ಮೈಸೂರು, ಮಾ.20- ಬೇಸಿಗೆಯಲ್ಲಿ ತೀಕ್ಷ್ಣ ವಾದ ಬಿಸಿಲಿನಿಂದ ನಮ್ಮ ಶರೀರದಲ್ಲಿನ ಉಷ್ಣಾಂ ಶವು ಹೆಚ್ಚಾಗುತ್ತದೆ. ಇದರಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಜೀರ್ಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ಸಾರ್ವಜನಿಕರು ಆರೋಗ್ಯವಂತರಾಗಿ ರಲು ದೇಹಕ್ಕೆ ಶಕ್ತಿ ನೀಡುವಂತಹ ಆಹಾರ ಪಾನೀಯಗಳ ಬಗ್ಗೆ ಅರಿವು ಅಗತ್ಯ.
ಅಗತ್ಯ ಗ್ಲೂಕೋಸ್‍ಗೆ ಪಾನೀಯ ಸೇವನೆ: ಬಿಸಿಲಿನ ತಾಪದಿಂದ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಇರುವಂತೆ ನೋಡಿಕೊಳ್ಳುವುದು. ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಆಗಾಗ್ಗೆ ನಿಧಾನವಾಗಿ ಕುಡಿ ಯುವುದು, ಹಣ್ಣಿನ ರಸ, ಪಾನಕಗಳನ್ನು ನೀರು, ಮಜ್ಜಿಗೆ/ ಲಸ್ಸಿ ನಿಂಬೆಪಾನಕ ಮತ್ತು ಎಳನೀರು ಮತ್ತು ಇನ್ನಿತರೆ ಪಾನೀಯ ಪದಾರ್ಥಗಳನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಗ್ಲೂಕೋಸ್ ಅನ್ನು ನೀಡುತ್ತವೆ.
ಶರೀರದ ಎನರ್ಜಿಗೆ ಹಣ್ಣು ತರಕಾರಿ: ಸೌತೆಕಾಯಿ, ಕುಂಬಳಕಾಯಿ, ಬೂದಗುಂಬಳ, ಸೀಮೆಬದನೆ ಕಾಯಿ, ಸೋರೆಕಾಯಿ, ಟೊಮೆಟೊ, ಕ್ಯಾರೆಟ್, ಕಲ್ಲಂಗಡಿ, ಮಾವಿನ ಹಣ್ಣು, ದ್ರಾಕ್ಷಿ, ದಾಳಿಂಬೆ ಸೇವನೆ ಶರೀರಕ್ಕೆ ಅಗತ್ಯವಾದ ಎನರ್ಜಿ ನೀಡುತ್ತವೆ.
ಸೇವಿಸಬೇಕಾದ ಆಹಾರ: ವೇಗವಾಗಿ ಜೀರ್ಣವಾಗುವ ಬೆಚ್ಚಗಿನ ಮಸಾಲೆ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸು ವುದು. ಅಂದರೆ ಅತಿಯಾದ ಖಾರ, ಹುಳಿರಸಗಳ ಸೇವನೆ, ಜಿಡ್ಡಿನ ಪದಾರ್ಥಗಳ ಸೇವನೆಯಿಂದ ದೂರ ವಿರುವುದರ ಜೊತೆಗೆ ಸಾಧ್ಯವಾದಷ್ಟು ಬಿಸಿಲಿಗೆ ಮೈಒಡ್ಡದೆ ನೆರಳಿನಲ್ಲಿ ಇರುವುದು ಆರೋಗ್ಯಕ್ಕೆ ಉತ್ತಮ.
ಧರಿಸಬೇಕಾದ ಉಡುಪುಗಳು: ಸಡಿಲವಾದ ತೆಳು ತಿಳಿ ಬಣ್ಣದ/ಬಿಳಿ ಹತ್ತಿಯ ಬಟ್ಟೆ ಧರಿಸುವುದು, ಕರ ವಸ್ತ್ರದಿಂದ ಆಗಾಗ್ಗೆ ಬೆವರನ್ನು ಒರೆಸಿಕೊಳ್ಳುವುದು, ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು, ಬಿಸಿಲಿನಿಂದ ರಕ್ಷಿಸುವ ಗಾಗಲ್ಸ್(ಕನ್ನಡಕ), ಕೊಡೆ ಮತ್ತು ತಲೆಗೆ ಕ್ಯಾಪ್ ಧರಿಸಿ ವಿಹರಿಸುವುದು.
ಸಾರ್ವಜನಿಕರಿಗೆ ಇರಬೇಕಾದ ಕನಿಷ್ಠ ಜ್ಞಾನ: ಇನ್ನು ಬೇಸಿಗೆಯಲ್ಲಿ ವ್ಯಕ್ತಿಯು ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂ ತರಿಸಿ ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆಬಟ್ಟೆಯಿಂದ ತಂಪಾದ ನೀರಿನಿಂದ ಒರೆಸು ವುದು. ಬಳಿಕ ನಿಧಾನವಾಗಿ ಸ್ವಲ್ಪ ಸಕ್ಕರೆ / ಉಪ್ಪು ಬೆರೆಸಿದ ನೀರನ್ನು ಕುಡಿಸುವುದು. ಹತ್ತಿರದ ವೈದ್ಯರನ್ನು ಕರೆಸಿರಿ ಅಥವಾ 108ಕ್ಕೆ ಕರೆ ಮಾಡು ವುದು ಅಗತ್ಯ.
ಬೇಸಿಗೆಯಲ್ಲಿ ಮಾಡಬಾರದ ಕೆಲಸಗಳು: ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಅತಿಯಾಗಿ ಸೇವಿಸಬಾರದು, ಸೋಡ, ಕಾರ್ಬೋ ನೇಟೆಡ್ ತಂಪು ಪಾನೀಯಗಳನ್ನು ಉಪಯೋಗಿ ಸಬಾರದು. ಮದ್ಯಪಾನ ನಿಷೇಧಿಸುವುದು ಒಳ್ಳೆಯದು.