ನವದೆಹಲಿ, ಜು.2- ಎಎಸ್‍ಐ ಸಂರಕ್ಷಿತ ಸ್ಮಾರಕಗಳನ್ನು ಜು.6ರಿಂದ ಸಾರ್ವಜನಿಕ ರಿಗೆ ಮತ್ತೆ ತೆರೆಯಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಗುರುವಾರ ತಿಳಿಸಿದ್ದಾರೆ. ಧಾರ್ಮಿಕ ಸಭೆಗಳು ನಡೆಯುವ 3 ಸಾವಿರ ಎಎಸ್‍ಐ ನಿರ್ವ ಹಿಸುವ ಸ್ಮಾರಕಗಳಲ್ಲಿ 820 ಸ್ಮಾರಕಗಳನ್ನು ಜೂನ್‍ನಲ್ಲಿ ಪುನಃ ತೆರೆದಿತ್ತು. ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಎಎಸ್‍ಐ ನಿರ್ವಹಿಸುತ್ತಿರುವ 3,691 ಕೇಂದ್ರ-ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಮಾರ್ಚ್ 17ರಿಂದ ಮುಚ್ಚಲಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಎಲ್ಲಾ ಕೊರೊನಾ ಸಂಬಂಧಿತ ಪೆÇ್ರೀಟೋಕಾಲ್‍ಗಳನ್ನು ಸ್ಮಾರಕ ಅಧಿಕಾರಿಗಳು ಅನುಸರಿಸಲಿದ್ದಾರೆ ಎಂದರು.

ಮೈಸೂರು