ವಿಶ್ವಜ್ಞಾನಿ ಯೂತ್ ಅಸೋಸಿಯೇಷನ್‍ನಿಂದ ಆಯುರ್ವೇದಿಕ್ ಗಿಡಗಳ ವಿತರಣೆ
ಮೈಸೂರು

ವಿಶ್ವಜ್ಞಾನಿ ಯೂತ್ ಅಸೋಸಿಯೇಷನ್‍ನಿಂದ ಆಯುರ್ವೇದಿಕ್ ಗಿಡಗಳ ವಿತರಣೆ

May 19, 2020

ಮೈಸೂರು, ಮೇ 18- ನಗರದ ಅಶೋಕಪುರಂನ ವಿಶ್ವಜ್ಞಾನಿ ಯೂತ್ ಅಸೋಸಿ ಯೇಷನ್ ವತಿಯಿಂದ ಆಯುರ್ವೇದಿಕ್ ಗಿಡಮೂಲಿಕೆಗಳನ್ನೊಳಗೊಂಡ ಸಸಿಗಳನ್ನು ಅಶೋಕಪುರಂ ಪೊಲೀಸ್ ಠಾಣೆಗೆ ಉಚಿತವಾಗಿ ವಿತರಿಸಿತು.

ಗಿಡವನ್ನು ಸ್ವೀಕರಿಸಿ ಮಾತನಾಡಿದ ಅಶೋಕಪುರಂ ಪೊಲೀಸ್ ಠಾಣೆಯ ಎಎಸ್‍ಐ ಎಂ.ಬಸವರಾಜು, ಮನುಷ್ಯ ಇಂದು ಜಂಜಾಟಗಳಲ್ಲಿ ಸಿಲುಕಿ, ಒತ್ತಡಗಳಿಂದ ನರಳುತ್ತಿದ್ದಾನೆ. ಈ ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳನ್ನು ಪ್ರತಿನಿತ್ಯವೂ ಕೂಡ ಅಭ್ಯಸಿಸಿಕೊಂಡರೆ ಆರೋಗ್ಯವನ್ನು ಸಮ ತೋಲನದಲ್ಲಿಟ್ಟುಕೊಳ್ಳಬಹುದು ಎಂದು ತಿಳಿಸಿದರು.

ಅಸೋಸಿಯೇಷನ್ ಅಧ್ಯಕ್ಷ ನವೀನ್ ಮಾತನಾಡಿ, ಆಯುರ್ವೇದ ಔಷಧಿಯ ಗುಣಗಳ ನ್ನೊಳಗೊಂಡ ಸಸಿಗಳನ್ನು ಉಚಿತವಾಗಿ ವಿತರಿಸುತ್ತಿದ್ದು ಸಂತೋಷದ ಸಂಗತಿಯಾಗಿದೆ. ಸಾಮಾನ್ಯವಾಗಿ ಮನುಷ್ಯನಲ್ಲಿ ಕಂಡು ಬರುವ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮರೋಗ, ಗಂಟಲು ನೋವು, ಕಫ, ಜ್ವರದಂತಹ ಕಾಯಿಲೆಗಳನ್ನು ಆಯುರ್ವೇದ ಔಷಧಿಗಳಿಂದ ಗುಣಪಡಿಸಿ, ಅಲೌಪತಿ ಔಷಧಿ ಗಳಿಂದಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದೆಂದು ತಿಳಿಸಿದರು. ಟ್ರಸ್ಟ್ ಖಜಾಂಚಿ ವಿಜಯ್‍ಕುಮಾರ್, ವಿಶ್ವಗುರು ಯೂತ್ ಅಸೋಸಿಯೇಷನ್ ಉಪಾಧ್ಯಕ್ಷ ಭರತ್‍ರಾಜ್, ಸದಸ್ಯರಾದ ರಮೇಶ್, ವಿನೋದ್, ವಿಜಯ್, ರವಿ, ಶ್ರೀನಿವಾಸ್, ನವೀನ್‍ಕುಮಾರ್ ಉಪಸ್ಥಿತರಿದ್ದರು.

Translate »