ಮಂಡ್ಯದ ಸ್ವರ್ಣಸಂದ್ರಕ್ಕೆ ಡಿಸಿ, ಎಸ್‍ಪಿ ಭೇಟಿ; ಭದ್ರತೆ ಪರಿಶೀಲನೆ
ಮಂಡ್ಯ

ಮಂಡ್ಯದ ಸ್ವರ್ಣಸಂದ್ರಕ್ಕೆ ಡಿಸಿ, ಎಸ್‍ಪಿ ಭೇಟಿ; ಭದ್ರತೆ ಪರಿಶೀಲನೆ

April 10, 2020
  • ಬಡಾವಣೆ ಸುತ್ತ ನಾಕಾಬಂದಿ;ನಿವಾಸಿಗಳಲ್ಲಿ ಮಡುಗಟ್ಟಿದ ಕೊರೊನಾ ಭೀತಿಯ ಕಾರ್ಮೋಡ
  • ಮಂಡ್ಯ ತಾಲೂಕಿನ ಎಲ್ಲಾ ಅಂಗಡಿ ಮುಂಗಟ್ಟು ಬಂದ್;ವಾಹನ ಸಂಚಾರ ಸಂಪೂರ್ಣ ನಿಷೇಧ

ಮಂಡ್ಯ, ಏ.9(ನಾಗಯ್ಯ)- ಕೊರೊನಾ ಸೋಂಕು ಕಾಣಿಸಿಕೊಂಡ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಗುರುವಾರ ಸಂಜೆ ಭೇಟಿ ನೀಡಿ ಭದ್ರತೆ ಮತ್ತು ಸುರಕ್ಷತಾ ಕ್ರಮ ಕುರಿತಂತೆ ಪರಿಶೀಲನೆ ನಡೆಸಿತು.

ಚಿಸೋಂಕಿತ ವ್ಯಕ್ತಿ ವಾಸವಾಗಿರುವ ನಗರ ಸಭಾ ವ್ಯಾಪ್ತಿಯ ಸ್ವರ್ಣಸಂದ್ರ ಬಡಾ ವಣೆಯ 32,ಮತ್ತು ಅಕ್ಕಪಕ್ಕದ 30,33 ನೇ ವಾರ್ಡ್ ಸೇರಿದಂತೆ ಮೂರು ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಮೂರು ವಾರ್ಡ್‍ಗಳ ವ್ಯಾಪಕ ಭದ್ರತೆ ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಎಎಸ್ಪಿ ಶೋಭಾ ರಾಣಿ, ಡಿವೈಎಸ್‍ಪಿ ಹರೀಶ್,ಸಿಪಿಐ ವಿವೇಕಾ ನಂದ, ಪೌರಾಯುಕ್ತ ಲೊಕೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ನಗರ ಸಭೆ ಹಿರಿಯ ಆರೋಗ್ಯ ನಿರೀಕ್ಷಕ ಹರಿ ಪ್ರಸಾದ್ ಮತ್ತಿತರ ಅಧಿಕಾರಿಗಳು ಇದ್ದರು.

ಬೀದಿಗಳೂ ಲಾಕ್; ಬಡಾವಣೆಯ ಮುಖ್ಯ ರಸ್ತೆಗಳಾದ ಕೆಂಪೇಗೌಡ ರಸ್ತೆ, ದಾಸೇ ಗೌಡ ರಸ್ತೆ, ಮೈಷುಗರ್ ಪ್ರೌಢಶಾಲೆಯ ಮುಂಭಾಗದ ರಸ್ತೆ, ಗುತ್ತಲು ಮೂಲಕ ಪ್ರವೇಶಿಸುವ ಮುಖ್ಯ ರಸ್ತೆಗಳನ್ನು ದೊಡ್ಡ ಪೈಪ್‍ಗಳನ್ನು ಅಡ್ಡಲಾಗಿಟ್ಟು ಬಂದ್ ಮಾಡಲಾಗಿದೆ. ಬಡಾವಣೆಯ ಎಲ್ಲಾ ಬೀದಿ ಗಳಿಗೂ ಸಹ ಬಂಬುಗಳನ್ನು ಬಳಸಿ ಬಂದ್ ಮಾಡಲಾಗಿದೆ. ಒಟ್ಟಾರೆ ಬಡಾವಣೆಯ ಒಳಗೆ ಹೊರಗಿನಿಂದ ಯಾವುದೇ ವಾಹನಗಳು ಪ್ರವೇಶಿಸದಂತೆ ಲಾಕ್ ಮಾಡಲಾಗಿದೆ.

ಕೊರೊನಾ ಪ್ರಕರಣ ಪತ್ತೆಯಾಗಿ ಇಡೀ ಬಡಾವಣೆಯನ್ನು ಬಂದ್ ಮಾಡುತ್ತಿದ್ದ ಬೆನ್ನಲ್ಲೇ ಅಲ್ಲಿನ ನಿವಾಸಿಗಳಲ್ಲಿ ಅಘೋಷಿತ ಕೊರೊನಾ ಭೀತಿಯ ಕಾರ್ಮೋಡದ ವಾತಾ ವರಣ ಕಂಡು ಬಂತು.ಬೀದಿ ಬೀದಿಯಲ್ಲೂ ಪೊಲೀಸರ ಸುತ್ತಾಟ ಕಂಡು ಒಂದು ರೀತಿಯ ಆತಂಕದ ವಾತಾವರಣವೂ ಸೃಷ್ಠಿಯಾಗಿತ್ತು.

ಅಂಗಡಿ ಮುಂಗಟ್ಟು ಬಂದ್; ಸ್ವರ್ಣಸಂದ್ರ ಬಡಾವಣೆಯ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಡ್ಯ ತಾಲ್ಲೂಕಿನಾದ್ಯಂತ ಅಂಗಡಿ ಮುಂಗಟ್ಟು ಗಳನ್ನು ಏ.14 ರವರೆಗೂ ಬಂದ್ ಮಾಡು ವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.ಅಲ್ಲದೆ ಈ ವ್ಯಾಪ್ತಿಯಲ್ಲಿ ಅಗತ್ಯ ಸರಕು ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ವಾಹನ ಸಂಚಾರ, ಜನ ಗುಂಪಾಗಿ ಸಂಚರಿ ಸುವುದನ್ನು ಸಹ ನಿರ್ಬಂಧಿಸಿದ್ದಾರೆ.

ಕಂಟೋನ್‍ಮೆಂಟ್ ಝೋನ್; ಸ್ವರ್ಣ ಸಂದ್ರ ಬಡಾವಣೆ ವಾಪ್ತಿಯ 30,32.33 ನೇ ವಾರ್ಡ್‍ಗಳಲ್ಲಿ ಕಂಟೋನ್‍ಮೆಂಟ್ ಝೋನ್ ಎಂದೂ ಹಾಗೂ ಈ ಪರಿಮಿತಿ ಯಿಂದ 5 ಕಿಮಿ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಿಸಿ ಉಪವಿಭಾ ಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕಂಟೋನ್‍ಮೆಂಟ್ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳಾದ ದಿನಸಿ, ತರಕಾರಿ, ಹಣ್ಣು ಸೇರಿದಂತೆ ಅಗತ್ಯವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡ ಲಾಗಿದೆ. ಎಲ್ಲಾ ರೀತಿಯ ಪ್ರವೇಶ ಮತ್ತು ಹೊರ ಹೋಗುವ ಸ್ಥಳಗಳು ಪೊಲೀಸರ ಪರಿವೀಕ್ಷಣೆಯಲ್ಲಿದ್ದು ಪ್ರತಿ ನಿತ್ಯ ಪ್ರವೇಶ ಸ್ಥಳಗಳಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Translate »