ಸೋಲನ್ನು ಜೀರ್ಣಿಸಿಕೊಳ್ಳುವುದರಿಂದ ಉತ್ತಮ ಸಾಧನೆ ಸಾಧ್ಯ
ಮಂಡ್ಯ

ಸೋಲನ್ನು ಜೀರ್ಣಿಸಿಕೊಳ್ಳುವುದರಿಂದ ಉತ್ತಮ ಸಾಧನೆ ಸಾಧ್ಯ

October 22, 2020

ಶ್ರೀರಂಗಪಟ್ಟಣ, ಅ,21(ವಿನಯ್‍ಕಾರೇಕುರ)- ಪ್ರತಿಯೊಬ್ಬ ಮನುಷ್ಯನಿಗೆ ಓದು ಮತ್ತು ಕ್ರೀಡೆ ಎರಡು ಇರಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಭೌತಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಆರೋಗ್ಯವಾಗಿ ಇರಬೇಕು ಕೇವಲ ಕಾಯಿಲೆ ಇಲ್ಲ ಎಂದರೆ ಆರೋಗ್ಯವಾಗಿ ಇದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಭೌತಿಕ ವಾಗಿ ಸಶಕ್ತವಾಗಿ ಲವಲವಿಕೆಯನ್ನು ಕಂಡುಕೊಳ್ಳಬೇಕೆಂದರೆ ಮತ್ತು ಮಾನಸಿಕವಾಗಿ ಕ್ರಿಯಾ ಶೀಲವಾಗಿರಬೇಕೆಂದರೆ ಕ್ರೀಡೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ನೆಹರು ಯುವಕೇಂದ್ರ ಸಹಯೋಗದಲ್ಲಿ ಶ್ರೀರಂಗಪಟ್ಟಣ ಕರಿಗಟ್ಟ ದಲ್ಲಿ ಕ್ರೀಡಾ ದಸರಾ ಅಂಗವಾಗಿ ಚಾರಣ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತ ಕಳೆದ ಬಾರಿ ಹಲವು ಕಾರ್ಯಕ್ರಮವನ್ನು ಆಯೋಜಿಸಿತ್ತು ಈ ಬಾರಿಯ ದಸರಾವನ್ನು ಸರಳ, ಸಾಂಸ್ಕøತಿಕ ಮತ್ತು ಪಾರಂಪರಿಕವಾಗಿ ಆಚರಣೆ ಮಾಡಬೇಕು ಎಂದು ನಿರ್ಧರಿಸಿರುವುದರಿಂದ ಕ್ರೀಡೆ, ಯೋಗಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಕೈಗೊಂಡು ಇಂದು ಮುಂಜಾನೆ 6.30 ಗಂಟೆಯಿಂದಲೆ ಬೆಟ್ಟ ಹತ್ತುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾವೆಲ್ಲರೂ ಭಾಗವಹಿ ಸುತ್ತಿರುವುದು ಸಂತಸವಾಗಿದೆ ಎಂದರು. ಮೂರು ವರ್ಷದಿಂದ 75 ವರ್ಷದ ವಯಸ್ಸಿ ನವರು ಭಾಗವಹಿಸಿ ಯಶಸ್ವಿಯಾಗಿ ಚಾರಣವನ್ನು ಮುಗಿಸಿದ್ದಾರೆ ಹಾಗಾಗಿ ಎಲ್ಲರಿಗೂ ಅಭಿನಂದನೆಗಳು ಎಂದರು.

ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾಗಿರುತ್ತದೆ ಯಾವ ವ್ಯಕ್ತಿ ಸೋಲನ್ನು ಜೀರ್ಣಿಸಿಕೊಳ್ಳಲು ಕಲಿಯುತ್ತಾನೋ ಅಂತಹ ವ್ಯಕ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಕೊರೋನಾ ಓಡಿಸುವ ಕಲಿಗಳಾಗಿ, ಯುವ ಸೇನಾನಿಗಳಾಗಿ ಜಾಗೃತಿಯನ್ನು ಮೂಡಿಸಬೇಕುಎಂದರು. ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ತಹಶೀಲ್ದಾರ ರೂಪ, ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತ, ಶ್ರೀರಂಗಪಟ್ಟಣದ ಸಹಾಯಕ ಆಯುಕ್ತರಾದ ಶಿವಾನಂದ ಮೂರ್ತಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

 

 

Translate »