ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಉಳಿಸಲು ಆಗ್ರಹಿಸಿ ಪ್ರತಿಭಟನೆ 
ಮಂಡ್ಯ

ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಉಳಿಸಲು ಆಗ್ರಹಿಸಿ ಪ್ರತಿಭಟನೆ 

October 22, 2020

ಮಂಡ್ಯ, ಅ.21- ಸರ್ಕಾರಿ ಸ್ವಾಮ್ಯ ದಲ್ಲೇ ಮೈಶುಗರ್ ಕಾರ್ಖಾನೆಯನ್ನು ಉಳಿಸಿ ಕೊಂಡು ಕಬ್ಬು ಅರೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೀವನಾಡಿ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕೆಂದು ರೈತರು, ಜನಪರ ಹೋರಾಟಗಾರರು ಮತ್ತು ದಲಿತ ಸಂಘ ಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮನವಿಗಳನ್ನು ನೀಡಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದರೂ ಪ್ರಯೋ ಜನವಾಗಿಲ್ಲ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಕಾರ್ಖಾನೆ ಆರಂಭಿಸುವ ಬದಲು ಸುಮ್ಮನೆ ಕಾಲಹರಣ ಮಾಡಲಾಗುತ್ತಿದೆ. ಇದಲ್ಲದೆ ಸರ್ಕಾರ ತಾನೇ ನೇಮಿಸಿದ ತಜ್ಞರ ಸಮಿತಿಯ ವರದಿಯನ್ನು ಗಮನಕ್ಕೆ ತೆಗೆದುಕೊಳ್ಳದೇ ಖಾಸಗೀಕರಣಕ್ಕೆ ಪ್ರಯತ್ನಿಸುತ್ತಿರುವುದು ಸರಿಯಲ್ಲ. ಸರ್ಕಾರ ಮೈಶುಗರ್ ಕಾರ್ಖಾನೆ ಯನ್ನು ಸಾರ್ವಜನಿಕ ಸ್ವಾಮದಲ್ಲಿ ಉಳಿಸಿ ಕೊಂಡು ಕಬ್ಬು ಅರೆಯಲು ಆರಂಭಿಸುವ ಬದಲಿಗೆ ಒಂದು ರೀತಿಯಲ್ಲಿ ಕೆಟ್ಟ ಹಟಕ್ಕೆ ಬಿದ್ದಿರುವಂತೆ ತೋರುತ್ತಿದೆ. ಮತ್ತು ಕಾರ್ಖಾನೆ ಯನ್ನು ಆರಂಭ ಮಾಡಿ ರೈತರ ಆತಂಕ ವನ್ನು ದೂರು ಮಾಡಲು ಪ್ರಯತ್ನಿಸುತ್ತಿಲ್ಲ, ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗೀಕರಣದ ಮೂಲಕ ಮೈಶುಗರ್ ಎಂಬ ಜಿಲ್ಲೆಯ ಜನರ ಸ್ವಾಭಿಮಾನವನ್ನು ಮಾರಾಟ ಮಾಡಲು ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಆಯಕಟ್ಟಿನ ಆಸ್ತಿಗಳನ್ನು ಖಾಸಗೀಯವರಿಗೆ ಹಸ್ತಾಂತರ ಮಾಡಲು ಮಂಡ್ಯ ಜಿಲ್ಲೆಯ ಜನರು ಬಿಡುವುದಿಲ್ಲ. ಆದರೂ, ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಿ ಸುತ್ತಿರುವುದು ಜಿಲ್ಲೆಯ ಜನರ ಸ್ವಾಭಿಮಾನ ಮತ್ತು ತಾಳ್ಮೆಯನ್ನು ಕೆಣಕುತ್ತಿದೆ. ಜಿಲ್ಲೆಯ ದಂಡಾಧಿಕಾರಿಗಳು ಕೂಡ ಈ ವಿಚಾರ ದಲ್ಲಿ ಜಿಲ್ಲೆಯ ರೈತರ ಮತ್ತು ಜನರ ಪರವಾಗಿ ಸರ್ಕಾರದ ಮನವೊಲಿಸಲು ಪ್ರಯತ್ನಿಸುತ್ತಿದ್ದಂತೆ ಕಾಣುತ್ತಿಲ್ಲ. ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಯುವಂತೆ ಮಾಡಬೇಕು. ಕೂಡಲೇ ಕಬ್ಬು ಅರೆಯಲು ಕಾರ್ಖಾನೆ ಆರಂಭಿಸ ಬೇಕು ಎಂದು ಆಗ್ರಹ ಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸುನಂದಾ ಜಯರಾಂ, ಮುz್ದÉೀಗೌಡ, ಎಂ.ಬಿ. ಶ್ರೀನಿವಾಸ್, ಸಿ.ಕುಮಾರಿ, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಕಿರಂಗೂರು ಪಾಪು, ಕೆ.ಬೋರಯ್ಯ, ಮುದ್ದೇಗೌಡ, ಚಂದ್ರಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Translate »