ಮೈಸೂರು, ಜು.2- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಸೋಂಕನ್ನು ನಿಯಂತ್ರಿಸುವ ನಿಟ್ಟಿ ನಲ್ಲಿ, ರೋಗನಿರೋ ಧಕ ಶಕ್ತಿಯನ್ನು ವೃದ್ಧಿಸಿ ಕೊಳ್ಳಲು ತೆಗೆದು ಕೊಳ್ಳಬೇಕಾದ ಮುಂಜಾ ಗ್ರತಾ ಕ್ರಮಗಳ ಕುರಿತು ಮೈಸೂರಿನ ನಗರ ಕೇಂದ್ರ ಗ್ರಂಥಾಲಯ ದಲ್ಲಿ ಗುರುವಾರ ಆಯುಷ್ ಔಷಧಿಗಳನ್ನು ಸಿಬ್ಬಂದಿಗಳಿಗೆ ವಿತರಿಸಿದರು.
ಮೈಸೂರಿನ ಆಯುಷ್ ಇಲಾಖೆಯ ವೈದ್ಯರುಗಳಾದ ಡಾ.ರಾಘವೇಂದ್ರ ಮತ್ತು ಡಾ.ಸ್ವರ್ಣಲತಾರವರು ಮೈಸೂರು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸೀತಾಲಕ್ಷ್ಮೀ ಚಿವರ ಮಾರ್ಗದರ್ಶನದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಸಿಬ್ಬಂದಿಗಳಿಗೆ ಹಾಗೂ ಮಂಡಕಳ್ಳಿ ವಿಮಾನ ನಿಲ್ದಾಣ, ಇಲ್ಲಿ ಗಡಿ ಭಾಗದ ಚೆಕ್ ಪೋಸ್ಟ್ (ಬಿ.ಆರ್.ಸಿ) ಮಟ್ಟದಲ್ಲಿ ಕೋವಿಡ್-19 ಸಂಬಂಧ ಕಾರ್ಯ ನಿರ್ವಹಿ ಸುತ್ತಿರುವ ಗ್ರಂಥಾಲಯ ಇಲಾಖೆಯು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಕೋವಿಡ್-19 ರೋಗ ನಿರೋಧಕ ಆಯುಷ್ ಔಷಧಿಗಳನ್ನು ವಿತರಿಸುವುದರ ಜೊತೆಗೆ ಔಷಧಿಗಳ ಬಳಕೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್.ಬಿ ಉಪಸ್ಥಿತರಿದ್ದರು.