ಮಾಜಿ ಡಿಸಿಎಂ ಪರಮೇಶ್ವರ್ ಜನ್ಮದಿನ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮೈಸೂರು

ಮಾಜಿ ಡಿಸಿಎಂ ಪರಮೇಶ್ವರ್ ಜನ್ಮದಿನ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

August 7, 2020

ಮೈಸೂರು, ಆ.6(ಪಿಎಂ)- ಮಾಜಿ ಉಪ ಮುಖ್ಯ ಮಂತ್ರಿ ಜಿ.ಪರಮೇಶ್ವರ್ ಅವರ ಹುಟ್ಟುಹಬ್ಬದಂಗವಾಗಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಯಾದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಡಾ.ಜಿ.ಪರಮೇ ಶ್ವರ್ ಯುವ ಸೈನ್ಯ ವತಿಯಿಂದ ಗುರು ವಾರ ಪ್ರತಿಭಾ ಪುರ ಸ್ಕಾರ ನೀಡಿ ಅಭಿ ನಂದಿಸಲಾಯಿತು.

ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜಿಲ್ಲೆಯ 12 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಂಜನಗೂಡು ತಾಲೂಕಿನ ವಿಜ್ಞಾನ ವಿಭಾಗದ ಯೋಗೀಶ್ (ಶೇ.92.16), ಜಿ.ಸಂಗೀತಾ (ಶೇ.80.5), ಕಲಾ ವಿಭಾಗದ ಎಂ.ಜಿ.ಸತೀಶ್ (ಶೇ.74), ವಾಣಿಜ್ಯ ವಿಭಾಗದ ಜಿ.ಅನಿತಾ (ಶೇ.72), ಎಸ್.ಸಂಜನಾ (ಶೇ.72), ಟಿ.ಎ.ಮಹೇಶ್ (ಶೇ.69), ಸರಗೂರಿನ ಎಂ.ದಿವ್ಯ (ವಾಣಿಜ್ಯ-ಶೇ.85), ಮೈಸೂರಿನ ಜೆ.ಪ್ರಿಯಾಂಜನಾ (ವಿಜ್ಞಾನ-ಶೇ.77), ಹುಣಸೂರು ತಾಲೂಕಿನ ಬಿ.ಎಸ್.ಕಿರಣ್ (ವಿಜ್ಞಾನ-ಶೇ.75), ಹೆಚ್‍ಡಿ ಕೋಟೆ ತಾಲೂಕಿನ ಅಪ್ಪು (ಕಲಾ-ಶೇ.73), ಸಚಿನ್ (ಕಲಾ-ಶೇ.72) ಅವರನ್ನು ಸನ್ಮಾನಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಯುವಸೈನ್ಯದ ರಾಜ್ಯ ಸಮಿತಿ ಗೌರವಾಧ್ಯಕ್ಷ ಹೆಚ್.ಎ. ವೆಂಕಟೇಶ್ ಮಾತನಾಡಿ, ಡಾ.ಅಂಬೇಡ್ಕರ್ ಅನುಯಾಯಿ ಯಾದ ಪರಮೇಶ್ವರ್ ಅವರು ದಲಿತ ಸಮುದಾಯದ ಪ್ರಥಮ ಉಪಮುಖ್ಯಮಂತ್ರಿಯಾಗಿ ದಕ್ಷವಾಗಿ ಕಾರ್ಯ ನಿರ್ವಹಿಸಿದವರು. 2 ಬಾರಿ ಗೃಹ ಸಚಿವರಾಗಿ ಹಾಗೂ ಹಲವು ಬಾರಿ ಸಚಿವರಾಗಿ ಸಾಮಾಜಿಕ ನ್ಯಾಯದ ಕೆಲಸ ಮಾಡಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಆಡಳಿತ ಅನುಭವ ಹೊಂದಿದ ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬುದು ಸಮುದಾಯ ಹಾಗೂ ಅಭಿಮಾನಿಗಳ ಬಯಕೆ. ಅಂತಹ ಒಂದು ಸದಾವಕಾಶ ಪರಮೇಶ್ವರ್ ಅವರಿಗೆ ಒಲಿದು ಬರಲಿ ಎಂದು ಆಶಿಸಿದರು. ಸಾಹಿತಿ ಬನ್ನೂರು ಕೆ.ರಾಜು ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಸಿ.ಶ್ರೀಧರ್, ವಕೀಲರಾದ ಎ.ಆರ್.ಕಾಂತ ರಾಜ್, ತಿಮ್ಮಯ್ಯ, ಯುವಸೈನ್ಯದ ಜಿಲ್ಲಾಧ್ಯಕ್ಷ ಸಿ.ಮಂಜು ನಾಥ್, ಕಾರ್ಯಾಧ್ಯಕ್ಷ ಕೆ.ಮಹೇಶ್ ಮತ್ತಿತರರಿದ್ದರು

Translate »