ಶಾಸಕ ನಾಗೇಂದ್ರರಿಂದ ದಿನಸಿ ಕಿಟ್ ವಿತರಣೆ
ಮೈಸೂರು

ಶಾಸಕ ನಾಗೇಂದ್ರರಿಂದ ದಿನಸಿ ಕಿಟ್ ವಿತರಣೆ

May 29, 2020

ಮೈಸೂರು, ಮೇ 28(ಪಿಎಂ)- ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಸಹಾಯವಾಗಲೆಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ದಿನಸಿ ಕಿಟ್ ವಿತರಣೆ ಮುಂದುವರೆಸಿದ್ದಾರೆ.

ಗುರುವಾರ ವಾರ್ಡ್ 21ರ ವ್ಯಾಪ್ತಿಯ ಕುಕ್ಕರಹಳ್ಳಿ ಹಾಗೂ ಜನತಾನಗರ ಪ್ರದೇಶದ 750 ಬಡ ಕುಟುಂಬಗಳಿಗೆ ಜನತಾ ನಗರದ ಬಿಸಿಲು ಮಾರಮ್ಮನ ದೇವಸ್ಥಾನದ ಬಳಿ ದಿನಸಿ ಕಿಟ್‍ಗಳನ್ನು ಶಾಸಕರು ವಿತರಣೆ ಮಾಡಿದರು.

ವಾರ್ಡ್‍ನ ಪಾಲಿಕೆ ಸದಸ್ಯೆ ಸಿ.ವೇದಾವತಿ, ಬಿಜೆಪಿ ಚಾಮರಾಜ ಕ್ಷೇತ್ರ ಅಧ್ಯಕ್ಷ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರಾದ ಶಿವಶಂಕರ್, ಶ್ರೀನಿವಾಸ್, ದಿನೇಶ್‍ಗೌಡ, ಸೋಮಶೇಖರ್ ರಾಜ್ ಅರಸ್, ನವೀನ್, ಚಂದ್ರಪ್ಪ, ಪೂರ್ಣಿಮ ಚಂದ್ರಪ್ಪ, ನೇಹಾ ಮತ್ತಿತರರಿದ್ದರು.

Translate »