10 ದಿನದಲ್ಲಿ ಪಾಲಿಕೆಯಿಂದ 6.5 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಮೈಸೂರು

10 ದಿನದಲ್ಲಿ ಪಾಲಿಕೆಯಿಂದ 6.5 ಕೋಟಿ ಆಸ್ತಿ ತೆರಿಗೆ ಸಂಗ್ರಹ

May 29, 2020

ಮೈಸೂರು, ಮೇ28(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಡುವೆಯೂ ಕಳೆದ 10 ದಿನದಲ್ಲಿ ಮೈಸೂರು ಮಹಾ ನಗರ ಪಾಲಿಕೆ 6.5 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದೆ. ಜುಲೈ 31ರವರೆಗೆ ಶೇ.5ರಷ್ಟು ರಿಯಾಯಿತಿ ಯೊಂದಿಗೆ ಆಸ್ತಿ ತೆರಿಗೆ ಪಾವತಿ ಸಲು ಸರ್ಕಾರ ಅವಕಾಶ ನೀಡಿ ರುವುದರಿಂದ ನಾಗರಿಕರು ಮೈಸೂ ರಿನ ಎಲ್ಲಾ 9 ಪಾಲಿಕೆ ವಲಯ ಕಚೇರಿಗಳಲ್ಲಿ ನಿತ್ಯ ಸಾಲುಗಟ್ಟಿ ನಿಂತು ತೆರಿಗೆ ಪಾವತಿಸುತ್ತಿ ದ್ದಾರೆ. ವರ್ಷಕ್ಕೆ ಸುಮಾರು 150 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಜುಲೈ 31ರೊಳಗೆ ಸುಮಾರು 100 ಕೋಟಿ ರೂ. ತೆರಿಗೆ ಸಂಗ್ರಹ ವಾಗುವ ನಿರೀಕ್ಷೆ ಇದೆ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್-19 ಲಾಕ್‍ಡೌನ್ ಇರುವುದರಿಂದ ಈ ಬಾರಿ ಅತ್ಯಲ್ಪ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುತ್ತಿದೆ. ಕಳೆದ ವರ್ಷ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ದಿನಕ್ಕೆ 2.5 ಕೋಟಿ ಹಣ ತೆರಿಗೆ ರೂಪದಲ್ಲಿ ಪಾಲಿಕೆಗೆ ಸಂದಾಯವಾಗುತ್ತಿತ್ತು ಎಂದು ಅಧಿಕಾರಿ ಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಎಲ್ಲಾ 9 ವಲಯ ಕಚೇರಿಗಳಲ್ಲಿ ಹೆಚ್ಚು ಸಿಬ್ಬಂದಿ ನಿಯೋಜಿಸಿ ತೆರಿಗೆ ಪಾವತಿಸಲು ಬರುವ ಆಸ್ತಿ ಮಾಲೀಕರಿಗೆ ಸಹಾಯ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಬ್ಯಾಂಕ್ ಕೌಂಟರ್‍ಗಳಲ್ಲಿ ಹಣ ಪಾವತಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Translate »