ಕೊಲಮಾವು ಕೋಕಿಲ ಚಿತ್ರದದಲ್ಲಿ ಡಿಂಪಲ್ ಕ್ವೀನ್ ರಚಿತಾ!
ಸಿನಿಮಾ

ಕೊಲಮಾವು ಕೋಕಿಲ ಚಿತ್ರದದಲ್ಲಿ ಡಿಂಪಲ್ ಕ್ವೀನ್ ರಚಿತಾ!

August 7, 2020

ಕೊರೊನಾ ಪರಿಸ್ಥಿತಿ ಚಿತ್ರರಂಗದ ಮೇಲೆ ಭಾರೀ ಪರಿಣಾಮ ಬೀರಿದ್ದರೂ, ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಖುಷಿಯಾಗಿದ್ದು, ಒಂದಲ್ಲಾ ಒಂದು ಸುದ್ದಿ ಕೊಡುತ್ತಲೇ ಇದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ರಚಿತಾರಾಮ್ ಅವತು ತಮ್ಮ ಅಭಿಮಾನಿಗಳಿಗೆ ಖುಷಿಕೊಡುವ ವಿಚಾರವನ್ನು ಹಂಚಿಕೊಂಡಿದ್ದಾರೆ.

2018ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಸೂಪರ್ ಹಿಟ್ ಚಿತ್ರವೊಂದರ ಕನ್ನಡ ಅವತರಿಣಿಕೆಯಲ್ಲಿ ರಚಿತಾರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕೊಲಮಾವು ಕೋಕಿಲ ಚಿತ್ರದ ರಿಮೇಕ್‍ನಲ್ಲಿ ರಚಿತಾರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮಿಳಿನ ಬಿಡುಗಡೆಗೊಂಡಿರುವ ಕೊಲಮಾವು ಕೋಕಿಲ ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದು, ಈ ಪಾತ್ರದಲ್ಲಿ ಡಿಂಪಲ್ ಕ್ವೀನ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. `ಕನ್ನಡ್ ಗೊತ್ತಿಲ್ಲ’ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಆರ್.ಜೆ ಮಯೂರ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು, ಚಿತ್ರ ಮಹಿಳಾ ಪ್ರಧಾನ ಸಿನಿಮಾವಾಗಿರಲಿದೆ ಎಂದು ತಿಳಿದುಬಂದಿದೆ.

ತಮಿಳು ಸಿನಿಮಾ ತಂಡದ ಬಳಿ ರೈಟ್ಸ್ ಬಗೆಗಿನ ಮಾತುಕತೆ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ತಮ್ಮ ಅಭಿಮಾನಿಗಳಿಗೆ ರಚಿತಾ ಮತ್ತೊಂಡು ಉತ್ತಮ ಚಿತ್ರವನ್ನು ಉಡುಗೊರೆಯಾಗಿ ನೀಡಲಿದ್ದಾರೆ.

 

 

 

Translate »