ಮನೆಯ ವೈದ್ಯಕೀಯ ತ್ಯಾಜ್ಯ ಪ್ರತ್ಯೇಕವಾಗಿಯೇ ಪೌರಕಾರ್ಮಿಕರಿಗೆ ನೀಡಿ
ಮೈಸೂರು

ಮನೆಯ ವೈದ್ಯಕೀಯ ತ್ಯಾಜ್ಯ ಪ್ರತ್ಯೇಕವಾಗಿಯೇ ಪೌರಕಾರ್ಮಿಕರಿಗೆ ನೀಡಿ

April 10, 2020

ಮೈಸೂರು,ಏ.9(ಎಸ್‍ಬಿಡಿ)- ಸಾರ್ವಜನಿ ಕರು ಬಳಸುವ ಮುಖ ಕವಚ(ಮಾಸ್ಕ್) ಹಾಗೂ ಕೈಗವಸು(ಗ್ಲೌಸ್) ಮೊದಲಾದ ವೈದ್ಯಕೀಯ ತ್ಯಾಜ್ಯವನ್ನು ಪೌರಕಾರ್ಮಿ ಕರಿಗೆ ಪ್ರತ್ಯೇಕವಾಗಿಯೇ ನೀಡಬೇಕೆಂದು ಮೈಸೂರು ನಗರ ಪಾಲಿಕೆ ಆಯುಕ್ತರು ಗುರುವಾರ ಮನವಿ ಮಾಡಿದ್ದಾರೆ.

ಕೆಲವರು ಬೇಜವಾಬ್ದಾರಿಯಿಂದ ಕಸದ ತೊಟ್ಟಿ, ರಸ್ತೆಬದಿ, ಚರಂಡಿ, ಹೀಗೆ ಎಲ್ಲೆಂ ದರಲ್ಲಿ ಬಿಸಾಡುತ್ತಿದ್ದಾರೆ. ಅಲ್ಲದೆ ಕೆಲವೆಡೆ ಸಾಮಾನ್ಯ ತ್ಯಾಜ್ಯದೊಂದಿಗೆ ಸೇರಿಸಿ, ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುವುದಲ್ಲದೆ, ಪೌರ ಕಾರ್ಮಿಕರು, ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ನಿರ್ಲಕ್ಷ್ಯದಿಂದ ಕೊರೊನಾ ಸೋಂಕು ಹರಡುವ ಅಪಾಯವೂ ಹೆಚ್ಚಾಗಿದೆ ಎಂದಿದ್ದಾರೆ.

ಹಾಗಾಗಿ ಸಾರ್ವಜನಿಕರು ಮಾಸ್ಕ್, ಗ್ಲೌಸ್ ಇನ್ನಿತರ ವೈದ್ಯಕೀಯ ತ್ಯಾಜ್ಯವನ್ನು ಪೇಪರ್ ನಲ್ಲಿ ಸುತ್ತಿ, ಪ್ರತ್ಯೇಕವಾಗಿ ಪೌರಕಾರ್ಮಿಕ ರಿಗೆ ನೀಡಬೇಕು. ಗೃಹ ಬಳಕೆಯ ಸಾಮಾನ್ಯ ತ್ಯಾಜ್ಯದೊಂದಿಗೆ ಈ ಹಾನಿಕಾರಕ ತ್ಯಾಜ್ಯ ವನ್ನು ಮಿಶ್ರ ಮಾಡುವವರಿಗೆ ದಂಡ ವಿಧಿಸ ಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಬಯೋ ಮೆಡಿಕಲ್ ತ್ಯಾಜ್ಯ: ಪೌರಾಡ ಳಿತದ ನಿರ್ದೇಶನದಂತೆ ಕೊರೊನಾ ಶಂಕೆ ಹಿನ್ನೆಲೆ ಕ್ವಾರಂಟೈನ್‍ನಲ್ಲಿರುವವರ ಮನೆ, ವಸತಿಗೃಹಗಳ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಕ್ವಾರಂಟೈನ್ ಮನೆಗಳ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯವೆಂದು ಪರಿಗಣಿಸಿ, 9 ವಾಹನಗಳ ಮೂಲಕ ಸಂಗ್ರಹ ಮಾಡಿ, ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ.

ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವ 9 ಪೌರಕಾರ್ಮಿಕರು ಹಾಗೂ 9 ವಾಹನ ಚಾಲಕರಿಗೆ ವೈಯಕ್ತಿಕ ಸುರಕ್ಷತೆಗಾಗಿ ಪಿಪಿಇ ಕಿಟ್ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳನ್ನು ನಿತ್ಯ ಹೈಪೋ ಕ್ಲೋರೈಟ್ ದ್ರಾವಣ ಸಿಂಪಡಿಸಿ, ಶುಚಿಗೊಳಿ ಸಲಾಗುತ್ತಿದೆ. ಕ್ವಾರಂಟೈನ್ ಮನೆಗಳು, ಕೋವಿಡ್ ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯ ವನ್ನು ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕದಿಂದ ನಿರ್ವಹಣೆ ಯಾದರೆ ಉಳಿದ ಸಾಮಾನ್ಯ ತ್ಯಾಜ್ಯವನ್ನೂ ಆಳವಾದ ಗುಂಡಿಯಲ್ಲಿ ಹಾಕಿ, ವೈಜ್ಞಾನಿಕ ವಾಗಿ ವಿಲೇವಾರಿ ಮಾಡುವ ಕಾರ್ಯ ವನ್ನು ನಗರಪಾಲಿಕೆ ತಂಡ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

Translate »