ನೌಕರರ ಬೇಡಿಕೆ ಸಂಬಂಧ ಸಿಎಂ ಜೊತೆ ಚರ್ಚೆ ಮುಷ್ಕರ ಕೈಬಿಡಲು ಏSಖಖಿಅ ಅಧ್ಯಕ್ಷರ ಮನವಿ
ಮೈಸೂರು

ನೌಕರರ ಬೇಡಿಕೆ ಸಂಬಂಧ ಸಿಎಂ ಜೊತೆ ಚರ್ಚೆ ಮುಷ್ಕರ ಕೈಬಿಡಲು ಏSಖಖಿಅ ಅಧ್ಯಕ್ಷರ ಮನವಿ

January 24, 2023

ಮೈಸೂರು, ಜ.23 (ಎಂಟಿವೈ)-ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧಿಸಿದಂತೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಮಧ್ಯಂತರ ವರದಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದು, ಸಾರಿಗೆ ನೌಕರರು ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಮನವಿ ಮಾಡಿದ್ದಾರೆ.

ಮೈಸೂರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ನೌಕರರ ಮೇಲೆ ಅಪಾರವಾದ ಗೌರವವಿದೆ. ಅವರ ಶ್ರಮ ಹೆಚ್ಚಾಗಿದೆ. ನೌಕರರ ಬೇಡಿಕೆ ನ್ಯಾಯಯುತವಾಗಿಯೇ ಇದೆ. ಆದರೆ ಎಲ್ಲಾ ಬೇಡಿಕೆಯನ್ನು ಒಂದೇ ಬಾರಿ ಈಡೇರಿಸಲು ಸಂಸ್ಥೆಗೆ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗ ಳೊಂದಿಗೆ ಚರ್ಚಿಸಿ, ಸಾರಿಗೆ ಸಂಸ್ಥೆಯ ನೌಕರರಿಗೆ ನೆರವಾಗಲು ಕ್ರಮ ಕೈಗೊಳ್ಳಲಾ ಗುತ್ತದೆ. ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆ, ಬೇಡಿಕೆ ಕುರಿತಂತೆ ಸರ್ಕಾರ ರಚಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಸಮಿತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಕೇವಲ ಮಧ್ಯಂತರ ವರದಿಯಷ್ಟೇ ಸಲ್ಲಿಕೆಯಾಗಿದೆ. ಇಂತಹ ಸಂದರ್ಭ ದಲ್ಲಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸುವುದು ಸೂಕ್ತವಲ್ಲ.

ಕಳೆದ ಎರಡು ವರ್ಷದಿಂದ ಕೊರೊನಾ ಸಮಸ್ಯೆಯಿಂದ ಸಂಸ್ಥೆಗೆ ಆದಾಯ ಗಳಿಕೆಯಲ್ಲಿ ಹಿನ್ನಡೆಯಾಗಿದೆ. ಆದರೂ, ನೌಕರರಿಗೆ ವೇತನ ನೀಡಿದ್ದೇವೆ. ಸಂಸ್ಥೆಯ ಪರಿಸ್ಥಿತಿ ಇನ್ನು ಸುಧಾರಣೆ ಕಂಡಿಲ್ಲ. ಹಾಗಾಗಿ ಸಾರಿಗೆ ನೌಕರರು ನಾಳೆ (ಜನವರಿ24) ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯಬೇಕು ಎಂದು ಕೋರಿದರು.

ಕಳೆದ ನಾಲ್ಕು ವರ್ಷಗಳಿಂದ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿಲ್ಲ. ಡೀಸೆಲ್‍ಗೆ ಲೀಟರ್‍ಗೆ 63 ರೂ.ಇದ್ದ ವೇಳೆ ಬಸ್ ಪ್ರಯಾಣ ದರ ನಿಗದಿ ಮಾಡಲಾಗಿತ್ತು. ಆದರೆ ಇಂದು ಡೀಸೆಲ್ ಬೆಲೆ ಲೀಟರ್‍ಗೆ 100 ರೂ. ಆಗಿದೆ. ಆದರೂ ಹಳೆ ದರವನ್ನೇ ಮುಂದುವರೆಸ ಲಾಗಿದೆ. ಹಾಗಾಗಿ ಸಂಸ್ಥೆ ನಷ್ಟ ಎದುರಿಸುತ್ತಿದೆ. ಸಂಸ್ಥೆಯ ನೌಕರರಿಗೆ 1 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಕರ್ತವ್ಯದ ವೇಳೆ ಅಪಘಾತದಲ್ಲಿ ಪ್ರಾಣ ಹಾನಿ ಸಂಭ ವಿಸಿದರೆ 1 ಕೋಟಿ ರೂ. ಸಂತ್ರಸ್ತ ಸಿಬ್ಬಂ ದಿಯ ಕುಟುಂಬಕ್ಕೆ ನೀಡುವ ವ್ಯವಸ್ಥೆ ಈ ವಿಮಾ ಯೋಜನೆಯದ್ದಾಗಿದೆ. ಈ ಯೋಜನೆಯನ್ನೇ ನಮಗೂ ಮಾಡಿಸಿ ಎಂದು ಸರ್ಕಾರಿ ನೌಕರರು ಒತ್ತಾಯಿ ಸುತ್ತಿದ್ದಾರೆ ಎಂದು ಹೇಳಿದರು.

Translate »