ಓಡಿಪಿ ಸಂಸ್ಥೆಯಿಂದ ರೈತರಿಗೆ ಉಚಿತ ಗೊಬ್ಬರ ವಿತರಣೆ
ಕೊಡಗು

ಓಡಿಪಿ ಸಂಸ್ಥೆಯಿಂದ ರೈತರಿಗೆ ಉಚಿತ ಗೊಬ್ಬರ ವಿತರಣೆ

October 22, 2020

ಸಿದ್ದಾಪುರ, ಅ.21- ಕೋವಿಡ್ ಸಮಸ್ಯೆಯಿಂದರೈತರು ಹಲವು ಸಮಸ್ಯೆ ಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಅಭಿವೃದ್ಧಿಯ ಮೂಲಕ ಮುಂದೆ ಬರಲು ಓಡಿಪಿ ಸಂಸ್ಥೆ ಮೈಸೂರು ಹಾಗೂ ಜರ್ಮನಿಯ ಅಂದೇರಿ ಹಿಲ್ಪೆ ಸಂಸ್ಥೆ ಸಹಕಾರದೊಂದಿಗೆ ಸಿದ್ದಾಪುರ, ಮಾಲ್ದಾರೆ, ನೆಲ್ಯಹುದಿಕೇರಿ ಭಾಗದ ಓಡಿಪಿ ಸಂಸ್ಥೆಯ ನೊಂದಾಯಿತ 83 ಫಲಾನು ಭವಿಗಳಿಗಳಾದ ಸಣ್ಣ ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಮಾಡಲಾಯಿತು.

ಚರ್ಚ್ ಹಾಲ್ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಪಂಚಾ ಯಿತಿ ಸದಸ್ಯೆ ಚಿನ್ನಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮಾತ ನಾಡಿ, ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಲವಾರು ಯೋಜನೆಗಳನ್ನು ನೀಡುತ್ತಿದ್ದು ಇದರ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಕೃಷಿ ಅಭಿವೃದ್ಧಿಯೊಂದಿಗೆ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರಲ್ಲದೆ, ಓಡಿಪಿ ಸಂಸ್ಥೆಯ ಸಮಾಜ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಓಡಿಪಿ ಸಂಸ್ಥೆಯ ಸಂಯೋಜಕ ಜಾನ್ ಮಾತನಾಡಿ, ಜಿಲ್ಲೆಯ ಹಲವೆಡೆ ರೈತರು ಹಲವಾರು ಸಮಸ್ಯೆಗಳನ್ನು ಎದುರಿ ಸುತ್ತಿದ್ದು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದಾರೆ. ಸಂಸ್ಥೆಯಲ್ಲಿ ನೊಂದಾಯಿತ ರೈತ ಕುಟುಂಬಗಳಿಗೆ ಜಿಲ್ಲೆ ಯಾದ್ಯಂತ ಹಲವಡೆ ಗೊಬ್ಬರ ವಿತರಿಸ ಲಾಗುತ್ತಿದ್ದು ಇದರ ಪ್ರಯೋಜನ ಪಡೆದು ಕೊಂಡು ಮುಂದೆ ಬರಬೇಕೆಂದರು. ಜಿಲ್ಲಾ ಓಡಿಪಿ ಸಂಯೋಜಕಿ ಜಾಯ್ಸ್ ಮೆನೇಜಸ್ ಮಾತನಾಡಿ ಒಡಿಪಿ ಸಂಸ್ಥೆ ಜಿಲ್ಲೆಯಲ್ಲಿ ನಿರಂತರವಾಗಿ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಹಿಂದುಳಿದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸ್ವ-ಉದ್ಯೋಗ ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಿದೆ. ಜಿಲ್ಲೆ ಯಾದ್ಯಂತ ಸಾವಿರಾರು ಮಂದಿ ಸಂಸ್ಥೆ ಯಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹ ಹಾಗೂ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಜನತೆಯ ಸಂಕಷ್ಟÀ್ಟ ಗಳಿಗೆ ಸ್ಪಂದಿಸುವ ಮೂಲಕ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಕೃಷಿ ಇಲಾಖೆಯ ರಾಮಚಂದ್ರ ಮಾತನಾಡಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು. ಈ ಸಂದರ್ಭ ಓಡಿಪಿ ಸಂಸ್ಥೆಯ ಕಾರ್ಯಕರ್ತೆ ವಿಜಯ ನಾರಾಯಣ ಮಾಲ್ದಾರೆ ಗ್ರಾಪಂ ಮಾಜಿ ಅಧ್ಯಕ್ಷೆ ರಾಣಿ ನೆಲ್ಯಹುದಿಕೇರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸಫಿಯ ಮೊಹಮ್ಮದ್, ಒಕ್ಕೂಟದ ಸದಸ್ಯರು ಗಳಾದ ಉಷಾ, ಪುಷ್ಪ, ವಿಮಲ, ಲೀನಾ, ಚಂದ್ರಿಕಾ ಸೇರಿದಂತೆ ಮತ್ತಿತರರು ಇದ್ದರು

Translate »