ವಿರಾಜಪೇಟೆ, ಕುಶಾಲನಗರದಲ್ಲಿ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ
ಕೊಡಗು

ವಿರಾಜಪೇಟೆ, ಕುಶಾಲನಗರದಲ್ಲಿ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

April 9, 2020

ವಿರಾಜಪೇಟೆ, ಏ.8- ಕೊರೊನಾ ವೈರಸ್‍ನಿಂದಾಗಿ ಜಿಲ್ಲೆಯಲ್ಲಿ ಅನೇಕ ದಿನ ಗಳಿಂದ ಲಾಕ್ ಡೌನ್ ಆಗಿರುವ ಹಿನ್ನಲೆ ಯಲ್ಲಿ ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ ಅವರು ವಿರಾಜಪೇಟೆ ತಾಲೂಕಿನ 35 ಪತ್ರಕರ್ತರಿಗೆ ತಾಲೂಕು ಕಚೇರಿಯಲ್ಲಿ ಆಹಾರ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ವೈರಸ್‍ನಿಂದ ಕೊಡಗು ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಇದಕ್ಕೆ ಮಾಧ್ಯಮದವರ ಸಹಕಾರ. ಲಾಕ್ ಡೌನ್ ಸಂದರ್ಭ ಪತ್ರಕರ್ತರು ಶಾಂತಿಯುತವಾಗಿ ಜನರಿಗೆ ಸರಕಾರದ ಮಾಹಿತಿಯನ್ನು ಒದಗಿಸುವ ಮೂಲಕ ನೆರವಾಗಿದ್ದಾರೆ. ದೇಶಾದ್ಯಂತ ಮಹಾಮಾರಿ ಯಾಗಿ ಹರಡುತ್ತಿರುವ ಕೊರೊನಾ ವೈರಸ್‍ನ್ನು ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದರು.

ಆಹಾರ ಕಿಟ್ ವಿತರಣೆ ಸಂದರ್ಭ ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್, ಪ.ಪಂ. ಮುಖ್ಯಧಿಕಾರಿ ಎ.ಎಂ.ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಸುಬ್ರಮಣಿ, ನೋಡಲ್ ಅಧಿಕಾರಿ ಡಾ. ತಮ್ಮಯ್ಯ, ಬಿಜೆಪಿಯ ರಘುನಾಣಯ್ಯ, ಪಟ್ಟಣ ಪಂಚಾ ಯಿತಿ ಸದಸ್ಯರಾದ ಹರ್ಷವರ್ಧನ್, ಎಂ.ಕೆ. ದೇಚಮ್ಮ, ಜೂನಾ, ಫಸಿಹಾ ತಬಸಮ್, ಜಲೀಲ್, ಅನಿತಾ, ಮತೀನ್, ರಾಜೇಶ್, ಮುಂತಾದವರು ಉಪಸ್ಥಿತರಿದ್ದರು.

ಕುಶಾಲನಗರದ ವರದಿ: ಪಟ್ಟಣದ ಪತ್ರ ಕರ್ತರ ಮತ್ತು ವಿತರಕ ಬಳಗಕ್ಕೆ ದವಸ ಧಾನ್ಯ ವನ್ನು ಶಾಸಕ ಅಪ್ಪಚ್ಚುರಂಜನ್ ವಿತರಿಸಿ ದರು. ತಾಲೂಕು ರೆಡ್‍ಕ್ರಾಸ್ ಘಟಕ ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆ ವತಿ ಯಿಂದ ಅವಶ್ಯಕತೆ ಹೊಂದಿದ್ದ 13 ಮಂದಿಗೆ ಅಕ್ಕಿ, ಬೇಳೆ, ಸಕ್ಕರೆ ಮತ್ತಿತರ ಪಡಿತರ ವಿತರಣೆ ಮಾಡಲಾಯಿತು. ರೆಡ್‍ಕ್ರಾಸ್ ಸಂಸ್ಥೆಯಿಂದ ಪತ್ರಕರ್ತರಿಗೆ ಸಾನಿಟೈಸರ್, ಮಾಸ್ಕ್, ಸೋಪ್ ಒದಗಿಸಲಾಯಿತು. ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಲೀನಾ ಸಾನಿಟೈಸರ್, ಮಾಸ್ಕ್, ಸೋಪ್ ವಿತರಿಸಿದರು.ರೆಡ್ ಕ್ರಾಸ್ ಜಿಲ್ಕಾಧ್ಯಕ್ಷ ರವೀಂದ್ರ, ತಾಲೂಕು ಅಧ್ಯಕ್ಷ ಎಸ್.ಕೆ.ಸತೀಶ್ ಭಾಗವಹಿಸಿದ್ದರು.

ಪಟ್ಟಣ ಪಂಚಾಯ್ತಿ ಮೂಲಕ ಬಡವರಿಗೆ ಒದಗಿಸುತ್ತಿರುವ ಉಚಿತ ಹಾಲನ್ನು ಶಾಸಕ ರಂಜನ್ ಸಾಂಕೇತಿಕವಾಗಿ ವಿತರಣೆ ಮಾಡಿದರು.

ಪಪಂ ಸದಸ್ಯ ಅಮೃತ್‍ರಾಜ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ಆರೋಗ್ಯಾ ಧಿಕಾರಿ ಉದಯಕುಮಾರ್, ಪ್ರಮುಖರಾದ ಕುಮಾರಪ್ಪ, ಭಾರತೀಶ್, ಉಮಾಶಂಕರ್, ವೈಶಾಖ್, ಆದರ್ಶ್, ಪುಂಡರೀಕಾಕ್ಷ, ಶಿವು ಮತ್ತಿತರರು ಇದ್ದರು.

Translate »