟಿಸಿ ವಾರದ ಹಿಂದೆ
ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ ಎಂದು ಹೇಳಿದ್ದಾರೆ. ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮಾತನಾಡಿ, ಮೂರು ವರ್ಷಗಳ ಹಿಂದೆ ಪ್ರಯಾಣ ದರವನ್ನು ಹೆಚ್ಚಿಸಿದಾಗ ನಿಗಮದ ಶೇ.೩೨ ಆದಾಯವನ್ನು ಇಂಧನ ಖರೀದಿಸಲು ಬಳಸಲಾಗುತ್ತಿತ್ತು.
ಇದೀಗ ಶೇ.೬೦ರಷ್ಟು ಆದಾಯವನ್ನು ಬಳಕೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ ನಿಗಮದ ಈ ಮನವಿಯನ್ನು ಸರ್ಕಾರ ತಿರಸ್ಕರಿಸುವ ಸಾಧ್ಯತೆಗಳಿವೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಈ ನಡುವೆ ಈ ಸಂಬAಧ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಪಡೆಯಲು ಯತ್ನ ನಡೆಸಲಾಗಿದ್ದು, ಸಚಿವರು ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂದಿನ ೩ ತಿಂಗಳುಗಳಲ್ಲಿ ಕೆಎಸ್‌ಆರ್ ಟಿಸಿಗೆ ೫೦ ಎಲೆಕ್ಟಿçಕ್ ಬಸ್‌ಗಳು ಸೇರ್ಪಡೆಯಾಗಲಿದ್ದು, ಈ ಪೈಕಿ ೧ ಬಸ್ ಅನ್ನು ಮುಂದಿನ ತಿಂಗಳು ಕೆಲವು ವಾರಗಳ ಕಾಲ ಪ್ರಯೋಗಿಕವಾಗಿ ಓಡಿಸಲಾಗುತ್ತದೆ ಎನ್ನಲಾಗಿದೆ.