ಶ್ರೀಕೃಷ್ಣನ ನಾಯಕಿ ಭಾವನಾ ಮೆನನ್
ಸಿನಿಮಾ

ಶ್ರೀಕೃಷ್ಣನ ನಾಯಕಿ ಭಾವನಾ ಮೆನನ್

August 7, 2020

ಲವ್‍ಮಾಕ್ಟೆಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಈ ಹಿಂದೆ ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಲಿz್ದÁರೆ ಎನ್ನಲಾಗಿತ್ತು. ಆದರೆ ಈಗ ಅವರ ಬದಲಿಗೆ ಭಾವನಾ ಮೆನನ್ ನಾಯಕಿಯಾಗಿ ನಟಿಸುವುದು ಕನ್‍ಫರ್ಮ್ ಆಗಿದೆ. ಸಂದೇಶ್ ನಾಗರಾಜ್ ಅವರ ನಿರ್ಮಾಣ ಹಾಗೂ ಮೈನಾ ಖ್ಯಾತಿಯ ನಾಗಶೇಖರ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ, ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದ ಹೆಸರು ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್. ಈ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗಕ್ಕೆ ಕಮ್‍ಬ್ಯಾಕ್ ಮಾಡಬೇಕಾಗಿತ್ತು. ಆದರೆ ಅದೀಗ ಹುಸಿಯಾಗಿದೆ. ಜಾಕಿ, ವಿಷ್ಣುವರ್ಧನ, ಟಗರು ಸೇರಿದಂತೆ ಅನೇಕ ಯಶಸ್ವೀ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಮಲಯಾಳಿ ಕುಟ್ಟಿ ಭಾವನಾ ಮೆನನ್ ಈ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಅವರಿಗೆ ಮೊದಲ ಬಾರಿಗೆ ಜೊತೆಯಾಗುತ್ತಿದ್ದಾರೆ.

ಭಾವನಾ ಮೆನನ್ ತಮ್ಮ ಚಿತ್ರದ ನಾಯಕಿಯಾಗಿ ನಟಿಸಲಿz್ದÁರೆ. ಆರಂಭದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಕೇಳಿಬಂದಿದ್ದು ನಿಜ. ಆದರೆ ಡೇಟ್ಸ್ ಹೊಂದಾಣಿಕೆಯಾಗದೆ ಇದ್ದದ್ದರಿಂದ ಈಗ ಭಾವನಾ ಮೆನನ್ ಅವರು ಆಯ್ಕೆಯಾಗಿz್ದÁರೆ. ಇದು ಅಧಿಕೃತ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿz್ದÁರೆ.

ಬರುವ ಸೆಪ್ಟೆಂಬರ್ ಒಂದರಿಂದ ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ನಿರ್ದೇಶಕ ನಾಗಶೇಖರ್ ತೀರ್ಮಾನಿಸಿz್ದÁರೆ. ಮೊದಲ ಹಂತದ ಚಿತ್ರೀಕರಣ 14 ದಿನಗಳವರೆಗೆ ನಡೆಯಲಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿz್ದÁರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ದತ್ತಣ್ಣ, ಸುಹಾಸಿನಿ, ಅರುಣ್‍ಸಾಗರ್, ರಂಗಾಯಣ ರಘು ಮುಂತಾದವರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿz್ದÁರೆ. ಪ್ರೀತಂ ಗುಬ್ಬಿ ಈ ಚಿತ್ರದ ಸಂಭಾಷಣೆ ಬರೆದಿz್ದÁರೆ.

ಇನ್ನೊಂದೆಡೆ ನಾಗಶೇಖರ್, ಡಾರ್ಲಿಂಗ್ ಕೃಷ್ಣ ಅವರ ನಿರ್ಮಾಣ ಹಾಗೂ ನಿರ್ದೇಶನ ಮತ್ತು ನಟನೆಯ ‘ಲವ್ ಮಾಕ್ಟೆಲï’ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡುತ್ತಿz್ದÁರೆ. ಲವ್ ಮಾಕ್ಟೇಲ್ ಚಿತ್ರದ ರೀಮೇಕ್‍ನಲ್ಲಿ ಸತ್ಯದೇವ್ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿz್ದÁರೆ. ಇನ್ನು ಡಾರ್ಲಿಂಗ್ ಕೃಷ್ಣ ಕೂಡ ತಮ್ಮ ಲವ್‍ಮಾಕ್ಟೇಲ್ ಚಿತ್ರದ ಸೀಕ್ವೇಲ್ ಮಾಡಲು ತಯಾರಿ ನಡೆಸುತ್ತಿz್ದÁರೆ. ಇದು ಲವ್ ಮಾಕ್ಟೇಲ್ ಚಿತ್ರದ ಮುಂದುವರಿದ ಭಾಗವಾಗಿರಲಿದೆ. ಹೀಗಾಗಿ ಮೊದಲ ಭಾಗದಲ್ಲಿದ್ದ ಕೆಲವು ಪಾತ್ರಗಳು ಎರಡನೇ ಭಾಗದಲ್ಲೂ ಮತ್ತೆ ಕಾಣಿಸಿಕೊಳ್ಳಲಿವೆ.