ಲಾಕ್‍ಡೌನ್‍ನಿಂದ ಪ್ರವಾಸಿ ಮಾರ್ಗದರ್ಶಿಗಳ ಜೀವನ ಮಾರ್ಗವೇ ಬಂದ್
ಮೈಸೂರು

ಲಾಕ್‍ಡೌನ್‍ನಿಂದ ಪ್ರವಾಸಿ ಮಾರ್ಗದರ್ಶಿಗಳ ಜೀವನ ಮಾರ್ಗವೇ ಬಂದ್

April 10, 2020

ಮೈಸೂರು,ಏ.9(ವೈಡಿಎಸ್)- ಲಾಕ್‍ಡೌನ್‍ನಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಒಂದು ವೇಳೆ ಲಾಕ್ ಡೌನ್ ಮುಗಿದರೂ ಪ್ರವಾಸೋದ್ಯಮ ಮೊದ ಲಿನಂತೆ ಆಗಬೇಕಾದರೆ ವರ್ಷವಾದರೂ ಬೇಕು. ಇದನ್ನೇ ನಂಬಿದ್ದ ನಮ್ಮ ಕುಟುಂಬ ಗಳು ಆರ್ಥಿಕ ಸಂಕಷ್ಟ ಎದುರಿಸಬೇಕಿದೆ. ಜತೆಗೆ ಮಗಳ ವ್ಯಾಸಂಗವನ್ನು ಮೊಟಕುಗೊಳಿಸಬೇ ಕಾದ ದುಃಸ್ಥಿತಿ ಎದುರಾಗಿದೆ. ಹಾಗಾಗಿ ಪ್ರವಾ ಸೋದ್ಯಮ ಇಲಾಖೆ ಲಾಕ್‍ಡೌನ್ ಮುಗಿಯು ವವರೆಗಾದರೂ ಗೈಡ್‍ಗಳಿಗೆ ಮಾಸಿಕ ಮೂರು ಸಾವಿರ ರೂ. ಸಹಾಯಧನ ನೀಡಿದರೆ ಹೇಗೋ ಜೀವನ ಸಾಗಿಸುತ್ತೇವೆ…

ಇದು ಪ್ರವಾಸಿ ತಾಣಗಳ ಪ್ರಸಿದ್ಧ ನಗರಿ ಮೈಸೂರಿನ ಟೂರಿಸ್ಟ್ ಗೈಡ್‍ಗಳ (ಪ್ರವಾಸಿ ಮಾರ್ಗದರ್ಶಿಗಳ) ಅಳಲು.
`ನಾನು ಮೈಸೂರು, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‍ಎಸ್ ಭಾಗದಲ್ಲಿ 10 ವರ್ಷಗಳಿಂದ ಪ್ರವಾಸಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೊರೊನಾ ಹಾವಳಿ ದೇಶ ಪ್ರವೇಶಿಸುವು ದಕ್ಕೂ ಮೊದಲು ಪ್ರತಿ ದಿನ 500-600 ರೂ. ಸಂಪಾದನೆಯಾಗು ತ್ತಿತ್ತು. ಅದರಲ್ಲಿ 200 ರೂ. ಊಟ, ತಿಂಡಿ, ಪೆಟ್ರೋಲ್‍ಗೆ ಖರ್ಚಾ ದರೂ 400 ರೂ. ಉಳಿಯುತ್ತಿತ್ತು. ಇದರಲ್ಲಿ ಕುಟುಂಬ ನಿರ್ವ ಹಣೆ ನಡೆಯುತ್ತಿತ್ತು. ಇಂದು ಖರ್ಚಿಗೂ ಹಣವಿಲ್ಲದೆ ಪರಿತಪಿಸುವ ಸ್ಥಿತಿ ಬಂದಿದೆ ಎಂದು ಮೈಸೂರು ಜೆಪಿ ನಗರದ ಮಹದೇವಪುರ ನಿವಾಸಿ, ಪ್ರವಾಸಿ ಗೈಡ್ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು.

ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದಿದ್ದು, ದುಡಿಮೆ ಇಲ್ಲದೆ ಜೀವನ ನಡೆಸುವುದೇ ಕಷ್ಟÀವಾಗಿದೆ. ಮಗಳು ಖಾಸಗಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ವರ್ಷಕ್ಕೆ 50 ಸಾವಿರ ರೂ. ಶುಲ್ಕ ಕಟ್ಟಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಡೆ ಸುವುದೇ ಕಷ್ಟವಾಗಿರುವಾಗ ಮಗಳನ್ನು ಶಾಲೆಗೆ ಸೇರಿಸುವು ದಾದರೂ ಹೇಗೆ? ಎಂಬ ಚಿಂತೆ ಕಾಡುತ್ತಿದೆ. ಒಂದು ವೇಳೆ ಏ.14ಕ್ಕೆ ಲಾಕ್‍ಡೌನ್ ಮುಗಿದರೂ ಕೊರೊನಾ ಭೀತಿಯಿಂದ ದೇಶ-ವಿದೇಶಗಳ ಪ್ರವಾಸಿಗರು ಬರಲು ಹೆದರಬಹುದು. ಆದ್ದರಿಂದ ಪ್ರವಾಸೋದ್ಯಮ ಮೊದಲಿನಂತಾಗಲು ವರ್ಷವಾದರೂ ಬೇಕು. ಆದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿ ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಪ್ರವಾಸಿ ಮಾರ್ಗದರ್ಶಿಗಳ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ನೋವು ತೋಡಿಕೊಂಡರು.

ಮಗಳ ವ್ಯಾಸಂಗ ಮೊಟಕು: ಇದುವರೆಗೆ ದುಡಿಮೆಯ ಹಣವನ್ನು ಜೀವನ ನಿರ್ವಹಣೆ ಜತೆಗೆ ಮಗಳ ವ್ಯಾಸಂಗಕ್ಕೆ ಬಳಸಲಾಗುತ್ತಿತ್ತು. ಮಗಳ ವ್ಯಾಸಂಗಕ್ಕೆ ಮೀಸಲಿಟ್ಟಿದ್ದ 30 ಸಾವಿರ ರೂ.ಗಳಲ್ಲಿ 20 ಸಾವಿರ ರೂ.ಗಳನ್ನು ಲಾಕ್‍ಡೌನ್ ಅವಧಿಯಲ್ಲಿ ಜೀವನ ನಿರ್ವ ಹಣೆಗೆ ಖರ್ಚು ಮಾಡಿದ್ದೇನೆ. ಲಾಕ್‍ಡೌನ್ ಮುಂದುವರೆದರೆ ಉಳಿದ ಹಣವೂ ಖರ್ಚಾಗಲಿದೆ. ಹಾಗಾಗಿ ಈ ಬಾರಿ ಶಾಲೆಗೆ ಸೇರಿ ಸಲು ನಮ್ಮ ಬಳಿ ಹಣವಿಲ್ಲ. ಮುಂದಿನ ಬಾರಿ ಸೇರಿಸುತ್ತೇನೆ ಎಂದು ಹೇಳಿದ್ದಕ್ಕೆ ಮಗಳು ಅಳುವುದಕ್ಕೆ ಆರಂಭಿಸಿದಳು. ಅವಳು ಅಳುವು ದನ್ನು ನೋಡಿ ನನ್ನ ಕಣ್ಣಲ್ಲಿ ನೀರುಬಂತು. `ನಿನ್ನನ್ನು ಶಾಲೆಗೆ ಸೇರಿಸಿ ದರೆ ಪದೇ-ಪದೇ ಹಣ ಪಾವತಿಸುವಂತೆ ಮನೆಗೆ ನೋಟಿಸ್ ಕಳುಹಿಸುತ್ತಾರೆ. ಇದರಿಂದ ಕಷ್ಟವಾಗುತ್ತದೆ’ ಎಂದಾಗ ಸುಮ್ಮನಾದಳು. ಒಟ್ಟಾರೆ ನಮ್ಮ ಜೀವನ ಸಂಕಷ್ಟದಲ್ಲಿದ್ದು, ಪ್ರವಾಸೋದ್ಯಮ ಇಲಾಖೆ ಗೈಡ್‍ಗಳಿಗೆ ಮಾಸಿಕ 3 ಸಾವಿರ ಧನಸಹಾಯ ಮಾಡಿದರೆ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

Translate »