ಮೈಸೂರು, ಜೂ.16(ಆರ್‍ಕೆಬಿ)- ಮೈಸೂರಲ್ಲಿ ಕೊರೊನಾ ಸೋಂಕಿನ ಸಾವಿನ ಸಂಖ್ಯೆ ಕುರಿತ ಆರೋಪ ಮತ್ತು ಗೊಂದಲಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ. ಅವರು, ಬುಧವಾರ ಜಿಪಂ ಸಭಾಂಗಣ ದಲ್ಲಿ ಸಚಿವರ ಸಮ್ಮುಖದಲ್ಲಿ ಐದು ಕಾರಣ ಗಳನ್ನು ನೀಡಿದರು.
ಒಟ್ಟಾರೆ ಸಂಖ್ಯೆಯಲ್ಲಿ ಪ್ರತಿನಿತ್ಯ 4, 5, 6 ಹೀಗೆ ಸಾವುಗಳು ಪ್ರತಿದಿನ ಜಾಸ್ತಿಯಾಗು ತ್ತಿವೆ. ಸಾವುಗಳು ಆಗುವುದೇ ಯಾವುದೋ ದಿನ, ವರದಿಯಾಗು ವುದೇ ಮತ್ತೊಂದು ದಿನ. ಹೀಗಾಗಿ ಕೋವಿಡ್ ಸಾವುಗಳಿಗೆ ಸಂಬಂ ಧಿಸಿದಂತೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಸಾವುಗಳ ವರದಿಗಳನ್ನು ಈಗ ತರಿಸಿಕೊಳ್ಳುತ್ತಿದ್ದೇವೆಯೇ ಹೊರತು ಈಗಷ್ಟೇ ಸಾವುಗಳು ಜಾಸ್ತಿ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವುಗಳ ವರದಿ ವಿಳಂಬ ಮತ್ತು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಲು ವಿಳಂಬವಾಗಿದ್ದು ಸಹ ಕಾರಣವಾಗಿದೆ. ಕೋವಿಡ್ ಪಾಸಿಟಿವ್ ದೃಢೀಕರಿಸುವ ಮೊದಲು ಸಾವುಗಳು ಸಂಭವಿಸಿದಲ್ಲಿ, ಚಿಕಿತ್ಸೆಯ ಸರದಿ ನಿರ್ಧಾರದ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಎರಡನೆಯ ಕಾರಣವೆಂದರೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸಾವುಗಳನ್ನು ತಡವಾಗಿ ವರದಿ ಮಾಡುತ್ತಿವೆ.
ಮೂರನೆಯ ಕಾರಣವೆಂದರೆ, ಕೋವಿಡ್ ಪಾಸಿಟಿವ್ ವ್ಯಕ್ತಿಯು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮೃತಪಟ್ಟ ಮಾಹಿತಿಯನ್ನು ಕೋವಿಡ್ ವಾರ್ ರೂಂ ಮೂಲಕ ಸಂಗ್ರಹಿಸಲಾಗುತ್ತಿದೆ. ಆ ಪ್ರಕ್ರಿಯೆಯೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಖ್ಯೆಯ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ನಡೆಸುವುದು ನಾಲ್ಕನೆಯ ಕಾರಣ. ನಾವು ಕಡಿಮೆ ಪರೀಕ್ಷೆಗಳನ್ನು ನಡೆಸಿದರೆ, ಸಾವಿನ ಸಂಖ್ಯೆ ಕಡಿಮೆ ಇರುತ್ತದೆ. ಒಂದೊಮ್ಮೆ ನಾವು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದಾಗ, ಸ್ವಾಭಾವಿಕ ವಾಗಿ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚು ಇರುತ್ತದೆ ಎಂದು ಸ್ಪಷ್ಪಪಡಿಸಿದರು. ಹೀಗಾಗಿ ಕೋವಿಡ್ ಸಾವುಗಳಿಗೆ ಸಂಬಂ ಧಿಸಿದಂತೆ ಯಾರೂ ಆತಂಕಪಡುವ ಅಗÀತ್ಯವಿಲ್ಲ. ನಾವು ಸಾವಿನ ವರದಿಗಳನ್ನು ತರಿಸಿಕೊಳ್ಳುತ್ತಿದ್ದೇವೆಯೇ ಹೊರತು ಜಾಸ್ತಿ ಸಾವುಗಳು ಆಗುತ್ತಿಲ್ಲ ಎಂದು ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದರು.