ಬ್ರಾಹ್ಮಣ ಸಂಘದಿಂದ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಬ್ರಾಹ್ಮಣ ಸಂಘದಿಂದ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್ ವಿತರಣೆ

April 27, 2020

ಮೈಸೂರು,ಏ.26(ಆರ್‍ಕೆಬಿ)- ಅಕ್ಷಯ ತೃತೀಯ ಅಂಗವಾಗಿ ಮೈಸೂರಿನ ಇಟ್ಟಿಗೆ ಗೂಡಿನಲ್ಲಿರುವ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಬಡ ಬ್ರಾಹ್ಮಣರ ಕುಟುಂಬಕ್ಕೆ ದಿನಸಿ ಕಿಟ್ ವಿತರಿ ಸಲಾಯಿತು. ಸಂಘದ ಕಚೇರಿಯಲ್ಲಿ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದ ಬಳಿಕ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ವಿಪ್ರ ಬಾಂಧ ವರು ಮಂಗಳವಾರ ಆದಿಶಂಕರಾಚಾ ರ್ಯರು ಹಾಗೂ ರಾಮಾನುಜಾಚಾ ರ್ಯರ ಜಯಂತಿಯನ್ನು ನಿಮ್ಮ ಮನೆಗಳ ಲ್ಲಿಯೇ ಆಚರಿಸಿ, ಸಂಕಷ್ಟದಲ್ಲಿರುವ ಜನ ರಿಗೆ ಸಹಾಯ ಮಾಡುವ ಮೂಲಕ ಜಗ ದ್ಗುರುಗಳ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಅಪೂರ್ವ ಸುರೇಶ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್, ರಾಜೇಂದ್ರಪ್ರಸಾದ್ ಇನ್ನಿತರರಿದ್ದರು.

Translate »