ಈಶ್ವರಪ್ಪ ವಿರುದ್ಧ ವಿಕಲಚೇತನರ ಪ್ರತಿಭಟನೆ
ಮೈಸೂರು

ಈಶ್ವರಪ್ಪ ವಿರುದ್ಧ ವಿಕಲಚೇತನರ ಪ್ರತಿಭಟನೆ

October 29, 2021

ಮೈಸೂರು, ಅ.28(ಎಂಟಿವೈ)- ವಿಕಲಚೇತನರ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಕ್ಷಮೆಯಾಚಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರು ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ವಿಕಲಚೇತನರು, ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಜವಾಬ್ದಾರಿ ಹಾಗೂ ಹಿರಿತನ ಮರೆತು ವಿಕಲಚೇತನ ಸಮುದಾಯವನ್ನೇ ಅವಹೇಳನ ಮಾಡಿದ್ದಾರೆ. ರಾಜಕೀಯ ಪ್ರತಿಷ್ಠೆಯ ಮಾತಿ ನಲ್ಲಿ ವಿಕಲಚೇತನರನ್ನು ಚೇಡಿಸುವಂತೆ ಮಾತನಾಡಿದ್ದಾರೆ. ಅಂಗವೈಕಲ್ಯವನ್ನು ಹಿಯ್ಯಾಳಿಸುವ ಪರಿ ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡಲೇ ವಿಕಲ ಚೇತನರ ವಿರುದ್ಧ ನೀಡಿರುವ ಹೇಳಿಕೆ ಹಿಂಪಡೆಯಬೇಕು. ಅಲ್ಲದೆ, ವಿಕಲಚೇತನ ಸಮುದಾಯದ ಕ್ಷಮೆಯಾಚಿಸ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿ ಭಟನೆಯಲ್ಲಿ ಮೈಸೂರು ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶ್ರೀಧರ್ ದೀಕ್ಷಿತ್, ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಕಿರಾಳು ನಾಗರಾಜ್ ಹಾಗೂ ಇನ್ನಿತರರು ಇದ್ದರು.

Translate »