ಮೈಸೂರು, ಆ.27- ಸಣ್ಣಪುಟ್ಟ ಆರ್ಥಿಕ ವಹಿವಾಟಿಗೂ ಡಿಜಿಟಲ್ ಪೇಮೆಂಟ್‍ಗೆ ಒತ್ತಾಸೆ ನೀಡುತ್ತಿರುವ ಕೇಂದ್ರ ಸರ್ಕಾರ, ಈಗ ದಿನ ಬಳಕೆ ವಸ್ತುಗಳ ಖರೀದಿಯಲ್ಲೂ ಕಡ್ಡಾಯ ಡಿಜಿಟಲ್ ಪೇಮೆಂಟ್‍ಗೆ ಕಟ್ಟಾದೇಶ ಹೊರಡಿಸಿದೆ. ಅದರಲ್ಲೂ ದಿನ ಬಳಕೆಯ ಗ್ಯಾಸ್ ಸಿಲಿಂಡರ್ ಸರಬ ರಾಜಲ್ಲೂ 2020ರ ಆಗಸ್ಟ್‍ನಿಂದಲೇ ಶೇ.100ರಷ್ಟು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ ಗ್ರಾಹಕರು ತಮ್ಮ ಮೊಬೈಲ್‍ನ ಪ್ಲೇ ಸ್ಟೋರ್ ಓಪನ್ ಮಾಡಿ, ಸರ್ಚ್ ಬಾರ್‍ನಲ್ಲಿ ಊP Pಚಿಥಿ ಎಂದು ಟೈಪ್ ಮಾಡಿ, ಊP Pಚಿಥಿ ಡೌನ್‍ಲೋಡ್ ಮಾಡಿ, ಓeತಿ Useಡಿ ಮೇಲೆ ಕ್ಲಿಕ್ ಮಾಡಿ ನಂತರ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು. ತದನಂತರ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ, ಔಖಿPಯನ್ನು ಪರಿಶೀಲಿಸಿ, ನೀವು ಬಯಸಿದ ಪಾಸ್‍ವರ್ಡ್ ನೀಡಿ ಸಬ್‍ಮಿಟ್ ಅನ್ನು ಕ್ಲಿಕ್ ಮಾಡಿದರೆ ಇಡೀ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಮೊಬೈಲ್‍ನಲ್ಲಿ ಸಂಗ್ರಹವಾಗುವ ಊP Pಚಿಥಿ ಆ್ಯಪ್ ಮೂಲಕ ಇನ್ನು ಮುಂದೆ ಸಿಲಿಂಡರ್ ಖರೀದಿಗೆ ಸಂಬಂಧಿಸಿದ ಮೊತ್ತವನ್ನು ಡಿಜಿಟಲ್ ಪೇಮೆಂಟ್ ಮಾಡಬಹುದು. ಇದೊಂದು ಸರಳ ವಿಧಾನ ಆದರೆ ಇದರ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಇನ್ನಷ್ಟು ಕಾಲಾವಕಾಶ ಬೇಕಾಗಿದೆ. ಅದಕ್ಕೆ ಅವಕಾಶ ಮಾಡಿಕೊಟ್ಟರೆ, ಇದೊಂದು ಉತ್ತಮ ವಿಧಾನವಾಗಲಿದೆ ಎಂದು ಅಮರ್ ದೀಪ್ ಗ್ಯಾಸ್ ಸರ್ವೀಸ್ ಮಾಲೀಕರಾದ ಮೆಹುಲ್ ಜೆ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.