ಮೈಸೂರಲ್ಲಿ ಡಿಕೆಸಿ ಪದಗ್ರಹಣ ನೇರ ಪ್ರಸಾರ ವೀಕ್ಷಿಸಿ, ಸಂಭ್ರಮಿಸಿದ ಕಾರ್ಯಕರ್ತರು
ಮೈಸೂರು

ಮೈಸೂರಲ್ಲಿ ಡಿಕೆಸಿ ಪದಗ್ರಹಣ ನೇರ ಪ್ರಸಾರ ವೀಕ್ಷಿಸಿ, ಸಂಭ್ರಮಿಸಿದ ಕಾರ್ಯಕರ್ತರು

July 3, 2020

ಮೈಸೂರು, ಜು.2(ಆರ್‍ಕೆಬಿ)- ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ರಾಗಿ ಬೆಂಗಳೂರಲ್ಲಿ ಗುರುವಾರ ಅಧಿ ಕಾರ ಸ್ವೀಕರಿಸಿದ ‘ಪ್ರತಿಜ್ಞಾ’ದಿನ ಕಾರ್ಯ ಕ್ರಮವನ್ನು ಮೈಸೂರಿನ ಇಂದಿರಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಪ್ರತಿಜ್ಞಾ’ ಕಾರ್ಯಕ್ರಮದ ನೇರ ಪ್ರಸಾರ ವನ್ನು ದೊಡ್ಡ ಟಿವಿ ಪರದೆಯಲ್ಲಿ ನೋಡಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಬಳಿಕ ಸಂವಿಧಾನದ ಪೀಠಿಕೆ ಓದಿದ ಕಾರ್ಯ ಕರ್ತರೂ ಪ್ರತಿಜ್ಞೆ ಸ್ವೀಕರಿಸಿದರು.

ನೇರ ಪ್ರಸಾರ ವೇಳೆ ಬೆಂಗಳೂರಿನಲ್ಲಿ ದೀಪ ಬೆಳಗಿಸುತ್ತಿದ್ದಂತೆ ಇಲ್ಲಿಯೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿ ಗಳು ದೀಪ ಬೆಳಗಿಸಿದರು. ಪೌರಕಾರ್ಮಿಕ, ಹೋಟೆಲ್ ಮಾಣಿ, ಕಾರ್ಖಾನೆ ನೌಕರ ಮತ್ತು ಆಟೋ ಚಾಲಕರಿಂದಲೂ ದೀಪ ಬೆಳಗಿಸಲಾಯಿತು. ಸಭಾಂಗಣದಲ್ಲಿ ಅಳ ವಡಿಸಿದ್ದ ಬೃಹತ್ ಟಿವಿ ಪರದೆಗಳಲ್ಲಿ ಒಂದ ರಲ್ಲಿ ಡಿ.ಕೆ.ಶಿವಕುಮಾರ್ ಅವರ ಪದ ಗ್ರಹಣದ ನೇರ ಪ್ರಸಾರ, ಇನ್ನೊಂದರಲ್ಲಿ ಮೈಸೂರು ಕಚೇರಿ ಕಾರ್ಯಕ್ರಮವನ್ನು `ಝೂಮ್’ ಆ್ಯಪ್ ಮೂಲಕ ನೇರ ಪ್ರಸಾರ ನಡೆಸಿ ಕೆಪಿಸಿಸಿ ಕಚೇರಿಗೆ ವರದಿ ನೀಡಲಾ ಗುತ್ತಿತ್ತು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿ ದರು. ನಂತರ `ಪಕ್ಷದ ನಿಷ್ಠಾವಂತ ಕಾರ್ಯ ಕರ್ತನಾಗಿ, ದೇಶದ ಸಂವಿಧಾನಕ್ಕೆ ಬದ್ಧ ನಾಗಿ, ಪಕ್ಷದ ತತ್ವ ಸಿದ್ಧಾಂತ, ಜಾತ್ಯತೀತ ನಿಲುವು, ಸಾಮಾ ಜಿಕ ನ್ಯಾಯಗಳನ್ನು ಜಾರಿಗೆ ತರಲು ಶ್ರಮಿ ಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದರು.

ಇದೇ ವೇಳೆ ಮೈಸೂರು ನಗರದ 65 ವಾರ್ಡ್‍ಗಳು ಹಾಗೂ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪ್ರಮುಖ ಸ್ಥಳ ಗಳಲ್ಲಿ ತಲಾ ಎರಡು ವಿಶಾಲ ಪರದೆಯ ಟಿವಿಗಳನ್ನು ಅಳವಡಿಸಲಾಗಿತ್ತು.

ಕೆಪಿಸಿಸಿ ಉಸ್ತುವಾರಿ ಎಂ.ಎಸ್.ಆತ್ಮಾ ನಂದ, ಮಾಜಿ ಶಾಸಕ ವಾಸು, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಕೆಪಿ ಸಿಸಿ ವಕ್ತಾರರಾದ ಎಂ.ಲಕ್ಷ್ಮಣ, ಮಂಜುಳಾ ಮಾನಸ, ಕೆಪಿಸಿಸಿ ವೀಕ್ಷಕ ಎಂ.ಸಿ.ಕುಮಾರ್, ಕಾಂಗ್ರೆಸ್ ಮಹಿಳಾ ಘಟಕ ನಗರಾಧ್ಯಕ್ಷೆ ಪುಷ್ಪಲತಾ, ಪಕ್ಷದ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ವಿಜಯ ಕುಮಾರ್, ನಗರಾಧ್ಯಕ್ಷ ಮೂರ್ತಿ, ಮುಖಂಡರಾದ ಹರೀಶ್‍ಗೌಡ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಂಕರೇಗೌಡ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ಬಸವರಾಜ ನಾಯಕ್, ಈಶ್ವರ ಚಕ್ಕಡಿ, ಶಿವಣ್ಣ, ರಾಜೇಂದ್ರ, ಗಿರೀಶ್, ಗೀತಾ, ಮಲ್ಲಿಗೆ ವೀರೇಶ್, ಮೋದಾ ಮಣಿ, ರಾಧಾಮಣಿ, ಮಾರುತಿ, ಮೊಹಿಸಿನ್ ಖಾನ್, ರಫೀಕ್ ಅಹಮದ್, ತ್ಯಾಗರಾಜ್ ಇನ್ನಿತರರು ಭಾಗವಹಿಸಿದ್ದರು.

Translate »