ಬಿಜೆಪಿಯಿಂದ ಸಾವಿರಾರು ಮಂದಿಗೆ ಆಹಾರ, ಪಡಿತರ ವಿತರಣೆ
ಚಾಮರಾಜನಗರ

ಬಿಜೆಪಿಯಿಂದ ಸಾವಿರಾರು ಮಂದಿಗೆ ಆಹಾರ, ಪಡಿತರ ವಿತರಣೆ

April 20, 2020

ಚಾಮರಾಜನಗರ, ಏ.19- ಜಿಲ್ಲೆಯ ಎಲ್ಲಾ 7 ಮಂಡಲಗಳ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಜಿಲ್ಲಾ ದ್ಯಂತ ಸಾವಿರಾರು ಬಡಕುಟುಂಬಗಳಿಗೆ ಆಹಾರ ಪೊಟ್ಟಣ ಹಾಗೂ ಪಡಿತರ ಕಿಟ್ ಗಳನ್ನು ವಿತರಿಸಿದುದಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವ ಕುಮಾರ್ ತಿಳಿಸಿದ್ದಾರೆ. ಲಾಕ್‍ಡೌನ್ ಆದ ದಿನದಿಂದ ಏ.17 ರವರೆಗೂ ಚಾಮ ರಾಜನಗರ, ಗುಂಡ್ಲುಪೇಟೆ, ಯಳಂ ದೂರು, ಕೊಳ್ಳೇಗಾಲ, ಹನೂರು ತಾಲೂಕಿ ನಾದ್ಯಂತ 30 ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣ, 10 ಸಾವಿರಕ್ಕೂ ಹೆಚ್ಚು ಪಡಿತರ ಕಿಟ್, 18 ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ವಿತರಿಸಲಾಗಿದೆ. ಅಲ್ಲದೇ ಪ್ರತಿ ಬೂತ್ನಿಂದ ಕನಿಷ್ಠ 100 ಮಂದಿ ತಲಾ 100 ರೂ.ನಂತೆ ಪ್ರಧಾನ ಮಂತ್ರಿಗಳ ಪರಿಹಾರ ಮನಿಧಿಗೆ ಹಣವನ್ನು ಕಳುಹಿಸಲಾಗಿದೆ ಎಂದು ಮಂಗಲ ಶಿವಕುಮಾರ್ ತಿಳಿಸಿದ್ದಾರೆ.

Translate »