ಮೈಸೂರಲ್ಲಿ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಮೈಸೂರಲ್ಲಿ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

June 17, 2021

ಮೈಸೂರು,ಜೂ.16(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಕಲಾವಿದರಿಗೆ ಬುಧವಾರ ಮೈಸೂರಿನ ಕಲಾಮಂದಿರದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ದಿನಸಿ ಕಿಟ್ ವಿತರಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಇಂದು ಬೆಳಿಗ್ಗೆ ಆಯೋಜಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮ ಶೇಖರ್ ಕೊಡುಗೆ ನೀಡಿದ್ದ 520 ದಿನಸಿ ಕಿಟ್‍ಗಳಲ್ಲಿ 120 ಮಂದಿ ಚಲನಚಿತ್ರ ರಂಗದ ಸಹಕಲಾವಿದರು, 400 ಮಂದಿ ರಂಗಭೂಮಿ ಹಾಗೂ ಜಾನಪದ ಕಲಾವಿದರಿಗೆ ವಿತರಿಸಲಾಯಿತು.

ಮೈಸೂರು ನಗರದಲ್ಲಿ 2 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ 4500 ಮಂದಿ ಕಲಾವಿದರಿದ್ದು, ಹಂತ ಹಂತವಾಗಿ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಮೊದಲ ಹಂತದಲ್ಲಿ 600ಕ್ಕೂ ಹೆಚ್ಚು ಮಂದಿಗೆ ದಿನಸಿ ಕಿಟ್ ವಿತರಿಸಲಾಗಿದ್ದು, ಎರಡನೇ ಹಂತದಲ್ಲಿ 520 ಮಂದಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾವಿದರಿಗೆ ದಿನಸಿ ಕಿಟ್ ನೀಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಧರ್Àರಿಸಿದೆ.

ಮಳೆಯ ನಡುವೆಯೂ ಇಂದು ಬೆಳಿಗ್ಗೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಮಂದಿ ಕಲಾ ವಿದರು ದಿನಸಿ ಕಿಟ್ ಪಡೆಯಲು ಆಗಮಿಸಿದ್ದರು. ಮೊದಲು ಬಂದವರಿಗೆ ಆದ್ಯತೆ ನೀಡಿ ಟೋಕನ್ ವಿತರಿಸಲಾಗಿತ್ತು. ಬಳಿಕ ಕಲಾಮಂದಿರಕ್ಕೆ ಬಂದ ಸಚಿ ವರು ಸಾಂಕೇತಿಕವಾಗಿ ದಿನಸಿ ಕಿಟ್ ವಿತರಿಸಿದರು. ಮುಂದಿನ ದಿನಗಳÀಲ್ಲಿ ಅಗತ್ಯಬಿದ್ದರೆ ಮತ್ತಷ್ಟು ಕಲಾ ವಿದರಿಗೆ ದಿನಸಿ ಕಿಟ್ ಕೊಡುವುದಾಗಿ ಭರವಸೆ ನೀಡಿದರು.
400 ಮಂದಿಗೆ ಲಸಿಕೆ: ಮುಂಚೂಣಿ ಕಾರ್ಯ ಕರ್ತರ ಪಟ್ಟಿಯಲ್ಲಿ ಅನುಬಂಧ-2ರಲ್ಲಿ ಕಲಾವಿದ ರನ್ನು ಸೇರಿಸಿ, 18-44 ವರ್ಷದೊಳಗಿನವರಿಗೆ ಲಸಿಕೆ ಹಾಕಲು ಸರ್ಕಾರ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕಲಾವಿದರಿಗಾಗಿ ಆಯೋ ಜಿಸಲಾಗಿದ್ದ ಲಸಿಕಾ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು.

ಮೊದಲ ಹಂತದಲ್ಲಿ 400 ಮಂದಿಗೆ ಲಸಿಕೆ ಹಾಕ ಲಾಯಿತು. ಲಸಿಕೆ ಪಡೆಯಲು ಕಲಾವಿದರು ಮುಗಿ ಬಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಈ ವೇಳೆ ಮಾತನಾಡಿ, ಈಗಾಗಲೇ ಬೇರೆ ಬೇರೆ ಸ್ಥಳದಲ್ಲಿ ಹಲವು ಕಲಾ ವಿದರು ಲಸಿಕೆ ಪಡೆದುಕೊಂಡಿದ್ದಾರೆ. ಇಂದು 400 ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಬೇಡಿಕೆ ಬಂದರೆ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಮತ್ತಷ್ಟು ಕಲಾವಿದ ರಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿ ದರಲ್ಲದೆ, ಈ ಹಿಂದೆ ಮುಖಂಡರಾದ ಹರೀಶ್‍ಗೌಡರು ನೀಡಿದ್ದ 300 ಕಿಟ್, ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೀಡಿದ್ದ 300 ಕಿಟ್ ವಿತರಿಸಲಾಗಿತ್ತು. ಇನ್ನಷ್ಟು ದಿನಸಿ ಕಿಟ್ ಕೊರತೆಯಿದ್ದು, ಮುಂದಿನ ದಿನದಲ್ಲಿ ಎಲ್ಲಾ ಕಲಾವಿದರಿಗೂ ದಿನಸಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಫಣೀಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಪಿ ಗೀತಾ ಪ್ರಸನ್ನ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ಸುರೇಶ್ ಬಾಬು, ಗೌರವ ಸಲಹೆಗಾರರಾದ ರಾಜ ಶೇಖರ ಕದಂಬ ರಂಗಕರ್ಮಿಗಳಾದ ಬಸವಲಿಂಗಯ್ಯ, ರಾಮಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »