ಮೈಸೂರು ಆಕಾಶವಾಣಿಯ ಆವರಣದಲ್ಲಿ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಣೆ
ಮೈಸೂರು

ಮೈಸೂರು ಆಕಾಶವಾಣಿಯ ಆವರಣದಲ್ಲಿ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಣೆ

May 25, 2020

ಮೈಸೂರು, ಮೇ 24- ಮೈಸೂರು ಆಕಾಶವಾಣಿ (ಎಫ್.ಎಂ 100.6) ಹಾಗೂ ಮೈಸೂರಿನ ಸಮುದ್ಯತ ಶ್ರೋತೃ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರು ಆಕಾಶವಾಣಿಯ ಆವರಣದಲ್ಲಿ ಅಸಹಾಯಕ ಸಂತ್ರಸ್ತರಿಗೆ ದಿನನಿತ್ಯ ಉಪಯೋಗಿಸುವ ಆಹಾರ ಸಾಮಗ್ರಿ ಕಿಟ್ ವಿತರಿಸಲಾಯಿತು.

ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರು ಹಾಗೂ ನಿಲಯದ ಮುಖ್ಯಸ್ಥ ರಾದ ಎಸ್.ಎಸ್.ಉಮೇಶ್, ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ದಿವಾಕರ ಹೆಗಡೆ, ಕಾರ್ಯದರ್ಶಿ ಟಿ.ಎನ್.ರಾಜೇಶ್ವರಿ, ನಿಲಯದ ಅಭಿಯಂತರ ವಿಭಾಗದ ಸಹಾಯಕ ನಿರ್ದೇಶಕರಾದ ರಾಮಾಂಜನಪ್ಪ, ಸಮುದ್ಯತ ಶ್ರೋತೃ ಬಳಗದ ಅಧ್ಯಕ್ಷರಾದ ಕಣ್ಣೂರು. ವಿ.ಗೋವಿಂದಾಚಾರಿ, ಖಜಾಂಚಿ ಕಾಳಿಹುಂಡಿ ಶಿವಕುಮಾರ್, ಸಂಘದ ಸದಸ್ಯರಾದ ಮೈ.ನಾ.ಲೋಕೇಶ್, ವಿಶ್ವನಾಥ್, ಚಂದ್ರಕಲಾ, ರೇಡಿಯೋ ರಮೇಶ್, ಜಯರಾಮ್, ಸ್ವಾಮಿ, ಗದಾಧರ ಭಟ್ ಭಾಗವಹಿಸಿದ್ದರು.

Translate »