ಡಿಜಿಟಲ್ ಗ್ರಂಥಾಲಯ; ಒಂದೇ ವರ್ಷದಲ್ಲಿ 25 ಲಕ್ಷ ಸದಸ್ಯರು!
ಮೈಸೂರು

ಡಿಜಿಟಲ್ ಗ್ರಂಥಾಲಯ; ಒಂದೇ ವರ್ಷದಲ್ಲಿ 25 ಲಕ್ಷ ಸದಸ್ಯರು!

February 26, 2021

ಮೈಸೂರು,ಫೆ.25(ವೈಡಿಎಸ್)- ಕೊರೊನಾ ವೇಳೆ ಇ-ಗ್ರಂಥಾಲಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ವರ್ಷದ ಅವಧಿಯಲ್ಲಿ 25 ಲಕ್ಷ ಮಂದಿ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‍ಕುಮಾರ್ ಹೊಸಮನಿ ತಿಳಿಸಿದರು.

ಮೈಸೂರು ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ವೈದ್ಯವಾರ್ತಾ ಪ್ರಕಾಶನ ಆಯೋಜಿಸಿದ್ದ ಕೆ.ಎಸ್.ಸಿಂಹ ಅವರ `ಚೌಪದಿಯ ಶಿಶಿರ’ ಕೃತಿ ಬಿಡುಗಡೆಗೊಳಿಸಿ, ಮಾತನಾಡಿದರು.

11 ಸಾವಿರ ಸದಸ್ಯತ್ವ: ಕೊರೊನಾ ಸಂದರ್ಭ ಓದುಗರ ಮನೆ ಬಾಗಿಲಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ 2020ರ ಫೆ.26ರಂದು ಇ-ಗ್ರಂಥಾಲಯ ಪ್ರಾರಂಭಿಸಲಾಯಿತು. 1 ವರ್ಷ ದಲ್ಲಿ 25 ಲಕ್ಷ ಜನ ಸದಸ್ಯರಾಗಿದ್ದಾರೆ. 4 ಲಕ್ಷ ಸದಸ್ಯ ರಿರುವ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 3.97 ಲಕ್ಷ ಮತ್ತು ಹಾಸನ ಜಿಲ್ಲೆ 2.55 ಲಕ್ಷ ಸದಸ್ಯರಿದ್ದು, ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ. ಆದರೆ, ಮೈಸೂರಲ್ಲಿ 11 ಸಾವಿರ ಮಂದಿಯಷ್ಟೇ ಸದಸ್ಯರಾಗಿದ್ದಾರೆ. ಹೆಚ್ಚು ಮಂದಿ ಇ-ಗ್ರಂಥಾಲಯದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

31.51 ಕೋಟಿ ಜನ ವೀಕ್ಷಣೆ: ಇ-ಗ್ರಂಥಾ ಲಯದಲ್ಲಿ 25 ಲಕ್ಷ ಜನರು ಈವರೆಗೆ 20 ಲಕ್ಷ ಪುಸ್ತಕ ಓದಿದ್ದಾರೆ. 10-11 ತಿಂಗಳಲ್ಲಿ 31.51 ಕೋಟಿ ಜನರು ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ ವೆಬ್‍ಸೈಟ್ ವೀಕ್ಷಿಸಿದ್ದಾರೆ ಎಂದರು.

ಡಿಜಿಟಲೀಕರಣ: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ 30 ಜಿಲ್ಲಾ ಗ್ರಂಥಾಲಯ ಕೇಂದ್ರ, 26 ನಗರ ಗ್ರಂಥಾಲಯ ಕೇಂದ್ರ ಹಾಗೂ 216 ತಾಲೂಕು ಗ್ರಂಥಾಲಯ ಕೇಂದ್ರಗಳು ಸೇರಿ 272 ಗ್ರಂಥಾಲಯ ಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದರು.
7,500 ಗ್ರಂಥಾಲಯ: ಕರ್ನಾಟಕದಲ್ಲಿ 6.5 ಕೋಟಿ ಜನರಿದ್ದು, 7,500 ಗ್ರಂಥಾಲಯಗಳು ಕಾರ್ಯ ನಿರ್ವ ಹಿಸುತ್ತಿವೆ. ಆದರೆ, 25 ಕೋಟಿ ಜನಸಂಖ್ಯೆಯಿರುವ ಉತ್ತರ ಪ್ರದೇಶದಲ್ಲಿ ಕೇವಲ 72, ಹರಿಯಾಣದಲ್ಲಿ 15, ರಾಜಸ್ತಾನದಲ್ಲಿ 68 ಗ್ರಂಥಾಲಯಗಳಿವೆ. ಇವು ಗಳ ಸಂಖ್ಯೆ ಮತ್ತಷ್ಟು ಹೆಚ್ಚÀಬೇಕು ಎಂದರು.

ಸ್ಮಾರ್ಟ್‍ಫೆÇೀನ್‍ಗಳನ್ನು ಬಳಸುವ ಸಾರ್ವ ಜನಿಕರು ಇ-ಗ್ರಂಥಾಲಯಕ್ಕೆ ಸದಸ್ಯರಾಗುವ ಮೂಲಕ ನಮ್ಮಲ್ಲಿರುವ 4.34 ಲಕ್ಷ ಡಿಜಿಟಲ್ ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆ. ಜತೆಗೆ ಕಣಜ, ಶೋದ್ ಗಂಗಾ, ಕೆಎಎಸ್, ಐಎಎಸ್ ಸಂಬಂಧಿಸಿದ ಪುಸ್ತಕ ಗಳು, ವಿವಿಧ ಭಾಷೆಯ ದಿನಪತ್ರಿಕೆಗಳನ್ನೂ ಉಚಿತ ವಾಗಿ ಓದಬಹುದು. ಜತೆಗೆ 1ರಿಂದ 12 ತರಗತಿಯ ರಾಜ್ಯ ಸರ್ಕಾರದ ಪಠ್ಯಕ್ರಮ ಶಾಲಾ ಪುಸ್ತಕಗಳು, ಸಿಬಿ ಎಸ್‍ಇ, ಎನ್‍ಸಿಇಆರ್‍ಟಿಯ ಪಠ್ಯಕ್ರಮ ಪುಸ್ತಕಗಳು ದೊರೆಯಲಿವೆ. ಮಕ್ಕಳು ಪುಸ್ತಕ ಕಳೆದುಕೊಂಡರೆ ಅಂಗಡಿಗೆ ಹೋಗಿ ಖರೀದಿಸಬೇಕಿಲ್ಲ. ಇ-ಗ್ರಂಥಾ ಲಯದಲ್ಲೇ ಓದಿಕೊಳ್ಳಬಹುದು ಎಂದರು.

ಲೇಖಕರು ತಮ್ಮ ಕೃತಿಗಳ ಪಿಡಿಎಫ್ ಕಾಪಿ ನೀಡಿ ದರೆ ಇ-ಗ್ರಂಥಾಲಯದಲ್ಲಿ ಅಳವಡಿಸುತ್ತೇವೆ. ನಿಮ್ಮ ಪುಸ್ತಕವನ್ನು ಇಡೀ ಜಗತ್ತೇ ವೀಕ್ಷಿಸುತ್ತದೆ. ಆದ್ದರಿಂದ ಕೃತಿಗಳನ್ನು ಪಿಡಿಎಫ್ ವ್ಯವಸ್ಥೆಯಲ್ಲಿ ಕಳುಹಿಸಿಕೊಡ ಬೇಕು ಎಂದು ಲೇಖಕರಲ್ಲಿ ಮನವಿ ಮಾಡಿದರು.

ಪ್ರತಿ ವರ್ಷ 8-10 ಸಾವಿರ ಪುಸ್ತಕಗಳು ರಾಜ್ಯ ಗ್ರಂಥಾ ಲಯ ಪುಸ್ತಕ ಖರೀದಿ ಆಯ್ಕೆ ಸಮಿತಿಗೆ ಬರುತ್ತಿವೆ. ಕನ್ನಡ, ತೆಲುಗು, ತಮಿಳು, ಉರ್ದು, ಮರಾಠಿ ಸೇರಿ ವಿವಿಧ ಭಾಷೆಯ ಪುಸ್ತಕಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದರು. ಗ್ರಂಥಾಲಯಗಳು ಸಾಮಾನ್ಯರ ವಿವಿ ಎಂದು ಕರೆಯುತ್ತೇವೆ. ಪುಸ್ತಕಗಳು ಬದುಕಿನ ದಾರಿದೀಪ. ಶಾಲೆ, ಗ್ರಂಥಾಲಯಗಳ ಸಂಖ್ಯೆ ಹೆಚ್ಚಿದಷ್ಟು ಸುಶಿಕ್ಷಿತ, ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ ಎಂದರು.

ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಸಿದ್ದರಾಮಯ್ಯ, ಹಿರಿಯ ಸಾಹಿತಿ ಪ್ರೊ.ಕೆ. ಭೈರವಮೂರ್ತಿ, ವೈದ್ಯವಾರ್ತಾ ಪ್ರಕಾಶನ ಸ್ಥಾಪಕ ನಿರ್ದೇಶಕ ಡಾ.ಎಂಜಿಆರ್ ಅರಸ್, ಅರಸು ಅಕಾ ಡೆಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ,, ಚುಟುಕು ಸಿರಿ ರತ್ನ ಹಾಲಪ್ಪಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎನ್.ಸತೀಶ್, ರೋಟರಿ ಐವರಿ ಸಿಟಿ ಅಧ್ಯಕ್ಷ ಬಿ. ಹರೀಶ್, ಲೇಖಕ ಕೆ.ಎಸ್.ಸಿಂಹ ಉಪಸ್ಥಿತರಿದ್ದರು.

Translate »