ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಣೆ
ಮೈಸೂರು

ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಣೆ

March 21, 2020

ಬೆಂಗಳೂರು, ಮಾ. 20(ಕೆಎಂಶಿ)- ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಗಳಿಗೆ ಇನ್ನು ಮುಂದೆ ಪಡಿತರ ಚೀಟಿದಾರ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ವಿಧಾನಸಭೆಯಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಎ.ಟಿ.ರಾಮಸ್ವಾಮಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ತಾಳೆ ಎಣ್ಣೆ, ಉಪ್ಪು, ಸಕ್ಕರೆ, ತೊಗರಿ ಬೇಳೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ ಬಳಿಕ ಪರಿಶೀಲನೆ ಮಾಡುವುದಾಗಿ ಹೇಳಿದರು.

2016ರ ಸೆಪ್ಟೆಂಬರ್‍ನಿಂದ 25ರೂ.ಗೆ ಒಂದು ಲೀಟರ್ ತಾಳೆ ಎಣ್ಣೆ, 2016ರ ಅಕ್ಟೋಬರ್‍ನಿಂದ 2ರೂ. ಗೆ ಒಂದು ಕೆಜಿ ಉಪ್ಪು, 2017ರ ಮಾರ್ಚ್‍ನಿಂದ 15 ರೂ.ಗೆ 1 ಕೆಜಿ ಸಕ್ಕರೆ, 2017 ಏಪ್ರಿಲ್‍ನಿಂದ 38ರೂ.ಗೆ ಒಂದು ಕೆಜಿ ತೊಗರಿ ಬೇಳೆಯನ್ನು ಹಂಚಿಕೆ ಮಾಡಲಾಗುತ್ತಿತ್ತು. 2017ರ ಮೇ 15ರಂದು ಹೊಸ ಆದೇಶ ಹೊರಡಿಸಿ ತಾಳೆ ಎಣ್ಣೆ, ಸಕ್ಕರೆ, ಉಪ್ಪು ವಿತರಿಸುವುದನ್ನು ನಿಲ್ಲಿಸಲಾಗಿದೆ. 2019ರ ಸೆಪ್ಟೆಂಬರ್‍ನಲ್ಲಿ ತೊಗರಿ ಬೇಳೆಯನ್ನು ನಿಲ್ಲಿಸಲಾಗಿದೆ ಎಂದು ವಿವರಿಸಿದರು.

Translate »