ಮೈಸೂರು, ಏ.23(ಎಂಕೆ)- ಕೊರೊನಾ ಸೋಂಕು ಹರಡ ದಂತೆ ತಡೆಯಲು ಮೈಸೂರಿನ ಎನ್.ಆರ್.ಸಂಚಾರ ಪೊಲೀಸ್ ಠಾಣೆ ಎದುರು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರಿಂದ ಅನ್ವೇಷಣಾ ಸೇವಾ ಟ್ರಸ್ಟ್ ಸಹಕಾರ ದೊಂದಿಗೆ `ಡಿಸ್ ಇನ್ಫೆಕ್ಷನ್ ಟನಲ್'(ವೈರಾಣು ನಾಶಕ ಸುರಂಗ) ನಿರ್ಮಿಸಲಾಗಿದೆ. 40 ಸಾವಿರ ರೂ. ವೆಚ್ಚದಲ್ಲಿ ಆಟೋಮ್ಯಾಟಿಕ್ ಡಿಸ್ ಇನ್ಫೆಕ್ಷನ್ ಟನಲ್ ನಿರ್ಮಿಸಿದ್ದು, ಎನ್‍ಆರ್ ಸಂಚಾರ ಪೊಲೀಸ್ ಠಾಣೆ ಆವರಣದಲ್ಲೇ ಇರುವ ಸಿಸಿಬಿ ಮತ್ತು ಎಸಿಪಿ ಕಚೇರಿ ಸಿಬ್ಬಂದಿಗೂ ಅನುಕೂಲವಾಗಿದೆ.
ಟನಲ್‍ನಲ್ಲಿ ಸ್ವಿಮಿಂಗ್ ಪೂಲ್‍ಗೆ ಹಾಕುವ ಬ್ಲೀಚಿಂಗ್ ಪೌಡರ್ ಬಳಸಲಾಗಿದೆ. ಬೇರಾವುದೇ ಸೋಂಕು ನಿರೋಧಕ ರಾಸಾಯನಿಕ ಬಳಸಿಲ್ಲ. ಆಟೋಮ್ಯಾಟಿಕ್ ಡಿಸ್‍ಇನ್ಫೆಕ್ಷನ್ ಟನಲ್ ಆಗಿರುವುದರಿಂದ ಪದೇ ಪದೇ ಆಫ್/ಆನ್ ಮಾಡುವ ಅಗತ್ಯ ವಿಲ್ಲ ಎಂದು ಅನ್ವೇಷಣಾ ಸೇವಾ ಟ್ರಸ್ಟ್‍ನ ಅಮರನಾಥ್ ರಾಜೆ ಅರಸ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.