ತಗ್ಗಿದ ಕೊರೊನಾ ಹಾವಳಿ; 3 ದಿನದಿಂದ ಒಂದೂ ಸಾವಿಲ್ಲ
ಮೈಸೂರು

ತಗ್ಗಿದ ಕೊರೊನಾ ಹಾವಳಿ; 3 ದಿನದಿಂದ ಒಂದೂ ಸಾವಿಲ್ಲ

December 13, 2020

ಮೈಸೂರು,ಡಿ.12(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಗಣ ನೀಯವಾಗಿ ತಗ್ಗಿದೆ. ಶನಿವಾರ 59 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.

ಕಳೆದ 3 ದಿನಗಳಿಂದ ಸೋಂಕಿತರು ಸಾವನ್ನಪ್ಪಿದ ಬಗ್ಗೆ ವರದಿಯಾಗಿಲ್ಲ. ಜಿಲ್ಲೆ ಯಲ್ಲಿ ಈವರೆಗೆ ಒಟ್ಟು 51,371 ಮಂದಿಗೆ ಸೋಂಕು ತಗುಲಿದೆ. 49,993 ಮಂದಿ ಗುಣ ವಾಗಿದ್ದಾರೆ. 375 ಮಂದಿಯಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ. ಇಂದು ಸೋಂಕಿ ತರಲ್ಲಿ ಸಾವು ವರದಿಯಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿಗೆ ಒಟ್ಟು 1003 ಮಂದಿ ಬಲಿಯಾಗಿದ್ದಾರೆ.

ರಾಜ್ಯದ ವಿವರ: ರಾಜ್ಯದಲ್ಲಿ ಶನಿವಾರ ಸೋಂಕಿತರಿಗಿಂತ ಗುಣ ವಾದವರ ಸಂಖ್ಯೆಯೇ ಹೆಚ್ಚಿದೆ. ಇಂದು 1,203 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,531 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ರಾಜ್ಯದ ಒಟ್ಟು ಸೋಂಕಿ ತರ ಸಂಖ್ಯೆ 9,00,214ಕ್ಕೆ ಏರಿದೆ. ಒಟ್ಟು 8,70,002 ಮಂದಿ ಗುಣವಾಗಿದ್ದಾರೆ. ಇನ್ನೂ 18,254 ಸಕ್ರಿಯ ಪ್ರಕರಣಗಳಿವೆ. ರಾಜ್ಯ ದಲ್ಲಿಂದು 11 ಮಂದಿ ಸಾವನ್ನಪ್ಪಿದ್ದು, ಈವ ರೆಗೆ 11,939 ಮಂದಿ ಮೃತಪಟ್ಟಂತಾಗಿದೆ. ಬಾಗಲಕೋಟೆ 8, ಬಳ್ಳಾರಿ 23, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 23, ಬೆಂಗ ಳೂರು ನಗರ 606, ಬೀದರ್ 16, ಚಾಮ ರಾಜನಗರ 20, ಚಿಕ್ಕಬಳ್ಳಾಪುರ 12, ಚಿತ್ರ ದುರ್ಗ 51, ದಕ್ಷಿಣ ಕನ್ನಡ 53, ದಾವಣ ಗೆರೆ 13, ಧಾರವಾಡ 10, ಗದಗ 6, ಹಾಸನ 26, ಹಾವೇರಿ 7, ಕಲಬುರಗಿ 13, ಕೊಡಗು 19, ಕೋಲಾರ 10, ಕೊಪ್ಪಳ 12, ಮಂಡ್ಯ 25, ಮೈಸೂರು 59, ರಾಯಚೂರು 5, ರಾಮನಗರ 2, ಶಿವಮೊಗ್ಗ 18, ತುಮಕೂರು 30, ಉಡುಪಿ 21, ಉತ್ತರಕನ್ನಡ 20, ವಿಜಯ ಪುರ 18, ಯಾದಗಿರಿ 12 ಸೋಂಕು ಪ್ರಕರಣಗಳು ಶನಿವಾರ ವರದಿಯಾಗಿವೆ.

 

 

Translate »