ಸಿಎಫ್‍ಟಿಆರ್‍ಐ ಸಿಬ್ಬಂದಿಗೆ ಕೊರೊನಾ ಟೆಸ್ಟ್
ಮೈಸೂರು

ಸಿಎಫ್‍ಟಿಆರ್‍ಐ ಸಿಬ್ಬಂದಿಗೆ ಕೊರೊನಾ ಟೆಸ್ಟ್

August 28, 2020

ಮೈಸೂರು, ಆ. 27 (ಆರ್‍ಕೆ)- ಮೈಸೂರಿನ ಸಿಎಫ್‍ಟಿಆರ್‍ಐ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರ್ಯಾಪಿಡ್ ಆ್ಯಂಜಿಜೆನ್ ಕಿಟ್ ಮೂಲಕ ಗುರುವಾರ ಕೊರೊನಾ ಪರೀಕ್ಷೆ ನಡೆಸಲಾಯಿತು. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಿಎಫ್‍ಟಿಆರ್‍ಐ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೋವಿಡ್ ತಪಾಸಣಾ ಶಿಬಿರವನ್ನು ಆರೋಗ್ಯ ಇಲಾಖೆ ಡಿಸ್ಟ್ರಿಕ್ಸ್ಟ್ ಸರ್ವೇಲೆನ್ಸ್ ಅಧಿಕಾರಿ ಡಾ. ಶಿವಪ್ರಸಾದ್ ಉದ್ಘಾಟಿಸಿದರು.

ಗುರುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆ ಯವರೆಗೆ ನಡೆದ ಶಿಬಿರದಲ್ಲಿ ಸಿಎಫ್‍ಟಿಆರ್‍ಐನ 121 ಮಂದಿ ಸಿಬ್ಬಂದಿಗಳ ಸ್ವ್ಯಾಬ್ ತೆಗೆದು ಕೊರೊನಾ ಟೆಸ್ಟ್ ಮಾಡ ಲಾಯಿತು. ಸಂಸ್ಥೆಯಲ್ಲಿ ಸುಮಾರು 400 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದು, ಈ ವಾರದಲ್ಲಿ ಮತ್ತೊಂದು ದಿನ ಶಿಬಿರ ನಡೆಸಿ ಉಳಿದವರಿಗೆ ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ವೈದ್ಯರು ಹಾಗೂ ನಾಲ್ವರು ನರ್ಸ್‍ಗಳು ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಸಿಬ್ಬಂದಿಗಳ ಪರೀಕ್ಷೆ ನಡೆಸಿ ಸ್ಥಳ ದಲ್ಲೇ ವರದಿ ನೀಡಿದರು. ಈ ವೇಳೆ ಜಿಲ್ಲಾ ಸರ್ಜನ್ ಡಾ.ರಾಜೇ ಶ್ವರಿ, ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ರಾಘವರಾವ್, ಕೋವಿಡ್ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷೆ ಡಾ.ಪ್ರಕಾಶ್ ಹಲಾಸಿ, ಡಾ.ಪಿ.ಪಿ.ರವೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

Translate »