ತಮಿಳುನಾಡು ತಿಪ್ಪರಲಾಗ ಹಾಕಿದರೂ ಮೇಕೆದಾಟು ಯೋಜನೆ ಅನುಷ್ಠಾನ
ಮೈಸೂರು

ತಮಿಳುನಾಡು ತಿಪ್ಪರಲಾಗ ಹಾಕಿದರೂ ಮೇಕೆದಾಟು ಯೋಜನೆ ಅನುಷ್ಠಾನ

June 15, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ನುಡಿ
ಬೆಂಗಳೂರು, ಜೂ. ೧೪(ಕೆಎಂಶಿ)-ತಮಿಳುನಾಡು ಸರ್ಕಾರ ಎಷ್ಟೇ ವಿರೋಧ ಮಾಡಿದರೂ, ಮೇಕೆದಾಟು ಯೋಜನೆಯನ್ನು ಕಾನೂನಾತ್ಮಕವಾಗಿ ಅನುಷ್ಠಾನಗೊಳಿ ಸಿಯೇ ತೀರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತಂತೆ ಚರ್ಚೆಗೆ ಕೈಗೆತ್ತಿಕೊಳ್ಳಬಾರ ದೆಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿಯವರಿಗೆ ಪತ್ರ ಬರೆದಿರುವುದು ಅಲ್ಲಿನ ಅವರ ರಾಜಕೀಯ ತಂತ್ರಗಾರಿಕೆ ಯಾಗಿದೆ. ಕಾವೇರಿ ನದಿ ವಿಚಾರವನ್ನಿಟ್ಟುಕೊಂಡೇ ತಮಿಳುನಾಡಿನಲ್ಲಿ ಪಕ್ಷಗಳು ರಾಜಕೀಯ ಮಾಡುತ್ತವೆ. ಇದು ನಿನ್ನೆಯದಲ್ಲ. ಶತಮಾನ ದಿಂದಲೇ ನಡೆದುಕೊಂಡು ಬಂದಿರುವುದಿದೆ. ಕಾವೇರಿ ಸಭೆ ಯಲ್ಲಿ ಈ ಹಿಂದೆ ೧೫ ಬಾರಿ ಚರ್ಚೆ ನಡೆದಿದೆ. ಆ ಸಂದರ್ಭ ದಲ್ಲಿ ತಮಿಳುನಾಡು ಅಪಸ್ವರವೆತ್ತದೆ, ಈಗ ಏಕಾಏಕಿ ಪ್ರಧಾನಿಯವ ರಿಗೆ ಪತ್ರ ಬರೆದು, ರಾಜಕೀಯ ಮಾಡಲು ಮುಂದಾಗಿದೆ ಎಂದರು.

ತಮಿಳುನಾಡು ಸರ್ಕಾರ ಬರೆದಿರುವ ಪತ್ರವೇ ಕಾನೂನು ವಿರೋಧವಾಗಿದೆ. ೪.೫ ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿ ಯಲು ಬಳಸಿಕೊಳ್ಳುವ ಯೋಜನೆ ಇದಾಗಿದೆ. ಅದಕ್ಕೆ ವಿರೋಧ ಮಾಡೋದು ಸರಿಯಲ್ಲ. ಕಾವೇರಿ ನ್ಯಾಯಾಧೀಕರಣದ ತೀರ್ಪಿ ನಂತೆ ತಮಿಳುನಾಡಿಗೆ ಪ್ರತಿ ವರ್ಷವೂ ನೀರನ್ನು ಹರಿಸುತ್ತಿದ್ದೇವೆ. ಅವರ ಪಾಲಿನ ಒಂದು ಹನಿ ನೀರನ್ನು ನಾವು ಬಳಕೆ ಮಾಡಿ ಕೊಂಡಿಲ್ಲ. ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಇವರಿಗಿರುವ ಕಷ್ಟವೇನು ಎಂದು ಪ್ರಶ್ನಿಸಿದ್ದಾರೆ. ನಮ್ಮ ನೀರನ್ನು ನಮ್ಮ ಭಾಗದಲ್ಲೇ ಹಿಡಿದಿಟ್ಟುಕೊಂಡು,ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ರಾಜ್ಯ ಸರ್ಕಾರದ ಡಿಪಿಆರ್‌ಗೆ ಪರಿಶೀಲಿಸಿ, ಕಾವೇರಿ ಪ್ರಾಧಿ ಕಾರಕ್ಕೆ ನೀಡಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ತಮಿಳುನಾಡು ಸರ್ಕಾರ ಇಂತಹ ನಿಲುವು ಕೈಗೊಂಡಿರುವುದು ಸರಿಯಲ್ಲ. ರಾಷ್ಟçದ ೩೦ ರಾಜ್ಯದ ಜನ, ವಿವಿಧ ದೇಶದ ಜನ ಇಲ್ಲಿ ವಾಸವಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆಯುವಾಗ ಒಕ್ಕೂಟದ ವ್ಯವಸ್ಥೆ ವಿರುದ್ಧ ನಿಂತಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಕೇಂದ್ರ ಜಲಶಕ್ತಿ ಕೂಡ ಸಿಡಬ್ಲೂö್ಯ ಸಿಗೆ ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ಚರ್ಚೆ ಆಗಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮತ್ತು ಸಿಡಬ್ಲೂö್ಯಸಿ ಗಮನಕ್ಕೆ ತಂದಿದ್ದೇವೆ. ಜೂನ್ ೧೭ರಂದು ಸಭೆ ಇತ್ತು. ಪ್ರಧಾನಿ ಪ್ರವಾಸ ಇರುವುದರಿಂದ ಆಚೀಚೆ ಆಗಿ ೨೩ಕ್ಕೆ ಹೋಗಬಹುದು ಎಂದರು.

Translate »