ಗಣಪತಿಗೆ ಅಭಿಷೇಕ, 101 ಈಡುಗಾಯಿ ಒಡೆದು ಪ್ರಾರ್ಥನೆ
ಮೈಸೂರು

ಗಣಪತಿಗೆ ಅಭಿಷೇಕ, 101 ಈಡುಗಾಯಿ ಒಡೆದು ಪ್ರಾರ್ಥನೆ

August 7, 2020

ಮೈಸೂರು,ಆ.6(ಆರ್‍ಕೆಬಿ)-ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶೀಘ್ರ ಗುಣ ಮುಖರಾಗಲಿ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಮಾನಿಗಳು, ಪೌರ ಕಾರ್ಮಿಕರು ಗುರುವಾರ ಮೈಸೂರಿನ ಅಗ್ರ ಹಾರದ ನೂರೊಂದು ಗಣಪತಿಗೆ ವಿಶೇಷ ಅಭಿಷೇಕ ಮಾಡಿಸಿ, 101 ಈಡುಗಾಯಿ ಒಡೆದು ದೇವರಲ್ಲಿ ಪ್ರಾರ್ಥಿಸಿದರು. ಹಿಂದು ಳಿದ ವರ್ಗಗಳ ನಾಯಕರಾಗಿ, ಮುಖ್ಯಮಂತ್ರಿ ಯಾಗಿ ಅನೇಕ ಜನಪರ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯ, ಕೋವಿಡ್ ಪಾಸಿಟಿವ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಶೀಘ್ರ ಹೊರಬರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ನಾಗರತ್ನ ಮಂಜುನಾಥ್, ಮುಖಂಡರಾದ ಪಳನಿ ಇನ್ನಿತರರಿದ್ದರು.

Translate »