ಪೌರಕಾರ್ಮಿಕರಿಗೆ ರಕ್ಷಣೆ ನೀಡಿ: ಮಾಜಿ ಮೇಯರ್ ನಾರಾಯಣ
ಮೈಸೂರು

ಪೌರಕಾರ್ಮಿಕರಿಗೆ ರಕ್ಷಣೆ ನೀಡಿ: ಮಾಜಿ ಮೇಯರ್ ನಾರಾಯಣ

March 21, 2020

ಮೈಸೂರು,ಮಾ.20-ರಾಜ್ಯ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಸೇರಿ ಸುಮಾರು 40 ಸಾವಿರ ಪೌರಕಾರ್ಮಿಕರಿದ್ದು, ಅವರಿಗೆ ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮೈಸೂರಿನ ಮಾಜಿ ಮೇಯರ್, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿ ಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೌರಕಾರ್ಮಿಕರು ಬೀದಿ ಗುಡಿಸುವುದು, ಕಸ ಸಾಗಾಣಿಕೆ ಮಾಡುವುದು, ಕಸ ಮರುವಿಂಗಡಣೆ ಮಾಡುವುದು, ಮನೆ ಮನೆಗಳಿಂದ ಕಸವನ್ನು ಸಂಗ್ರಹಣೆ ಮಾಡುವುದು ಮತ್ತು ಚರಂಡಿಗಳನ್ನು ಸ್ವಚ್ಛ ಮಾಡುತ್ತಾರೆ. ಇದಕ್ಕಾಗಿ ಇವರ ಜೀವನವನ್ನೇ ಮುಡುಪಾಗಿಟ್ಟು, ದಿನನಿತ್ಯ ಸಾರ್ವಜನಿಕ ಸ್ಥಳಗಳಲ್ಲೇ ಕೆಲಸ ಮಾಡಬೇಕಾಗುತ್ತದೆ. ಈ ಪೌರ ಕಾರ್ಮಿಕರು ಯಾವುದೇ ಮಾಸ್ಕ್ ಆಗಲಿ, ಹ್ಯಾಂಡ್ ಗ್ಲೌಸ್ ಆಗಲಿ, ಗಮ್ ಬೂಟುಗಳು ಸೇರಿ ದಂತೆ ಯಾವುದೇ ರಕ್ಷಣಾ ಪರಿಕರಗಳನ್ನು ಧರಿಸದೇ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದರಿಂದಾಗಿ ಕೊರೊನಾ ವೈರಸ್‍ಗೆ ಮೊದಲು ತುತ್ತಾಗುವುದು ಪೌರ ಕಾರ್ಮಿಕರು. ಒಬ್ಬ ಪೌರ ಕಾರ್ಮಿಕನಿಗೆ ಈ ಸೋಂಕು ತಗುಲಿದರೆ, ಇವರು ವಾಸಿಸುವ ಕೊಳಚೆ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಸಾವಿರಾರು ಜನರಿಗೆ ಕೊರೊನಾ ವೈರಸ್ ಹರಡುತ್ತದೆ. ಜೊತೆಗೆ ಪೌರ ಕಾರ್ಮಿಕರಿಗೆ ಈಗಲೂ ಬಯೋಮೆಟ್ರಿಕ್ ಹಾಜರಾತಿ ಪಡೆಯುತ್ತಿರುವುದರಿಂದ ಕೊರೊನಾ ವೈರಸ್ ಸೋಂಕು ಶೀಘ್ರವಾಗಿ ಹರಡುತ್ತದೆ. ಆದ್ದರಿಂದ ಕೂಡಲೇ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕೂಡಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಗಂಬೂಟ್, ಸಮವಸ್ತ್ರ ಇತ್ಯಾದಿ ಪರಿಕರಗಳನ್ನು ಕೂಡಲೇ ನೀಡಬೇಕು. ಇವುಗಳನ್ನು ಕಡ್ಡಾಯ ವಾಗಿ ಧರಿಸುವಂತೆ ಪೌರ ಕಾರ್ಮಿಕರಿಗೆ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಮಾಡಬೇಕಾಗಿದೆ. ರಾಜ್ಯದ ಸಾರ್ವಜನಿಕರ ಆರೋಗ್ಯ ಎಷ್ಟು ಮುಖ್ಯವೋ ಪೌರ ಕಾರ್ಮಿಕರ ಜೀವವು ಅಷ್ಟೇ ಪ್ರಾಮುಖ್ಯವಾಗಿರುತ್ತದೆ. ಪೌರ ಕಾರ್ಮಿಕರ ಆರೋಗ್ಯ ಚೆನ್ನಾಗಿದ್ದರೆ, ರಾಜ್ಯದ ಜನರ ಆರೋಗ್ಯವು ಚೆನ್ನಾಗಿರುತ್ತದೆ ಎನ್ನುವು ದನ್ನು ಸರ್ಕಾರ ಮನಗಾಣಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೌರಕಾರ್ಮಿಕರ ಬಗ್ಗೆ ನಿರ್ಲಕ್ಷ್ಯಕ್ಕೆ `ಸಮತಾ’ ಖಂಡನೆ
ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ವೈರಸ್ ವ್ಯಾಪಕವಾಗಿ ಹರಡು ತ್ತಿದ್ದರೂ ನಿತ್ಯವೂ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಗುತ್ತಿಗೆ ಹಾಗೂ ಖಾಯಂ ಪೌರಕಾರ್ಮಿಕರಿಗೆ ಗ್ಲೌಸ್, ಮಾಸ್ಕ್, ಗಂಬೂಟ್‍ಗಳನ್ನು ನೀಡದೇ ಬರಿಗೈನಲ್ಲಿ ಕೆಲಸ ಮಾಡಿಸುತ್ತಿರುವ ಮೈಸೂರು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ಸಮತಾ ಸೈನಿಕ ದಳದ ಮೈಸೂರು ಜಿಲ್ಲಾ ಘಟಕ ಖಂಡಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿ.ಗಣೇಶ್, ಒಳಚರಂಡಿ ಕೆಲಸ ಮಾಡುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಪ್ರತಿದಿನ ಸ್ವಚ್ಛತಾ ಕೆಲಸ ನಿರ್ವಹಿಸಿದ ಬಳಿಕ ಪೌರಕಾರ್ಮಿಕರು ನೇರ ಮನೆಗೆ ತೆರಳುವುದರಿಂದ ಅವರ ಕುಟುಂಬದವರಿಗೆ ಸೋಂಕು ಅಥವಾ ರೋಗಗಳು ಹರಡುವ ಅಪಾಯವಿದೆ. ಹೀಗಾಗಿ ಅವರಿಗೆ ಶೌಚಾಲಯ ಮತ್ತು ಸ್ನಾನಕ್ಕೆ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಡಬೇಕು ಎಂದು ಹಲವು ಬಾರಿ ಬೇಡಿಕೆ ಸಲ್ಲಿಸಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಜಿಲ್ಲಾಡ ಳಿತ ನಿಗಾ ವಹಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಪತ್‍ಕುಮಾರ್, ರಾಮು ಸುದ್ದಿಗೋಷ್ಠಿಯಲ್ಲಿದ್ದರು.

Translate »